ಮೆಲ್ಬೋರ್ನ್: ಆಸ್ಟ್ರೇಲಿಯಾ ಓಪನ್ ಗ್ರಾಂಡ್ ಸ್ಲಾಂ ಟೂರ್ನಿಯ ಮಿಶ್ರ ಡಬಲ್ಸ್ ನ ಫೈನಲ್ ಪಂದ್ಯದಲ್ಲಿ ಭಾರತದ ಸ್ಟಾರ್ ಟೆನಿಸ್ ತಾರೆ ಸಾನಿಯಾ ಮಿರ್ಜಾ-ಇವಾನ್ ದೋಡಿಗ್ ಜೋಡಿ ಸೋಲು ಅನುಭವಿಸಿ ನಿರಾಸೆ ಮೂಡಿಸಿದೆ.
ರಾಡ್ ಲೆವರ್ ಅರೇನಾದಲ್ಲಿ ನಡೆದ ಮಿಶ್ರ ಡಬಲ್ಸ್ ಫೈನಲ್ ಪಂದ್ಯದಲ್ಲಿ ಜುವಾನ್ ಸೆಬಾಸ್ಟಿಯನ್ ಕೆಬಲ್ ಮತ್ತು ಅಬಿಗೈಲ್ ಸ್ಪಿಯರ್ಸ್ ವಿರುದ್ಧ ಸಾನಿಯಾ ಮಿರ್ಜಾ ಮತ್ತು ಇವಾನ್ ದೋಡಿಗ್ ಜೋಡಿ 2-6, 4-6 ನೇರ ಸೆಟ್ ಗಳಿಂದ ಸೋಲು ಕಂಡಿದೆ.