ರಿಯೋ ಒಲಿಂಪಿಕ್ಸ್: ಅರ್ಹತೆ ಗಿಟ್ಟಿಸಿದ ಡಿಸ್ಕಸ್ ಥ್ರೋ ಪಟು ಸೀಮಾ ಪುನಿಯಾ

ರಿಯೊ ಒಲಿಂಪಿಕ್ಸ್ ಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಕ್ರೀಡಾಕೂಟದಲ್ಲಿ ಸ್ಥಾನ ಪಡೆಯುವುದಕ್ಕಾಗಿ ಭಾರತೀಯ ಕ್ರೀಡಾಪಟುಗಳು ಸಾಲುಗಟ್ಟಿ ನಿಂತಿದ್ದು, ಈ ಪೈಕಿ ಡಿಸ್ಕಸ್ ಥ್ರೋ ವಿಭಾಗದಲ್ಲಿ ಸೀಮಾ ಪುನಿಯಾ ಭಾನುವಾರ ಅರ್ಹತೆ ಗಿಟ್ಟಿಸಿದ್ದಾರೆ.
ಸೀಮಾ ಪುನಿಯಾ (ಸಂಗ್ರಹ ಚಿತ್ರ)
ಸೀಮಾ ಪುನಿಯಾ (ಸಂಗ್ರಹ ಚಿತ್ರ)

ನವದೆಹಲಿ: ರಿಯೊ ಒಲಿಂಪಿಕ್ಸ್ ಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಕ್ರೀಡಾಕೂಟದಲ್ಲಿ ಸ್ಥಾನ ಪಡೆಯುವುದಕ್ಕಾಗಿ ಭಾರತೀಯ ಕ್ರೀಡಾಪಟುಗಳು ಸಾಲುಗಟ್ಟಿ ನಿಂತಿದ್ದು, ಈ ಪೈಕಿ ಡಿಸ್ಕಸ್  ಥ್ರೋ ವಿಭಾಗದಲ್ಲಿ ಸೀಮಾ ಪುನಿಯಾ ಭಾನುವಾರ ಅರ್ಹತೆ ಗಿಟ್ಟಿಸಿದ್ದಾರೆ.

ಭಾರತದ ಡಿಸ್ಕಸ್ ಥ್ರೋ ಪಟು ಸೀಮಾ ಪುನಿಯಾ ಕ್ಯಾಲಿಫೋರ್ನಿಯಾದ ಸ್ಯಾನಿನಾಸ್​ನಲ್ಲಿ ನಡೆದ ಪ್ಯಾಟ್ ಯಂಗ್ ಥ್ರೋವರ್ ಕ್ಲಾಸಿಕ್ ಸ್ಪರ್ಧೆಯಲ್ಲಿ 62.62 ಮೀಟರ್ ದೂರಕ್ಕೆ ಎಸೆಯುವ  ಮೂಲಕ ಸ್ವರ್ಣ ಸಂಪಾದಿಸುವ ಮೂಲಕ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸ್ಪರ್ಧಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಗಿಟ್ಟಿಸಿಕೊಳ್ಳುವ 61.00  ಮೀಟರ್ ಮಾನದಂಡಕ್ಕಿಂತ ದೂರ ಎಸೆಯುವಲ್ಲಿ ಸೀಮಾ ಪುನಿಯಾ ಯಶಸ್ವಿಯಾಗಿದ್ದು, 2008ರ ಒಲಿಂಪಿಕ್ ಪದಕ ವಿಜೇತೆ ಸ್ಟೇಫಿನ್ ಬ್ರೌನ್ ಟ್ರಾಫ್ಟಾನ್​ಗಿಂತ ಮುಂದಕ್ಕೆ ಎಸೆದು ಈ  ಸ್ಪರ್ಧೆಯಲ್ಲಿ ಚಿನ್ನ ಸಂಪಾದಿಸಿದರು.

ಹರ್ಯಾಣ ಮೂಲದ ಅಥ್ಲೀಟ್ ಸೀಮಾ ಪುನಿಯಾ 2006ರ ಕಾಮನ್ವೆಲ್ತ್ ಗೇಮ್ಸ್​ನಲ್ಲಿ ಬೆಳ್ಳಿ, 2010ರ ಕಾಮನ್ವೆಲ್ತ್ ಗೇಮ್ಸ್​ನಲ್ಲಿ ಕಂಚು ಮತ್ತು ಗ್ಲಾಸ್​ಕೋ ಕಾಮನ್ವೆಲ್ತ್ ಗೇಮ್ಸ್​ನಲ್ಲಿ ಬೆಳ್ಳಿ ಪದಕ  ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೇ ಇಂಚಿಯಾನ್ ಏಷ್ಯನ್ ಗೇಮ್ಸ್​ನಲ್ಲಿ ಸ್ವರ್ಣ ಗೆದ್ದುಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com