ಏಷ್ಯಾಕಪ್: ಲಂಕಾ ವಿರುದ್ಧ ಗೆದ್ದು ಮಾನ ಉಳಿಸಿಕೊಂಡ ಪಾಕಿಸ್ತಾನ

ಏಷ್ಯಾಕಪ್ ಟಿ20 ಸರಣಿಯಲ್ಲಿ ಭಾರತ ಮತ್ತು ಬಾಂಗ್ಲಾದೇಶಗಳ ವಿರುದ್ಧ ಸೋತು ತೀವ್ರ ಮುಖಭಂಗಕ್ಕೀಡಾಗಿದ್ದ ಪಾಕಿಸ್ತಾನ ಕ್ರಿಕೆಟ್ ತಂಡ ಸರಣಿಯ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಗೆದ್ದು ಮಾನ ಉಳಿಸಿಕೊಂಡಿದೆ...
ಲಂಕಾ ಎದುರು ಪಾಕಿಸ್ತಾನಕ್ಕೆ ಜಯ (ಚಿತ್ರಕೃಪೆ: ಕ್ರಿಕ್ ಇನ್ಫೋ)
ಲಂಕಾ ಎದುರು ಪಾಕಿಸ್ತಾನಕ್ಕೆ ಜಯ (ಚಿತ್ರಕೃಪೆ: ಕ್ರಿಕ್ ಇನ್ಫೋ)

ಮೀರ್ ಪುರ: ಏಷ್ಯಾಕಪ್ ಟಿ20 ಸರಣಿಯಲ್ಲಿ ಭಾರತ ಮತ್ತು ಬಾಂಗ್ಲಾದೇಶಗಳ ವಿರುದ್ಧ ಸೋತು ತೀವ್ರ ಮುಖಭಂಗಕ್ಕೀಡಾಗಿದ್ದ ಪಾಕಿಸ್ತಾನ ಕ್ರಿಕೆಟ್ ತಂಡ ಸರಣಿಯ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಗೆದ್ದು ಮಾನ ಉಳಿಸಿಕೊಂಡಿದೆ.

ನಿನ್ನೆ ಮೀರ್ ಪುರದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಶ್ರೀಲಂಕಾ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. ಈ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಶ್ರೀಲಂಕಾ ತಂಡದ ಆರಂಭಿಕರು ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್ ಗೆ ಬರೊಬ್ಬರಿ 110 ರನ್ ಪೇರಿಸಿದ ಚಾಂಡಿಮಾಲ್ ಮತ್ತು ದಿಲ್ ಶಾನ್ ಶ್ರೀಲಂಕಾಗೆ ಬೃಹತ್ ಮೊತ್ತದ ವಿಶ್ವಾಸ ಮೂಡಿಸಿತು. ಚಾಂಡಿಮಾಲ್ 58 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದರು. ಆದರೆ ಈ ಹಂತದಲ್ಲಿ ಕೊಂಚ ಆತುರ ತೋರಿದ ಚಾಂಡಿಮಾಲ್ ವಹಾಬ್ ರಿಯಾಜ್ ಬೌಲಿಂಗ್ ನಲ್ಲಿ ಔಟ್ ಆದರು. ಆದರೆ ಈ ಹಂತದಲ್ಲಿ ಏಕಾಂಗಿ ಹೋರಾಟ ಮುಂದುವರೆಸಿದ ದಿಲ್ಶಾನ್ (75 ರನ್)ಲಂಕಾ ಉತ್ತಮ ಕಲೆಹಾಕುವಲ್ಲಿ ನೆರವಾದರು.

ಚಾಂಡಿಮಾಲ್ ಬಳಿಕ ಬಂದ ಜಯಸೂರ್ಯ (4), ಕಪುಗಡೇರಾ(2), ಶನಕಾ (0) ಯಾರೂ ಕೂಡ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲದೆ ಶ್ರೀಲಂಕಾದ ಬೃಹತ್ ಮೊತ್ತಕ್ಕೆ ಬ್ರೇಕ್ ಹಾಕಿದರು. ಅಂತಿಮವಾಗಿ ಶ್ರೀಲಂಕಾ ನಿಗದಿತ 20 ಓವರ್ ಗಳಲ್ಲಿ 150 ರನ್ ಸವಾಲಿನ ಮೊತ್ತ ಕಲೆ ಹಾಕಿತು.

ಈ ಮೊತ್ತವನ್ನು ಬೆನ್ನುಹತ್ತಿದ್ದ ಪಾಕಿಸ್ತಾನಕ್ಕೆ ಉಮರ್ ಅಕ್ಮಲ್ (48 ರನ್), ಶರ್ದೀಲ್ ಖಾನ್ (31ರನ್) ಮತ್ತು ಸರ್ಫರಾಜ್ ಅಹ್ಮದ್ (38 ರನ್) ಉತ್ತಮ ಬ್ಯಾಟಿಂಗ್ ಮಾಡುವ ಮೂಲಕ ಗೆಲುವಿಗೆ ಕಾರಣರಾದರು. ಅಂತಿಮವಾಗಿ ಪಾಕಿಸ್ತಾನ 19.2 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 151 ರನ್ ಗಳಿಸುವ ಮೂಲಕ ತನ್ನ ಕೊನೆಯ ಪಂದ್ಯವನ್ನು ಗೆದ್ದು ಮಾನ ಉಳಿಸಿಕೊಂಡಿತು. 48 ರನ್ ಗಳಿಸಿದ ಪಾಕಿಸ್ತಾನದ ಉಮರ್ ಅಕ್ಮಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com