ದುಬೈ: ದುಬೈನಲ್ಲಿ ಭಾನುವಾರ ನಡೆದ ಬಿಡಬ್ಲ್ಯೂಎಫ್ ವಿಶ್ವ ಸೂಪರ್ ಸಿರೀಸ್ ಫೈನಲ್ಸ್ ನಲ್ಲಿ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಅವರು ಜಪಾನ್ ನ ಅಕಾನೆ ಯಾಮಗೂಚಿ ಅವರ ವಿರುದ್ಧ ಸೋಲು ಅನುಭವಿಸುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ.
ಇಂದು ನಡೆದ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಅಕಾನೆ ಯಾಮಗೂಚಿ ವಿರುದ್ಧ 21-15, 12-21, 19-21ರ ನೇರ ಸೆಟ್ ಗಳಿಂದ ಪಿ ವಿ ಸಿಂಧು ಸೋಲು ಅನುಭವಿಸಿದರು.
ಪಿ ವಿ ಸಿಂಧು ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಚೀನಾದ ಚೆನ್ ಯೂಫಿ ಅವರ ವಿರುದ್ಧ 21–15, 21–18ರ ನೇರ ಸೆಟ್ ಗಳಿಂದ ಗೆಲುವು ಸಾಧಿಸುವ ಮೂಲಕ ಫೈನಲ್ ಪ್ರವೇಶಿಸಿದ್ದರು.
ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ಭಾರತದ ಆಟಗಾರ್ತಿ ಸಿಂಧು ಈ ಸರಣಿಯ ಎಲ್ಲಾ ಪಂದ್ಯಗಳಲ್ಲಿಯೂ ವಿಜಯ ಸಾಧಿಸಿದ್ದರು. ಆದರೆ ಇಂದು ನಡೆದ ಅಂತಿಮ ಹೋರಾಟದಲ್ಲಿ ಸಿಂಧೂ ಮುಗ್ಗರಿಸಿದರು.