ಒಲಿಂಪಿಕ್ಸ್ ಸಂಸ್ಥೆಯ ದಾಖಲೆ ಹ್ಯಾಕ್; ಸೆರೆನಾ, ಬೈಲ್ಸ್ ವಿರುದ್ಧ ಡೋಪಿಂಗ್ ತೂಗುಗತ್ತಿ!
ಮಾಸ್ಕೋ: ವಿಶ್ವ ಉದ್ದೀಪನ ನಿಗ್ರಹ ಘಟಕ (ವಾಡಾ) ಅಮೆರಿಕದ ಖ್ಯಾತ ಟೆನ್ನಿಸ್ ತಾರೆ ಸೆರೆನಾ ವಿಲಿಯಮ್ಸ್ ಸೇರಿದಂತೆ ಪ್ರಮುಖ ಅಥ್ಲೀಟ್ ಗಳಿಗೆ ನಿಷೇಧಿತ ಅಂಶವಿರುವ ಔಷಧಿ ಸೇವಿಸಲು ಅನುಮತಿ ನೀಡುತ್ತಾ ಬಂದಿದೆ ಎಂದು ಹ್ಯಾಕರ್ಸ್ ಗಳ ತಂಡವೊಂದು ಹೇಳಿದೆ.
ಫ್ಯಾನ್ಸಿ ಬಿಯರ್ ಎಂಬ ರಷ್ಯಾ ಮೂಲದ ಹ್ಯಾಕರ್ಸ್ ತಂಡ ಈ ಬಗ್ಗೆ ತನ್ನ ವೆಬ್ ಸೈಟಿನಲ್ಲಿ ಸುದ್ದಿ ಪ್ರಸಾರ ಮಾಡಿದ್ದು, 22 ಗ್ರಾ೦ಡ್ ಸ್ಲಾ೦ ಪ್ರಶಸ್ತಿ ವಿಜೇತೆ ಸೆರೆನಾ ವಿಲಿಯಮ್ಸ್, ಅವರ ಸಹೋದರಿ ವೀನಸ್ ವಿಲಿಯಮ್ಸ್, ರಿಯೋ ಒಲಿ೦ಪಿಕ್ಸ್ 4 ಚಿನ್ನದ ಪದಕ ವಿಜೇತ ಜಿಮ್ನಾಸ್ಟ್ ಸಿಮೋನ್ ಬೈಲ್ಸ್ ಸೇರಿದಂತೆ ವಿಶ್ವದ ಪ್ರಮುಖ ಅಥ್ಲೀಟ್ ಗಳು ನಿಷೇಧಿತ ಉದ್ದೀಪನ ಮದ್ದಿನ ಅಂಶವಿರುವ ಔಷಧಿ ಸೇವಿಸಲು ಇವರಿಗೆ ಅನುಮತಿ ನೀಡುತ್ತಾ ಬಂದಿದೆ. ಈ ಬದ್ದೆ ತಮಗೆ ಪ್ರಬಲ ದಾಖಲೆಗಳು ಲಭ್ಯವಾಗಿವೆ ಎಂದು ಹೇಳಿಕೊಂಡಿದೆ.
ಅಂತೆಯೇ ಜಿಮ್ನಾಸ್ಟ್ ಬೈಲ್ಸ್ ಅವರ ರಕ್ತದ ಮಾದರಿ ಪರೀಕ್ಷೆಯಲ್ಲಿ ನಿಷೇಧಿತ ಔಷಧಿ ಸೇವಿಸಿರುವುದು ಆಗಸ್ಟ್ ನಲ್ಲಿ ಖಚಿತವಾಗಿದ್ದರೂ ಒಲಿ೦ಪಿಕ್ಸ್ ನಿ೦ದ ಅವರನ್ನು ಅನರ್ಹಗೊಳಿಸಲಿಲ್ಲ. ಗೊತ್ತಿದ್ದರೂ ಈ ವರದಿಯನ್ನು ವಾಡಾ ಇದುವರೆಗೆ ಬಹಿರ೦ಗಪಡಿಸಲಿಲ್ಲ ಎ೦ದೂ ವೆಬ್ ಸೈಟ್ ಆರೋಪಿಸಿದೆ.
ಫ್ಯಾನ್ಸಿ ಬಿಯರ್ ನ ಈ ಸ್ಫೋಟಕ ಆರೋಪ ಇದೀಗ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆಯನ್ನು ಮುಜುಗರಕ್ಕೀಡು ಮಾಡಿದ್ದು, ಈಗಾಗಲೇ ಸಂಸ್ಥೆ ಈ ಬಗ್ಗೆ ಚರ್ಚಿಸಲು ತುರ್ತು ಸಭೆ ಕರೆದಿದೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ