ಟೆನ್ನಿಸ್ ತಾರೆ ಶರಪೋವಾ ನಿಷೇಧ ಶಿಕ್ಷೆ 15 ತಿಂಗಳಿಗೆ ಇಳಿಕೆ

ರಷ್ಯಾದ ಸ್ಟಾರ್ ಟೆನ್ನಿಸ್ ಆಟಗಾರ್ತಿ ಮಾರಿಯಾ ಶರಪೋವಾ ನಿಷೇಧ ಶಿಕ್ಷೆ 15 ತಿಂಗಳಿಗೆ ಇಳಿಕೆಯಾಗಿದ್ದು, ಮುಂದಿನ ವರ್ಷ ಏಪ್ರಿಲ್ ನಲ್ಲಿ ಅಂತಾರಾಷ್ಟ್ರೀಯ ಕಣಕ್ಕೆ...
ಮಾರಿಯಾ ಶರಪೋವಾ
ಮಾರಿಯಾ ಶರಪೋವಾ

ಮಾಸ್ಕೋ: ರಷ್ಯಾದ ಸ್ಟಾರ್ ಟೆನ್ನಿಸ್ ಆಟಗಾರ್ತಿ ಮಾರಿಯಾ ಶರಪೋವಾ ನಿಷೇಧ ಶಿಕ್ಷೆ 15 ತಿಂಗಳಿಗೆ ಇಳಿಕೆಯಾಗಿದ್ದು, ಮುಂದಿನ ವರ್ಷ ಏಪ್ರಿಲ್ ನಲ್ಲಿ ಅಂತಾರಾಷ್ಟ್ರೀಯ ಕಣಕ್ಕೆ ಮರಳುವ ಸಾಧ್ಯತೆ ದಟ್ಟವಾಗಿದೆ.

ಮೆಲ್ಡೋನಿಯಂ ಸೇವನೆಯಿಂದಾಗಿ ನಿಷೇಧ ಶಿಕ್ಷೆ ಎದುರಿಸುತ್ತಿದ್ದ ಶರಪೋವಾ ಈ ಸಂಬಂಧ ತಪ್ಪೋಪ್ಪಿಕೊಂಡಿರುವ ಸ್ವಿಜರ್ಲೇಂಡ್ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ(ಸಿಎಎಸ್) ಶಿಕ್ಷೆಯನ್ನು 2 ವರ್ಷದಿಂದ 15 ತಿಂಗಳಿಗೆ ಇಳಿಸಿದೆ.

ಸುದೀರ್ಘ ಅವಧಿಯಿಂದ ಶರಪೋವಾ ಮೆಲ್ಡೋನಿಯಂ ಔಷಧಿ ಸೇವಿಸುತ್ತಿದ್ದು ಅವರದು ಅರಿವಿಲ್ಲದೆ ಮಾಡಿದ ತಪ್ಪು ಆಗಿದೆ. ಅಲ್ಲದೆ ಮಾಡಿದ ತಪ್ಪನ್ನೂ ಒಪ್ಪಿಕೊಂಡಿರುವ ಆಧಾರದ ಮೇಲೆ ಅವ ರ ಮೇಲಿನ ಶಿಕ್ಷೆ ಪ್ರಮಾಣವನ್ನು ಕಡಿತ ಮಾಡಲಾಗಿದೆ ಎಂದು ಸಿಎಎಸ್ ತಿಳಿಸಿದೆ.

ನಿಷೇಧದಿಂದ ಬುದ್ಧಿ ಕಲಿತಿದ್ದೇನೆ: ಶರಪೋವಾ
ಕಳೆದ ಮಾರ್ಚ್ ನಿಂದ ನಾನು ನನ್ನ ಜೀವನದ ಅತ್ಯಂತ ಕಠಿಣ ದಿನಗಳನ್ನು ಕಳೆದಿದ್ದೇನೆ. ನಿಷೇಧದ ಬಗ್ಗೆ ನನಗೆ ಅರ್ಥವೂ ಆಗಿದೆ. ಶೀಘ್ರದಲ್ಲೇ ಟೆನಿಸ್ ಗೆ ಮರಳಲು ಸಾಧ್ಯವಾಗಿರುವುದೇ ಈಗ ನನ್ನ ಅತ್ಯಂತ ಖುಷಿಯ ಕ್ಷಣ ಎಂದು ಫೇಸ್ ಬುಕ್ ನಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com