ಅಂಡರ್-17 ಫಿಫಾ ವಿಶ್ವಕಪ್ ಯಶಸ್ಸು: ಪ್ರಧಾನಿ ಮೋದಿಯನ್ನು ಅಭಿನಂದಿಸಿ ಪತ್ರ ಬರೆದ ಫಿಫಾ ಅಧ್ಯಕ್ಷ

ಭಾರತದಲ್ಲಿ ಅಂಡರ್-17 ಫಿಫಾ ವಿಶ್ವಕಪ್ ಕೂಟವನ್ನು ಯಶಸ್ಸಿಯಾಗಿ ಆಯೋಜಿಸಿದ್ದಕ್ಕೆ ಅಂತಾರಾಷ್ಟ್ರೀಯ ಫುಟ್ಬಾಲ್‌ ಸಂಸ್ಥೆ(ಫಿಫಾ) ಅಧ್ಯಕ್ಷ ಜಿಯಾನಿ ಇನ್ಫಾಂಟಿನೊ ಪ್ರಧಾನಿ...
ನರೇಂದ್ರ ಮೋದಿ-ಜಿಯಾನಿ ಇನ್ಫಾಂಟಿನೊ
ನರೇಂದ್ರ ಮೋದಿ-ಜಿಯಾನಿ ಇನ್ಫಾಂಟಿನೊ
ಭಾರತದಲ್ಲಿ ಅಂಡರ್-17 ಫಿಫಾ ವಿಶ್ವಕಪ್ ಕೂಟವನ್ನು ಯಶಸ್ಸಿಯಾಗಿ ಆಯೋಜಿಸಿದ್ದಕ್ಕೆ ಅಂತಾರಾಷ್ಟ್ರೀಯ ಫುಟ್ಬಾಲ್‌ ಸಂಸ್ಥೆ(ಫಿಫಾ) ಅಧ್ಯಕ್ಷ ಜಿಯಾನಿ ಇನ್ಫಾಂಟಿನೊ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿ ಪತ್ರ ಬರೆದಿದ್ದಾರೆ. 
ಭಾರತದಲ್ಲಿ 2017ರ ಅಂಡರ್-17 ಫಿಫಾ ವಿಶ್ವಕಪ್ ಕೂಟದ ಯಶಸ್ಸಿನೊಂದಿಗೆ ನಿಯೋಗವು ಹಲವು ಮರೆಯಲಾಗದಂತ ನೆನಪುಗಳೊಂದಿಗೆ ಜ್ಯೂರಿಚ್ ಗೆ ಮರಳಿದೆ. ಅಂಡರ್-17 ಫಿಫಾ ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯಕ್ಕಾಗಿ ಫಿಫಾ ಕೊನ್ಸಿಲ್ ಕೊಲ್ಕತ್ತಾದಲ್ಲಿ ವಾಸ್ತವ್ಯ ಹೂಡಿತ್ತು. ಈ ವೇಳೆ ಅನೇಕ ಸ್ನೇಹಪರ ಸ್ನೇಹಗಳನ್ನು ಸಂಪಾದಿಸಿಕೊಂಡೆವು ಎಂದು ಪ್ರಧಾನಿ ಮೋದಿಗೆ ಬರೆದಿರುವ ಪತ್ರದಲ್ಲಿ ಜಿಯಾನಿ ಇನ್ಫಾಂಟಿನೊ ತಮ್ಮ ಮನದಾಳದ ಮಾತುಗಳನ್ನು ತಿಳಿಸಿದ್ದಾರೆ. 
ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿದ ಸ್ಥಳೀಯ ಸಂಘಟನೆ ಮತ್ತು ನಿಮ್ಮ ಸರ್ಕಾರಕ್ಕೆ ನನ್ನ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ನವದೆಹಲಿ, ಮುಂಬೈ, ಗೋವಾ, ಕೊಚ್ಚಿ, ಗುವಾಹಟಿ ಮತ್ತು ಕೊಲ್ಕತ್ತಾ ನಗರಗಳಲ್ಲಿ ಪಂದ್ಯಗಳನ್ನು ಆಯೋಜಿಸಲು ತುಂಬಾ ಕಷ್ಟಪಟ್ಟು ಕೆಲಸ ಮಾಡಿದ್ದು. ಅದ್ಭುತ ಮತ್ತು ಸ್ಮರಣೀಯ ಸಂಗತಿಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಪತ್ರದಲ್ಲಿ ಬರೆದಿದ್ದಾರೆ. 
ಅಂಡರ್-17 ಫಿಫಾ ವಿಶ್ವಕಪ್ ಪಂದ್ಯಾವಳಿಯ ವೇಳೆ ನಾನು ಭಾರತಕ್ಕೆ ಬಂದಿದ್ದಾಗ ಮೊದಲೇ ನಿಯೋಜನೆಗೊಂಡಿದ್ದ ಬದ್ಧತೆಗಳ ಕಾರಣದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಆದರೆ ಭಾರತದಲ್ಲಿ ಫುಟ್ಬಾಲ್ ಅನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈ ಬಗ್ಗೆ ವಿಚಾರ ವಿನಿಮಯ ಮಾಡಲು ಭವಿಷ್ಯದಲ್ಲಿ ಮೋದಿ ಅವರನ್ನು ಭೇಟಿ ಮಾಡುವುದಾಗಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com