ರಿಯೋ ಬೆಳ್ಳಿತಾರೆ ಪಿವಿ ಸಿಂಧು 3 ವರ್ಷಗಳಿಗೆ 50 ಕೋಟಿ ರು. ಒಪ್ಪಂದ

ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಭಾರತದ ಷಟ್ಲರ್ ತಾರೆ ಪಿವಿ ಸಿಂಧು ಅವರು ಭಾರಿ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ...
ಪಿವಿ ಸಿಂಧು
ಪಿವಿ ಸಿಂಧು
Updated on: 

ಹೈದರಾಬಾದ್: ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಭಾರತದ ಷಟ್ಲರ್ ತಾರೆ ಪಿವಿ ಸಿಂಧು ಅವರು ಭಾರಿ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಕ್ರೀಡಾ ಮ್ಯಾನೇಜ್ ಮೆಂಟ್ ಕಂಪನಿ ಬೇಸ್ ಲೈನ್ ವೆಂಚರ್ಸ್ ಜತೆ ಸಿಂಧು 3 ವರ್ಷಗಳಿಗೆ ಬರೋಬ್ಬರಿ 50 ಕೋಟಿ ರುಪಾಯಿ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಮೂಲಕ ಸೈನಾ ನೆಹ್ವಾಲ್ ಮತ್ತು ಸಾನಿಯಾ ಮಿರ್ಜಾ ರನ್ನು ಮೀರಿಸಿ ದೇಶದ ಅತ್ಯಂತ ಸಿರಿವಂತ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸಿಂಧು ಅವರ ಬ್ರಾಂಡ್ ವರ್ಚಸ್ಸು ವೃದ್ಧಿ, ಪರವಾನಗಿ, ಜಾಹೀರಾತು ಮುಂತಾದ ಮಾರುಕಟ್ಟೆ ವ್ಯವಹಾರಗಳನ್ನು ಬೇಸ್ ಲೈನ್ ನೋಡಿಕೊಳ್ಳಲಿದೆ. ಮುಂದಿನ 3 ವರ್ಷಗಳ ಅವಧಿಯಲ್ಲಿ ನಾವು ಸಿಂಧು ಅವರ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸಲು ಪ್ರಯತ್ನಿಸುತ್ತೇವೆ ಎಂದು ಬೇಸ್ ಲೈನ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಹ ಸಂಸ್ಥಾಪಕ ಟುಹಿನ್ ಮಿಶ್ರಾ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com