
ಬೆಂಗಳೂರು: ಕರ್ನಾಟಕದ ಬಾಲಕಿಯರ ತಂಡ ಟೂರ್ನಿಯುದ್ದಕ್ಕೂ ಸ್ಥಿರ ನಿರ್ವಹಣೆ ತೋರಿದ್ದರಿಂದ 67ನೇ ಜೂನಿಯರ್ ಬಾಸ್ಕೆಟ್ಬಾಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಪುದುಚೇರಿಯಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ 64-44ರಿಂದ ತಮಿಳುನಾಡು ತಂಡಕ್ಕೆ ಶಾಕ್ ನೀಡಿತು. ರಾಷ್ಟ್ರೀಯ ತಂಡಕ್ಕೆ ಇತ್ತೀಚೆಗೆ ಸೇರ್ಪಡೆಗೊಂಡ ಕರ್ನಾಟಕದ ಯುವ ಆಟಗಾರ್ತಿ ಭಾಂದವ್ಯ 29 ಪಾಯಿಂಟ್ ಸಂಪಾದಿಸುವ ಮೂಲಕ ತಂಡ ಗೆಲುವು ಸಾಧಿಸಲು ಕಾರಣವಾಯಿತು.
Advertisement