ವಿವಾದಿತ ಬ್ಯಾನರ್ ಹಾಕಿದ ರ್ಯಾಪಿಡ್ ವಿಯೆನ್ನಾ ತಂಡಕ್ಕೆ 22 ಸಾವಿರ ಡಾಲರ್ ದಂಡ..!

ವಲೆನ್ಷಿಯಾ ವಿರುದ್ಧ ಫುಟ್ ಬಾಲ್ ಮ್ಯಾಚ್ ವೇಳೆ ವಿವಾದಿತ ಬ್ಯಾನರ್ ಹಾಕಿದ ಹಿನ್ನಲೆಯಲ್ಲಿ ರ್ಯಾಪಿಡ್ ವಿಯೆನ್ನಾ ತಂಡಕ್ಕೆ ಭಾರಿ ಪ್ರಮಾಣದ ದಂಡ ವಿಧಿಸಲಾಗಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಿಯೆನ್ನಾ: ವಲೆನ್ಷಿಯಾ ವಿರುದ್ಧ ಫುಟ್ ಬಾಲ್ ಮ್ಯಾಚ್ ವೇಳೆ ವಿವಾದಿತ ಬ್ಯಾನರ್ ಹಾಕಿದ ಹಿನ್ನಲೆಯಲ್ಲಿ ರ್ಯಾಪಿಡ್ ವಿಯೆನ್ನಾ ತಂಡಕ್ಕೆ ಭಾರಿ ಪ್ರಮಾಣದ ದಂಡ ವಿಧಿಸಲಾಗಿದೆ.

ಯೂರೋಪಿಯನ್ ಫುಟ್ ಬಾಲ್ ಲೀಗ್ ನಿಮಿತ್ತ ಕಳೆದ ಫೆಬ್ರವರಿ 25ರಂದು ವಿಯೆನ್ನಾದ ಅರ್ನ್ಸ್ಟ್ ಹ್ಯಾಪೆಲ್ ಕ್ರೀಡಾಂಗಣದಲ್ಲಿ ನಡೆದ ವಲೆನ್ಷಿಯಾ ತಂಡದ ವಿರುದ್ಧದ ಪಂದ್ಯದ ವೇಳೆ ರ್ಯಾಪಿಡ್  ವಿಯೆನ್ನಾ ತಂಡ ಅಸಂವಿಧಾನಿಕ ಭಾಷೆಯ ಮತ್ತು ಅಸಭ್ಯ ಬ್ಯಾನರ್ ಹಾಕಿತ್ತು. ಇದು ಯೂರೋಪಿಯನ್ ಫುಟ್ ಬಾಲ್ ಸಂಸ್ಥೆಯ ಕೆಂಗಣ್ಣಿಗೆ ಗುರಿಯಾಗಿ ಇದೀಗ ರ್ಯಾಪಿಡ್ ವಿಯೆನ್ನಾ ಸಂಸ್ಥೆ  ಭಾರಿ ಪ್ರಮಾಣದ ದಂಡ ತೆರುವಂತಾಗಿದೆ.

ಮೂಲಗಳ ಪ್ರಕಾರ ರ್ಯಾಪಿಡ್ ವಿಯೆನ್ನಾ ತಂಡಕ್ಕೆ ಯೂರೋಪಿಯನ್ ಫುಟ್ ಬಾಲ್ ಒಕ್ಕೂಟ ಬರೊಬ್ಬರಿ 22 ಸಾವಿರ ಡಾಲರ್ ದಂಡ ವಿಧಿಸಿದೆ ಎಂದು ತಿಳಿದುಬಂದಿದೆ. ಇನ್ನು ಯೂರೋಪಿಯನ್ ಫುಟ್ ಬಾಲ್ ಸಂಸ್ಥೆಯ ದಂಡದ ಮೊತವನ್ನು ಪಾವತಿ ಮಾಡುವುದಾಗಿ ರ್ಯಾಪಿಡ್ ವಿಯೆನ್ನಾ ಹೇಳಿದ್ದು, ಶೀಘ್ರದಲ್ಲೇ ದಂಡ ಪಾವತಿಗೆ ಕ್ರಮ ಕೈಗೊಳ್ಳುವುದಾಗಿ  ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com