ಹಾಕಿ ಇಂಡಿಯಾದಿಂದ ಮುಖ್ಯ ಕೋಚ್ ರೋಲಂಟ್ ಓಲ್ಟಮಸ್‌ ವಜಾ

ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ಕಾಣದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಾಕಿ ಕೋಚ್ ರೋಲಂಟ್ ಓಲ್ಟಮಸ್...
ರೋಲಂಟ್ ಓಲ್ಟಮಸ್‌
ರೋಲಂಟ್ ಓಲ್ಟಮಸ್‌
ನವದೆಹಲಿ: ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ಕಾಣದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಾಕಿ ಕೋಚ್ ರೋಲಂಟ್ ಓಲ್ಟಮಸ್ ಅವರನ್ನು ಹಾಕಿ ಇಂಡಿಯಾ ಶನಿವಾರ ವಜಾಗೊಳಿಸಿದೆ.
ಮುಖ್ಯ ಕೋಚ್ ಹುದ್ದೆಯಿಂದ ಹಾಲೆಂಡ್ ಮೂಲದ ಓಲ್ಟಮಸ್ ಅವರನ್ನು ವಜಾಗೊಳಿಸಿರುವ ಹಾಕಿ ಇಂಡಿಯಾ, ಅವರ ಸ್ಥಾನಕ್ಕೆ ತಾತ್ಕಾಲಿಕವಾಗಿ ಹೈ ಪರ್ಫಾರ್ಮೆನ್ಸ್ ನಿರ್ದೇಶಕ ಡೇವಿಡ್ ಜಾನ್ ಅವರನ್ನು ನೇಮಕ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹಾಕಿ ಇಂಡಿಯಾ ಹೈ ಪರ್ಫಾರ್ಮೆನ್ಸ್ ಮತ್ತು ಅಭಿವೃದ್ಧಿ ಸಮಿತಿ ನಡೆಸಿದ ಮೂರು ದಿನಗಳ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಸಭೆ ಇಂದು ಅಂತ್ಯವಾಗಿದೆ.
ಕಳೆದ ವರ್ಷದ ಪ್ರದರ್ಶನಕ್ಕೆ ಹೋಲಿಸಿದರೆ ಈ ವರ್ಷದ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿಲ್ಲ. 2018ರ ಹಾಕಿ ವಿಶ್ವ ಕಪ್‌ ಮತ್ತು 2020ರ ಒಲಿಂಪಿಕ್ಸ್‌ ಪಂದ್ಯಗಳನ್ನು ಗಮನದಲ್ಲಿರಿಸಿಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com