ಕಿಡಂಬಿ ಶ್ರೀಕಾಂತ್ ಮಣಿಸಿದ ಸಾಯಿ ಪ್ರಣೀತ್ ಸಿಂಗಾಪುರ ಓಪನ್ ಚಾಂಪಿಯನ್

ಸಿಂಗಾಪುರ ಓಪನ್ ಸೂಪರ್ ಸಿರೀಸ್ ನ ಫೈನಲ್ ಪಂದ್ಯದಲ್ಲಿ ಭಾರತೀಯ ಆಟಗಾರರು ಸೆಣಸಿದ್ದು ಕಿಡಂಬಿ ಶ್ರೀಕಾಂತ್ ರನ್ನು ಮಣಿಸಿ ಸಾಯಿ ಪ್ರಣೀತ್ ಇದೇ ಮೊದಲ...
ಸಾಯಿ ಪ್ರಣೀತ್
ಸಾಯಿ ಪ್ರಣೀತ್
Updated on
ಸಿಂಗಾಪುರ: ಸಿಂಗಾಪುರ ಓಪನ್ ಸೂಪರ್ ಸಿರೀಸ್ ನ ಫೈನಲ್ ಪಂದ್ಯದಲ್ಲಿ ಭಾರತೀಯ ಆಟಗಾರರು ಸೆಣಸಿದ್ದು ಕಿಡಂಬಿ ಶ್ರೀಕಾಂತ್ ರನ್ನು ಮಣಿಸಿ ಸಾಯಿ ಪ್ರಣೀತ್ ಇದೇ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. 
ಸಿಂಗಾಪುರ ಓಪನ್ ಸೂಪರ್ ಸಿರೀಸ್ ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಕಿಡಂಬಿ ಶ್ರೀಕಾಂತ್ ಮತ್ತು ಸಾಯಿ ಪ್ರಣೀತ್ ಅವರು ಫೈನಲ್ ಪ್ರವೇಶಿಸಿದ್ದರು. ಇಂದು ನಡೆದ ಫೈನಲ್ ಪಂದ್ಯದಲ್ಲಿ ಪ್ರಣೀತ್ 21-17, 17-21, 21-12 ಅಂತರದಿಂದ ಕಿಡಂಬಿ ಶ್ರೀಕಾಂತ್ ರನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. 
ಸಿಂಗಾಪುರ ಸೂಪರ್ ಸಿರೀಸ್ ಚಾಂಪಿಯನ್ ಪಟ್ಟ ಅಲಂಕಿಸಿದ ಭಾರತದ ಎರಡನೇ ಆಟಗಾರ ಎಂಬ ಖ್ಯಾತಿಗೆ ಸಾಯಿ ಪ್ರಣೀತ್ ಭಾಜನರಾಗಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com