

ಕೊಚ್ಚಿ: ಕುಸ್ತಿಪಟು ನರಸಿಂಗ್ ಯಾದವ್ ಉದ್ದೀಪನಾ ಔಷಧ ಸೇವನೆ ಪ್ರಕರಣ ಸಂಬಂಧ ಸಿಬಿಐ ಕೇಸು ದಾಖಲಿಸಿದೆ.
ಒಲಿಂಪಿಕ್ಸ್ ಆರಂಭಕ್ಕೂ ಮುನ್ನ ನರಸಿಂಗ್ ಯಾದವ್ ಉದ್ದೀಪನಾ ಮದ್ದು ಸೇವನೆ ಆರೋಪದಿಂದಾಗಿ ಒಲಂಪಿಕ್ಸ್ ನಲ್ಲಿ ಪಾಲ್ಗೋಳ್ಳಲು ಸಾಧ್ಯವಾಗಿರಲಿಲ್ಲ. ಐಪಿಸಿ ಸೆಕ್ಷನ್ 120-ಬಿ, 328 ಹಾಗೂ 506 ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ
ಪ್ರಕರಣ ಕುರಿತಂತೆ ಹರ್ಯಾಣ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಆದರೆ ನರಸಿಂಗ್ ಯಾದವ್ ಸಿಬಿಐ ತನಿಖೆ ನಡೆಸುವಂತೆ ಪಟ್ಟು ಹಿಡಿದಿದ್ದರು. ತಮಗೆ ಆಗದವರು ತಮ್ಮ ವಿರುದ್ಧ ಪಿತೂರಿ ನಡೆಸಿದ್ದಾರೆ. ತಮ್ಮ ಜ್ಯೂನಿಯರ್ ಕುಸ್ತಿಪಟು ಆಹಾರದಲ್ಲಿ ಉದ್ದೀಪನಾ ಮದ್ದು ಮಿಶ್ರಣ ಮಾಡಿ ನನಗೆ ನೀಡಿದ್ದಾರೆ ಎಂದು ನರಸಿಂಗ್ ಯಾದವ್ ಆರೋಪಿಸಿದ್ದರು.
ಸಿಬಿಐ ಇಂದಿನಿಂದ ತನಿಖೆ ಆರಂಭಿಸಿದ್ದು, ತಮಗೆ ನ್ಯಾಯ ಸಿಗುತ್ತದೆ, ನಾನು ನಿರಪರಾಧಿ ಎಂದು ಸಾಬೀತಾಗುತ್ತದೆ ಎಂದು ನರಸಿಂಗ್ ಯಾಗವ್ ಭರವಸೆ ವ್ಯಕ್ತ ಪಡಿಸಿದ್ದಾರೆ.
Advertisement