ಡಬ್ಲ್ಯೂಡಬ್ಲ್ಯೂಇ ಪ್ರವೇಶಿಸಿದ ಭಾರತದ ಪ್ರಪ್ರಥಮ ಮಹಿಳೆ ಕವಿತಾ ದೇವಿ

ದಿ ಗ್ರೇಟ್ ಡಬ್ಲ್ಯೂಡಬ್ಲ್ಯೂಇ ಕುಸ್ತಿ ಖಲಿ ಶಿಷ್ಯೆ ಹಾಗೂ ಮಾಜಿ ಪವರ್ ಲಿಫ್ಟರ್ ಕವಿತಾ ದೇವಿ ವರ್ಲ್ಡ್ ರಸ್ಲಿಂಗ್ ಎಂಟರ್'ಟೈನ್'ಮೆಂಟ್ (ಡಬ್ಲ್ಯೂಡಬ್ಲ್ಯೂಇ)ಯೊಂದಿಗೆ ಸಹಿ ಮಾಡಿಕೊಂಡ...
ಕವಿತಾ ದೇವಿ
ಕವಿತಾ ದೇವಿ
ನವದೆಹಲಿ: ದಿ ಗ್ರೇಟ್ ಡಬ್ಲ್ಯೂಡಬ್ಲ್ಯೂಇ ಕುಸ್ತಿ ಖಲಿ ಶಿಷ್ಯೆ ಹಾಗೂ ಮಾಜಿ ಪವರ್ ಲಿಫ್ಟರ್ ಕವಿತಾ ದೇವಿ ವರ್ಲ್ಡ್ ರಸ್ಲಿಂಗ್ ಎಂಟರ್'ಟೈನ್'ಮೆಂಟ್ (ಡಬ್ಲ್ಯೂಡಬ್ಲ್ಯೂಇ)ಯೊಂದಿಗೆ ಸಹಿ ಮಾಡಿಕೊಂಡ ಭಾರತದ ಪ್ರಪ್ರಥಮ ಮಹಿಳೆಯಾಗಿದ್ದಾರೆ. 
ರಾಜಧಾನಿ ದೆಹಲಿಗೆ ವಿಶೇಷ ಭೇಟಿ ಕೊಟ್ಟಿರುವ ಡಬ್ಲ್ಯೂಡಬ್ಲ್ಯೂಇನ ಹಾಲಿ ಚಾಂಪಿಯನ್ ಜಿಂದರ್ ಮಹಲ್ ಅವರು ಈ ವಿಷಯವನ್ನು ಖಚಿತಪಡಿಸಿದ್ದಾರೆ. 
ಮೂಲತಃ ಹರಿಯಾಣದವರಾಗಿರುವ ಕವಿತಾ ದೇವಿಯವರು ದಿ ಗ್ರೇಟ್ ಖಲಿಯವರಿಂದ ವೃತ್ತಿಪರ ರಸ್ಲಿಂಗ್ ತರಬೇತಿಯನ್ನು ಪಡೆದುಕೊಂಡಿದ್ದಾರೆ. ರಸ್ಲರ್ ಬಿ.ಬಿ.ಬುಲ್ ಬುಲ್ ಅವರೊಂದಿಗೆ ಆಕಸ್ಮಿಕವಾಗಿ ಸ್ಪರ್ಧೆ ನಡೆಸಿದೆ ಬಳಿಕ ಕವಿತಾ ಅವರಿಗೆ ಖ್ಯಾತಿ ಪಡೆದುಕೊಂಡಿದ್ದರು. ಬಿ.ಬಿ. ಬುಲ್ ಬುಲ್ ಅವರೊಂದಿಗಿನ ಕವಿತಾ ದೇವಿಯವರ ಕುಸ್ತಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದಲ್ಲದೆ, 2016ರಲ್ಲಿ ದಕ್ಷಿಣ ಏಷ್ಯನ್ ಗೇಮ್ಸ್ ನಲ್ಲಿಯೂ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರು. 
ಇದೀಗ ಅಧಿಕೃತವಾಗಿ ಡಬ್ಲ್ಯೂಡಬ್ಲ್ಯೂಇಗೆ ಪಾದಾರ್ಪಣೆ ಮಾಡಿರುವ ಕವಿತಾ ದೇವಿಯವರು ಡಬ್ಲ್ಯೂಡಬ್ಲ್ಯೂಇ ರಿಂಗ್ ನಲ್ಲಿ ಸ್ಪರ್ಧಿಸಿದ ಮೊದಲ ಭಾರತೀಯ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. 2018ರ ಜನವರಿ ತಿಂಗಳಿನಲ್ಲಿ ಫ್ಲೋರಿಡಾದ ಒರ್ಲಾಂಡೋದ ಡಬ್ಲ್ಯೂಡಬ್ಲ್ಯೂಇ ಪ್ರದರ್ಶನ ಕೇಂದ್ರದಲ್ಲಿ ಕವಿತಾ ದೇವಿಯವರ ತರಬೇತಿ ಆರಂಭವಾಗಲಿದೆ ಎಂದು ವರದಿಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com