ಡಬ್ಲ್ಯೂಡಬ್ಲ್ಯೂಇಗೆ ನಿವೃತ್ತಿ ಘೋಷಿಸಿದ ಖ್ಯಾತ ರೆಸ್ಲರ್‌ ಅಂಡರ್ ಟೇಕರ್

ಡಬ್ಲ್ಯೂಡಬ್ಲ್ಯೂಇ ಸ್ಟಾರ್ ಕುಸ್ತಿಪಟು ಅಂಡರ್ ಟೇಕರ್ ತಮ್ಮ ಸುದೀರ್ಘ ಕುಸ್ತಿ ಪಯಣದ ನಂತರ ನಿವೃತ್ತಿ ಘೋಷಿಸಿದ್ದಾರೆ...
ದಿ ಅಂಡರ್ ಟೇಕರ್
ದಿ ಅಂಡರ್ ಟೇಕರ್
Updated on
ಡಬ್ಲ್ಯೂಡಬ್ಲ್ಯೂಇ ಸ್ಟಾರ್ ಕುಸ್ತಿಪಟು ಅಂಡರ್ ಟೇಕರ್ ತಮ್ಮ ಸುದೀರ್ಘ ಕುಸ್ತಿ ಪಯಣದ ನಂತರ ನಿವೃತ್ತಿ ಘೋಷಿಸಿದ್ದಾರೆ. 
52 ವರ್ಷದ 6.10 ಅಡಿ ಎತ್ತರದ ಅಜಾನುಬಾಹು ಅಂಡರ್ ಟೇಕರ್ ಇತ್ತೀಚೆಗಷ್ಟೇ ತಮ್ಮ ನಿವೃತ್ತಿ ನಿರ್ಧಾರವನ್ನು ಘೋಷಿಸಿದ್ದು ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. 
ಅಂಡರ್ ಟೇಕರ್ 1965ರ ಮಾರ್ಚ್ 24 ರಂದು ಅಮೆರಿಕಾದ ಟೆಕ್ಸಾಸ್ ನಲ್ಲಿ ಜನಿಸಿದ್ದು ಅವರ ಮೂಲ ಹೆಸರು ಮಾರ್ಕ್ ವಿಲಿಯಂ ಕ್ಯಾಲವೆ. ಪದವಿ ಶಿಕ್ಷಣ ನಂತರ ವಿಶ್ವ ಪ್ರಸಿದ್ಧ ಹೆವಿವೈಟ್ ಚಾಂಪಿಯನ್ ಷಿಪ್ ರಂಗಕ್ಕೆ ಪಾದಾರ್ಪಣೆ ಮಾಡಿದ್ದರು. 
ಏಪ್ರಿಲ್ 2ರಂದು ನಡೆದ ಕುಸ್ತಿ ಪಂದ್ಯದಲ್ಲಿ ಸೋತ ನಂತರ ಅಂಡರ್ ಟೇಕರ್ ಅಭಿಮಾನಿಗಳ ಸಮ್ಮುಖದಲ್ಲೇ ತಮ್ಮ ನಿವೃತ್ತಿ ನಿರ್ಧಾರವನ್ನು ಘೋಷಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com