ಶಂಕಾಸ್ಪದ ಬೌಲಿಂಗ್: ದ.ಆಫ್ರಿಕಾ ಸ್ಪಿನ್ನರ್ ಫಂಗಿಸೋ ಅಮಾನತು

ದಕ್ಷಿಣ ಆಫ್ರಿಕಾದ ಎಡಗೈ ಸ್ಪಿನ್ನರ್ ಆರನ್ ಫಂಗಿಸೋ ಬೌಲಿಂಗ್ ಶೈಲಿ ನಿಯಮಬಾಹಿರವಾಗಿದೆ ಎಂದು ಹೇಳಿದ ಐಸಿಸಿ ಅವರನ್ನು ಅಮಾನತುಗೊಳಿಸಿದೆ...
ದಕ್ಷಿಣ ಆಫ್ರಿಕಾದ ಎಡಗೈ ಸ್ಪಿನ್ನರ್ ಆರನ್ ಫಂಗಿಸೋ (ಸಂಗ್ರಹ ಚಿತ್ರ)
ದಕ್ಷಿಣ ಆಫ್ರಿಕಾದ ಎಡಗೈ ಸ್ಪಿನ್ನರ್ ಆರನ್ ಫಂಗಿಸೋ (ಸಂಗ್ರಹ ಚಿತ್ರ)

ಜೊಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದ ಎಡಗೈ ಸ್ಪಿನ್ನರ್ ಆರನ್ ಫಂಗಿಸೋ ಬೌಲಿಂಗ್ ಶೈಲಿ ನಿಯಮಬಾಹಿರವಾಗಿದೆ ಎಂದು ಹೇಳಿದ ಐಸಿಸಿ ಅವರನ್ನು ಅಮಾನತುಗೊಳಿಸಿದೆ.

ಐಸಿಸಿಯ ತಜ್ಞರ ಪ್ರಕಾರ ದಕ್ಷಿಣ ಆಫ್ರಿಕಾದ ಎಡಗೈ ಸ್ಪಿನ್ನರ್ ಆರನ್ ಫಂಗಿಸೋ ಬೌಲಿಂಗ್ ಶೈಲಿ ನಿಯಮ ಬಾಹಿರವಾಗಿದ್ದು, ಅವರ ಕೈ 15 ಡಿಗ್ರಿಗಿಂತಲೂ ಹೆಚ್ಚಾಗಿ ಬಾಗುತ್ತಿದೆ ಎಂದು  ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲೆರಡು ಪಂದ್ಯದಿಂದ ಅಮಾನತು ಮಾಡಲಾಗಿದೆ.

ಈ ಹಿಂದೆ ಫಂಗಿಸೋ ಬೌಲಿಂಗ್ ಶೈಲಿ ಕುರಿತು ಅನುಮಾನ ವ್ಯಕ್ತಪಡಿಸಿದ್ದ ಐಸಿಸಿ, ಅವರ ಬೌಲಿಂಗ್ ಪರೀಕ್ಷೆಗೆ ಮುಂದಾಗಿತ್ತು.

ಐಸಿಸಿಯ ಹೇಳಿಕೆ ಬೆನ್ನಲ್ಲೇ ಕೆಲ ಸ್ವತಂತ್ರ ಪರೀಕ್ಷೆಗೆ ಒಳಗಾಗಿದ್ದ ಬೌಲರ್ ಟಿ20 ವಿಶ್ವಕಪ್ ಆಡುವ ವಿಶ್ವಾಸದಲ್ಲಿದ್ದಾರೆ. ಐಸಿಸಿ ಮಾನ್ಯತೆ ಇರುವ ಪ್ರಿಟೋರಿಯಾದಲ್ಲಿ ಕಳೆದ ಶುಕ್ರವಾರ ಪರೀಕ್ಷೆ  ನಡೆದಿದ್ದು, -ಫಂಗಿಸೋ ಎಲ್ಲ ರೀತಿಯ ಎಸೆತಗಳೂ ಐಸಿಸಿ ನಿಯಮದ ಅಡಿಯಲ್ಲಿ ಬರಲಿದೆ ಎಂದು ಮಂಗಳವಾರ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ತಿಳಿಸಿದೆ. ಶುಕ್ರವಾರದಿಂದ ಡರ್ಬನ್‌ನಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದ್ದು, ದಕ್ಷಿಣ ಆಫ್ರಿಕಾ ತಂಡಕ್ಕೆ ಫಂಗಿಸೋ ಅಲಭ್ಯರಾಗಲಿದ್ದಾರೆ.

ಇದೀಗ ಐಸಿಸಿ ನಿಲುವಿನಿಂದಾಗಿ ಇದರಿಂದಾಗಿ 32 ವರ್ಷದ ಸ್ಪಿನ್ನರ್ ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಆಡುವುದು ಅನುಮಾನವಾಗಿದ್ದು, ಆಫ್ರಿಕಾ ತಂಡದ ಅಭಿಯಾನದ ಮೇಲೆ ಪರಿಣಾಮ  ಬೀರುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com