
ನವದೆಹಲಿ: ‘ಸಚಿನ್ ತೆಂಡೂಲ್ಕರ್ ಯಾರೆಂದು ಗೊತ್ತಿಲ್ಲ’ ಎಂದು ಹೇಳುವ ಮೂಲಕ ಭಾರತದ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಟೆನಿಸ್ ತಾರೆ ಮರಿಯಾ ಶರಪೋವಾ ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಟ್ವಿಟರಿಗರ ಆಹಾರವಾಗಿದ್ದಾರೆ.
ಡೋಪಿಂಗ್ ಟೆಸ್ಟ್ ನಲ್ಲಿ ವಿಫಲರಾಗಿ ಟೆನಿಸ್‌ನಿಂದ ತಾತ್ಕಾಲಿಕ ನಿಷೇಧಕ್ಕೊಳಪಟ್ಟಿರುವ ರಷ್ಯಾದ ಆಟಗಾರ್ತಿ ಶರಪೋವಾಗೆ ಕ್ರಿಕೆಟ್ ಅಭಿಮಾನಿಗಳು ಮತ್ತೆ ಕಾಲೆಳೆಯುವ ಟ್ವೀಟ್‌ಗಳ ಬಾಣ ಬಿಟ್ಟಿದ್ದಾರೆ. ಈ ಮೂಲಕ ಸಚಿನ್‌ಗೆ ಮಾಡಿದ್ದ ಅವಮಾನಕ್ಕೆ ತಿರುಗೇಟು ನೀಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಕೆಲವರು ಸಚಿನ್ ಯಾರೆಂದು ಕೇಳಿದ ದಿನವೂ ಶರಪೋವಾ ಡ್ರಗ್ಸ್ ಸೇವಿಸಿದ್ದರು ಎಂದು ಹೇಳಿದರೆ. ಮತ್ತೆ ಕೆಲವರು ಸಚಿನ್ ಯಾರೆಂದು ಕೇಳಿದ ಪರಿಣಾಮ ಆಕೆ ಡೋಪಿಂಗ್ ನಲ್ಲಿ ಸಿಕ್ಕಿಬಿದ್ದು ನಿಷೇಧಕ್ಕೆ ಒಳಗಾಗಿದ್ದಾರೆ ಎಂದು ಹೇಳಿದ್ದಾರೆ. ಮತ್ತೆ ಕೆಲವರು "ತೆಂಡೂಲ್ಕರ್ ಯಾರೆಂದು ಕೇಳಿದ್ದ ಆಕೆಯನ್ನು ಈಗ ಡೋಪಿಂಗ್ ಕಳಂಕಿತೆ ಎಂದು ನೆನಪಿಸಿಕೊಳ್ಳುವಂತಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.
2014ರ ವಿಂಬಲ್ಡನ್ ಟೂರ್ನಿ ವೇಳೆ ಶರಪೋವಾಗೆ ಮಾಜಿ ಕ್ರಿಕೆಟಿಗ ತೆಂಡೂಲ್ಕರ್ ಕುರಿತು ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಶರಪೋವಾ ‘ಸಚಿನ್ ತೆಂಡುಲ್ಕರ್ ಯಾರೆಂದು ಗೊತ್ತಿಲ್ಲ’ ಎಂದು ಹೇಳಿದ್ದು ಕ್ರಿಕೆಟ್ ಅಭಿಮಾನಿಗಳನ್ನು ಕೆರಳಿಸಿತ್ತು. ಒಂದೂವರೆ ವರ್ಷದ ಬಳಿಕ ಸಚಿನ್ ಅಭಿಮಾನಿಗಳು ಮತ್ತೆ ಶೆರ್ಪಿ ಮಾತಿಗೆ ತಿರುಗೇಟು ಕೊಟ್ಟಿದ್ದಾರೆ.
ಮಾರ್ಚ್ 12ರಿಂದ ಐಟಿಎಫ್ ಶರಪೋವಾಗೆ ನಿಷೇಧ ಹೇರಿದ ಬೆನ್ನಲ್ಲೇ ಟ್ವಿಟರ್‌ನಲ್ಲಿ ‘ಹೂ ಈಸ್ ಸಚಿನ್ ತೆಂಡೂಲ್ಕರ್’ ಎನ್ನುವ ಹ್ಯಾಶ್‌ಟ್ಯಾಗ್‌ನಲ್ಲಿ ಟ್ರೆಂಡ್ ಸ್ಟೃಷ್ಟಿಯಾಗಿದೆ.
ಟ್ವಿಟರ್ ನಲ್ಲಿ ಬಂದ ಕೆಲ ಕುತೂಹಲ ಪ್ರತಿಕ್ರಿಯೆಗಳು ಈ ರೀತಿ ಇವೆ.
#whoissachintendulkar who is sharapova? Tennis was her life and Tennis was just his elbow .
Advertisement