ಡೋಪಿಂಗ್ ವಿವಾದ: 2018 ಚಳಿಗಾಲದ ಒಲಂಪಿಕ್ಸ್ ನಲ್ಲಿ ಭಾಗವಹಿಸದಂತೆ ರಷ್ಯಾ ಗೆ ನಿಷೇಧ

2018 ರ ಚಳಿಗಾಲದ ಒಲಂಪಿಕ್ಸ್ ನಲ್ಲಿ ಕ್ರಮಬದ್ಧವಾದ ಡೋಪಿಂಗ್ ಪರೀಕ್ಷೆ ನಡೆಸದ ರಷ್ಯಾವನ್ನು ಸರಣಿಯಿಂದ ಹೊರಗಿಡಲು ಅಂತರಾಷ್ಟ್ರೀಯ ಒಅಲಂಪಿಕ್ ಸಮಿತಿ ತೀರ್ಮಾನಿಸಿದೆ.
ಡೋಪಿಂಗ್ ವಿವಾದ: 2018 ರ ಚಳಿಗಾಲದ ಒಲಂಪಿಕ್ಸ್ ನಲ್ಲಿ ಭಾಗವಹಿಸದಂತೆ ರಷ್ಯಾ ಗೆ ನಿಷೇಧ
ಡೋಪಿಂಗ್ ವಿವಾದ: 2018 ರ ಚಳಿಗಾಲದ ಒಲಂಪಿಕ್ಸ್ ನಲ್ಲಿ ಭಾಗವಹಿಸದಂತೆ ರಷ್ಯಾ ಗೆ ನಿಷೇಧ
ಲಾಸನ್ನೆ(ಸ್ವಿಡ್ಜರ್ ಲ್ಯಾಂಡ್): 2018 ರ ಚಳಿಗಾಲದ ಒಲಂಪಿಕ್ಸ್ ನಲ್ಲಿ ಕ್ರಮಬದ್ಧವಾದ ಡೋಪಿಂಗ್ ಪರೀಕ್ಷೆ ನಡೆಸದ ರಷ್ಯಾವನ್ನು ಸರಣಿಯಿಂದ ಹೊರಗಿಡಲು ಅಂತರಾಷ್ಟ್ರೀಯ ಒಲಂಪಿಕ್ ಸಮಿತಿ ತೀರ್ಮಾನಿಸಿದೆ. ಇದರೊಡನೆ ರಷ್ಯಾದ ಸರ್ಕಾರಿ ಅಧಿಕಾರಿಗಳು ಸಮಾರಂಭಕ್ಕೆ ಹಾಜರಾಗುವುದನ್ನೂ ಸಹ ನಿಷೇಧಿಸಲಾಗಿದೆ,  ಆ ದೇಶದ ರಾಷ್ಟ್ರಗೀತೆ ಹಾಡಲಾಗುವುದಿಲ್ಲ, ರಾಷ್ಟ್ರದ್ವಜ ಸಹ ಪ್ರದರ್ಶನಗೊಳ್ಳುವುದನ್ನು ತಡೆಹಿಡಿಯಲಾಗಿದೆ.
ಸ್ಪರ್ಧಿಸಲು ವಿಶೇಷ ಆಹ್ವಾನ ಸ್ವೀಕರಿಸಿದ ರಷ್ಯಾದ ಯಾವುದೇ ಕ್ರೀಡಾಪಟುಗಳು ತಾವು ರಾಷ್ಟ್ರದ ಚಿನ್ಹೆ ಇರುವ ಸಮವಸ್ತ್ರಗಳನ್ನು ಧರಿಸದೆ ತಟಸ್ಥ ಸಮವಸ್ತ್ರಗಳನ್ನು ಧರಿಸಬೇಕು. ಹಾಗೆಯೇ ಈ ಬಾರಿಯ ಅಧಿಕೃತ ದಾಖಲೆ ಪುಸ್ತಕದಲ್ಲಿ ರಷ್ಯಾ ಶೂನ್ಯ ಪದಕಗಳನ್ನು ಸಂಪಾದಿಸಿದೆ ಎಂದು ತೋರಿಸಲಾಗುತ್ತದೆ..
ರಷ್ಯಾ ತನ್ನ್ ಸ್ವಂತ ಡೋಪಿಂಗ್ ಪರೀಕ್ಷೆ ವಿಧಾನಗಳನ್ನು ರಾಷ್ಟ್ರಾದ್ಯಂತ ಜಾರಿಗೆ ತಂದಿದ್ದು ಅಪರಾಧ ಎಂದು ಆಡಳಿತ ಮಂದಳಿ ಸ್ಪಷ್ಟಪಡಿಸಿದೆ.  ಇದಕ್ಕೂ ಮುನ್ನ 1960, 70, 80ರ ದಶಕಗಳಲ್ಲಿ ಪೂರ್ವ ಜರ್ಮನಿ ಇದೇ ಬಗೆಯ ಯೋಜನೆ ರೂಪಿಸಿ ಕುಖ್ಯಾತಿ ಪಡೆದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com