ಸರ್ದಾರ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ತನಿಖೆಗೆ ತಂಡ ರಚನೆ

ಭಾರತ ಹಾಕಿ ತಂಡದ ನಾಯಕ ಸರ್ದಾರ್ ಸಿಂಗ್ ಅವರ ಮೇಲೆ ಕೇಳಿಬಂದಿರುವ ಲೈಂಗಿಕ ಕಿರುಕುಳ ಆರೋಪ ಪ್ರಕರಣ...
ಸರ್ದಾರ್ ಸಿಂಗ್
ಸರ್ದಾರ್ ಸಿಂಗ್
Updated on
ಲೂಧಿಯಾನ: ಭಾರತ ಹಾಕಿ ತಂಡದ ನಾಯಕ ಸರ್ದಾರ್ ಸಿಂಗ್ ಅವರ ಮೇಲೆ ಕೇಳಿಬಂದಿರುವ ಲೈಂಗಿಕ ಕಿರುಕುಳ ಆರೋಪ ಪ್ರಕರಣ ಕುರಿತು ತನಿಖೆ ನಡೆಸಲು ತಂಡ ರಚನೆ ಮಾಡಲಾಗಿದೆ.
ಲೂಧಿಯಾನದ ಪೊಲೀಸ್ ಕಮೀಷನರ್ ಪರ್ಮರಾಜ್ ಸಿಂಗ್ ಅವರು ಪ್ರಕರಣದ ತನಿಖೆ ನಡೆಸಲು ಮೂವರು ಸದಸ್ಯರನ್ನು ಒಳಗೊಂಡ ತಂಡವನ್ನು ರಚಿಸಿದ್ದಾರೆ. ಎಡಿಸಿಪಿ ಸತ್ಬೀರ್ ಸಿಂಗ್ ಅತ್ವಾಲ್ ಅರು ತಂಡದ ಮುಖ್ಯಸ್ಥರಾಗಿದ್ದಾರೆ.
ಸರ್ದಾರ್ ಜೊತೆ ನನ್ನ ನಿಶ್ಚಿತಾರ್ಥವಾಗಿತ್ತು, ಆದರೆ, ಈಗ ಅವರು ಮದುವೆಯಾಗಲು ನಿರಾಕರಿಸುತ್ತಿದ್ದಾರೆ. ಇದರಿಂದ ನನಗೆ ಅನ್ಯಾಯವಾಗಿದೆ. ಅಷ್ಟೇ ಅಲ್ಲದೇ ಅವರು ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಇಂಗ್ಲೆಂಡ್ ನ 19 ವರ್ಷದ ಒಳಗಿನವರ ಹಾಕಿ ತಂಡದಲ್ಲಿರುವ ಭಾರತದ ಮೂಲದ ಆಟಗಾರ್ತಿ ಸರ್ದಾರ್ ಸಿಂಗ್ ವಿರುದ್ಧ ದೂರು ದಾಖಲಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com