ಕ್ರೀಡಾ ಪ್ರತಿಭೆಗಳ ಹುಡುಕಾಟಕ್ಕೆ ವಿಶೇಷ ಪೋರ್ಟಲ್ ಲಾಂಚ್ ಮಾಡಿದ ವೆಂಕಯ್ಯ ನಾಯ್ಡು

ಭಾರತದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ರಾಷ್ಟ್ರೀಯ ಕ್ರೀಡಾ ಪ್ರತಿಭೆಗಳನ್ನು ಹುಡುಕುವ ಸಲುವಾಗಿ ಪೋರ್ಟಲ್ ಒಂದಕ್ಕೆ ಚಾಲನೆ ನೀಡಿದ್ದಾರೆ
ವೆಂಕಯ್ಯ ನಾಯ್ಡು
ವೆಂಕಯ್ಯ ನಾಯ್ಡು
ಹೊಸದಿಲ್ಲಿ: ಭಾರತದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ರಾಷ್ಟ್ರೀಯ ಕ್ರೀಡಾ ಪ್ರತಿಭೆಗಳನ್ನು ಹುಡುಕುವ ಸಲುವಾಗಿ ಪೋರ್ಟಲ್ ಒಂದಕ್ಕೆ ಚಾಲನೆ ನೀಡಿದ್ದಾರೆ. ದೇಶದ ಪ್ರತಿಯೊಂದು ಮೂಲೆ ಮೂಲೆಗಳಿಂದ ಕ್ರೀಡಾ ಪ್ರತಿಭೆಯನ್ನು ಹುಟ್ಟುಹಾಕಲು ಸರಕಾರ ಆರಂಭಿಸಿದೆ ಎಂದು ಅವರು ಹೇಳಿದರು.
ಒಂದು ಮಗು ಅಥವಾ ಅದರ ಪೋಷಕರು, ಶಿಕ್ಷಕರು ಅಥವಾ ತರಬೇತುದಾರರು ತಮ್ಮ ಕ್ರೀಡಾ, ಸಾಧನೆಗಳನ್ನು  ಅಥವಾ ವೀಡಿಯೊವನ್ನು ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡಬಹುದು. ಕೇಂದ್ರ ಕ್ರೀಡಾ ಸಚಿವಾಲಯವು ಪ್ರತಿಭಾನ್ವಿತ ಆಟಗಾರರನ್ನು ಆಯ್ಕೆ ಮಾಡಿ ಸ್ಪೋರ್ಟ್ಸ್ ಅಕಾದಮಿ ಇಂಡಿಯಾ ಕೇಂದ್ರಗಳಲ್ಲಿ  ತರಬೇತಿ ನೀಡಲಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 'ಮನ್ ಕಿ ಬಾತ್' ರೇಡಿಯೋ ಕಾರ್ಯಕ್ರಮದ ಸಮಯದಲ್ಲಿ ಪೋರ್ಟಲ್ ಪ್ರಾರಂಭದ ಕುರಿತು ಉಲ್ಲೇಖಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ನಾಯ್ಡು, ಮೂಲಭೂತ ಸೌಕರ್ಯ ಮತ್ತು ತರಬೇತಿ ಸೌಲಭ್ಯಗಳನ್ನು ಹೊಂದಿರುವ ಅಕಾಡೆಮಿಗಳನ್ನು ಸ್ಥಾಪಿಸುವುದರಿಂದ ಭಾರತಕ್ಕೆ ಪ್ರಬಲ ಕ್ರೀಡಾ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಹೇಳಿದರು.
"ನಾವು ಎಲ್ಲಾ ರಾಜ್ಯಗಳಲ್ಲಿ ಕ್ರೀಡೆಗೆ ಉತ್ತಮ ಮೂಲಸೌಕರ್ಯವನ್ನು ಒದಗಿಸುವುದು ಮತ್ತು ಪ್ರಾರಂಭಿಕ ವಯಸ್ಸಿನಲ್ಲೇ ಕ್ರೀಡಾ ಪ್ರತಿಭೆಯನ್ನು ಗುಉರುತಿಸಿ ಪೋಷಿಸುವುದು ಅಗತ್ಯವಾಗಿದೆ.ದೇಶದ ಉದ್ದಗಲಕ್ಕೂ ಇರುವ ನಮ್ಮ ಯುವಕರು ಮತ್ತು ಮಹಿಳೆಯರನ್ನು ಸ್ಪೋರ್ಟ್ಸ್ ಸ್ಟಾರ್ ಗಳನ್ನಾಗಿ ಮತ್ತು ರೋಲ್ ಮಾಡಲ್ ಆಗಿ ಪರಿವರ್ತಿಸಲು ನಮಗೆ ಹೆಚ್ಚಿನ ತರಬೇತಿ ಅಕಾಡೆಮಿಗಳು, ತರಬೇತಿ ಕೇಂದ್ರಗಳು ಬೇಕಾಗಿವೆ." ಅವರು ಹೇಳಿದರು.
"ಕ್ರಿಕೆಟ್ ಮತ್ತು ಹಾಕಿ ತಂಡದ ಕ್ರೀಡಾಕೂಟ ಹೊರತುಪಡಿಸಿ, ಕ್ರೀಡಾ ಸ್ಪರ್ಧೆಗಳಲ್ಲಿ ನಮ್ಮ ಯಶಸ್ಸು ವಿರಳ.  ಸಾನಿಯಾ ಮಿರ್ಜಾ, ಪಿ.ವಿ ಸಿಂಧು, ಸೈನಾ ನೆಹವಾಲ್, ಪಿಟಿ ಉಷಾ, ಮಿಲ್ಖಾ ಸಿಂಗ್ ಅಥವಾ ಅಭಿನವ್ ಭೀಂದ್ರ ಅವರು ಎಲ್ಲರೂ ತಾವು ಮತ್ತು ಪರಿಶ್ರಮ ಮತ್ತು ಸತತ ಅಭ್ಯಾಸದಿಂದ ರಾಷ್ಟ್ರವು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಆದರೆ ಯಾವ ರಾಜ್ಯ ಸರ್ಕಾರಗಳೂ ಇನ್ನಷ್ಟು ಇಂತಹಾ ಪ್ರತಿಭೆಗಳನ್ನು ಹುಟ್ಟುಹಾಕಬಲ್ಲ ಯಾವ ಕಾರ್ಯಕ್ರಮವನ್ನೂ ರೂಪಿಸುತ್ತಿಲ್ಲ "ಎಂದರು. 
ಪೋರ್ಟಲ್ ಬಗ್ಗೆ ಮಾತನಾಡುತ್ತಾ, ನಾಯ್ಡು, "ರಾಷ್ಟ್ರೀಯ ಕ್ರೀಡಾ ಪ್ರತಿಭೆ ಸರ್ಚ್ ಪೋರ್ಟಲ್  ನ ವೇದಿಕೆಯು ಆಟಗಾರರಿಗೆ ವರವಾಗಲಿ೯ದೆ.ಯಂಗ್ ಅಫೇರ್ಸ್ ಆಂಡ್ ಸ್ಪೋರ್ಟ್ಸ್, ಕ್ರೀಡಾ ಪ್ರಾಧಿಕಾರದ ವನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ.ಎಂದರು.
"ಈ ಪೋರ್ಟಲ್ ಅತ್ಯುತ್ತಮ ಪ್ರತಿಭೆಯನ್ನು ಗುರುತಿಸುವಲ್ಲಿ ಮಾತ್ರ ನೆರವಾಗುವುದಿಲ್ಲ, ಆದರೆ ಎಲ್ಲಾ ಅಭ್ಯರ್ಥಿಗಳಿಗೆ ಒಂದು ಮಟ್ಟದ ಆಟವಾಡುವ ಅವಕಾಶವನ್ನು ಒದಗಿಸುತ್ತದೆ ಮತ್ತು ಸ್ಪರ್ಧಾತ್ಮಕ ವಾತಾವರಣವನ್ನು ನಿರ್ಮಿಸುತ್ತದೆ."
ನಮ್ಮ ದೇಶದಲ್ಲಿ, 450 ಮಿಲಿಯನ್ ಯುವಕರಿದ್ದು ಪ್ರತಿಭೆಗಳಿಗೆ ಏನೂ ಕೊರತೆಯಿಲ್ಲ.
ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯೆಲ್ ಅವರು ಮಾತನಾಡಿ ದೇಶದ ಕ್ರೀಡಾ ಪ್ರತಿಭೆಗಳು ಈ ಪೋರ್ಟಲ್ ಸಹಕಾರದೊಂದಿಗೆ ಇನ್ನಷ್ಟು ಉತ್ತಮ ತರಬೇತಿ ಪಡೆದು ಶ್ರೇಷ್ಠ ಸಾಧನೆ ಮಾಡುತ್ತಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com