ಡಬ್ಲ್ಯುಟಿಎ ಮಹಿಳಾ ಡಬಲ್ಸ್ ರ್ಯಾಂಕಿಂಗ್: ಅಗ್ರಸ್ಥಾನ ಕಾಯ್ದು ಕೊಂಡ ಸಾನಿಯಾ

ಡಬ್ಲ್ಯುಟಿಎ ಮಹಿಳಾ ಡಬಲ್ಸ್ ರ್ಯಾಂಕಿಂಗ್ ನಲ್ಲಿ ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
ಸಾನಿಯಾ ಮಿರ್ಜಾ
ಸಾನಿಯಾ ಮಿರ್ಜಾ
ನವದೆಹಲಿ: ಡಬ್ಲ್ಯುಟಿಎ ಮಹಿಳಾ ಡಬಲ್ಸ್ ರ್ಯಾಂಕಿಂಗ್ ನಲ್ಲಿ ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. 
ಚೆಕ್ ಗಣರಾಜ್ಯದ ಬಾರ್ಬರಾ ಸ್ಟ್ರೈಕೋವಾ ಜತೆಗೂಡಿ ಸಾನಿಯಾ ಇತ್ತೀಚೆಗಷ್ಟೇ ಟೋಕಿಯೊದಲ್ಲಿ ನಡೆದ ಪ್ಯಾನ್ ಫೆಸಿಪಿಕ್ ಓಪನ್ ನಲ್ಲಿ ಪ್ರಶಸ್ತಿ ಜಯಿಸಿದ್ದರು. 
ಸಾನಿಯಾ ಮಿರ್ಜಾ ಒಟ್ಟಾರೆ 9730 ಅಂಕ ಗಳಿಸುವ ಮೂಲಕ ಎರಡನೇ ಸ್ಥಾನದಲ್ಲಿರುವ ಮಾಜಿ ಜತೆಗಾರ್ತಿ ಸ್ವಿಜರ್ಲೆಂಡ್ ನ ಮಾರ್ಟಿನಾ ಹಿಂಗೀಸ್ ಗಿಂತ ಕೇವಲ 5 ಅಂಕ ಮುಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com