ಫುಟ್‍ಬಾಲ್ ತಂಡದಲ್ಲಿ ಸ್ಥಾನ ಪಡೆಯಲು ಕೋಚ್ ಜತೆ ಮಲಗಬೇಕಿತ್ತು: ಸೋನಾ ಚೌಧರಿ

ಫುಟ್‍ಬಾಲ್ ತಂಡದಲ್ಲಿ ಉಳಿದುಕೊಳ್ಳಲು ನಾವು ಕೋಚ್, ಕಾರ್ಯದರ್ಶಿ ಹಾಗೂ ಟೀಂ ಮ್ಯಾನೇಟ್ ಮೆಂಟ್ ಜತೆ ಮಲಗಬೇಕಿತ್ತು ಎಂಬ ಆಘಾತಕಾರಿ ಸುದ್ದಿಯನ್ನು...
ಸೋನಾ ಚೌಧರಿ
ಸೋನಾ ಚೌಧರಿ
Updated on

ನವದೆಹಲಿ: ಫುಟ್‍ಬಾಲ್ ತಂಡದಲ್ಲಿ ಉಳಿದುಕೊಳ್ಳಲು ನಾವು ಕೋಚ್, ಕಾರ್ಯದರ್ಶಿ ಹಾಗೂ ಟೀಂ ಮ್ಯಾನೇಟ್ ಮೆಂಟ್ ಜತೆ ಮಲಗಬೇಕಿತ್ತು ಎಂಬ ಆಘಾತಕಾರಿ ಸುದ್ದಿಯನ್ನು
ಭಾರತ ಫುಟ್‍ಬಾಲ್ ತ೦ಡದ ಮಾಜಿ ನಾಯಕಿ ಸೋನಾ ಚೌಧರಿ ತಮ್ಮ ಪುಸ್ತಕ ಗೇಮ್ ಇನ್ ಗೇಮ್‍ ಫುಟ್‍ಬಾಲ್ ನಲ್ಲಿ ಬರೆದುಕೊಂಡಿದ್ದಾರೆ.

ಹರಿಯಾಣ ಮೂಲದ ಸೋನಾ ಚೌಧರಿ ತಮ್ಮ ಗೇಮ್ ಇನ್ ಗೇಮ್‍ ಫುಟ್‍ಬಾಲ್ ಪುಸ್ತಕವನ್ನು ವಾರಣಾಸಿಯಲ್ಲಿ ಬಿಡುಗಡೆ ಮಾಡಿದ್ದರು. 90ರ ದಶಕದಲ್ಲಿ ತ೦ಡದ ರೈಟ್‍ಬ್ಯಾಕ್ ಆಟಗಾರ್ತಿಯಾಗಿದ್ದ ಸೋನಾ ಚೌಧರಿ 1995ರಲ್ಲಿ ಅ೦ತಾರಾಷ್ಟ್ರೀಯ ಫುಟ್‍ಬಾಲ್‍ಗೆ ಪದಾರ್ಪಣೆ ಮಾಡಿದ್ದರು. ಇದಾದ ಒ೦ದೇ ವಷ೯ಕ್ಕೆ ನಾಯಕಿಯಾಗಿ ನೇಮಕಗೊಂಡಿದ್ದರು.

ತ೦ಡದಲ್ಲಿ ಸ್ಥಾನ ಪಡೆಯಲು ಕೋಚ್, ಟೀಮ್ ಮ್ಯಾನೇಜ್‍ಮೆ೦ಟ್ ಹಾಗೂ ಕಾರ್ಯದರ್ಶಿಗೆ ಲೈಂಗಿಕ ಸುಖ ನೀಡಬೇಕಾಗುತ್ತಿತ್ತು. ಒಮ್ಮೊಮ್ಮೆ ಆಟಗಾರ್ತಿಯರು ಲೆಸ್ಬಿಯನ್ ರೀತಿಯಲ್ಲಿ ವರ್ತಿಸಬೇಕಿತ್ತು ಎಂದು ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ವಿದೇಶ ಪ್ರವಾಸದ ವೇಳೆ, ಕೋಚ್ ಹಾಗೂ ಕಾರ್ಯದರ್ಶಿಯ ಬೆಡ್‍ಗಳು ಆಟಗಾರ್ತಿಯರ ರೂಂಗಳಲ್ಲಿ ವ್ಯವಸ್ಥೆ ಮಾಡಲಾಗುತ್ತಿತ್ತು. ಇದಕ್ಕೆ ಆಟಗಾರ್ತಿಯರು ವಿರೋಧವಿದ್ದರು ಹಲವು ವರ್ಷಗಳ ಕಾಲ ಇದು ಮು೦ದುವರಿದಿತ್ತು. ಇನ್ನು ರಾಜ್ಯಮಟ್ಟದ ಟೂರ್ನಿಗಳ ವೇಳೆಯಲ್ಲೂ ಕೋಚ್‍ಗಳಿಗೆ ಈ ಲೈಂಗಿಕ ಸುಖ ನೀಡಬೇಕಿತ್ತು. ಇದಕ್ಕೆ ನಿರಾಕರಿಸಿದರೆ ತಂಡದಿಂದ ದೂರವಿಡಲಾಗುತ್ತಿತ್ತು ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com