ನವದೆಹಲಿ: ತಮ್ಮ ಭವಿಷ್ಯದ ಗುರಿಗಳನ್ನು ಸಾಧಿಸುವ ಉದ್ದೇಶದಿಂದ ಲಂಡನ್ ಒಲಿಂಪಿಕ್ಸ್ ನ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾನ್ ಮತ್ತೆ ತಮ್ಮ ಮಾಜಿ ಕೋಚ್ ಪುಲ್ಲೇಲ ಗೋಪಿಚಂದ್ ಅವರ ತರಬೇತಿ ಪಡೆಯಲು ನಿರ್ಧರಿಸಿದ್ದಾರೆ.
ಈ ಕುರಿತು ಸೈನಾ ತಮ್ಮ ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದಾರೆ. ಸದ್ಯದ ಮಟ್ಟಿಗೆ ಮತ್ತೊಮ್ಮೆ ಗೋಪಿಚಂದ್ ಅಕಾಡೆಮಿಗೆ ಸೇರಲು ಯೋಚಿಸುತ್ತಿದ್ದು ಈ ಬಗ್ಗೆ ಗೋಪಿ ಸರ್ ಬಳಿ ಮಾತುಕತೆ ನಡೆಸಿದ್ದೇನೆ. ನನಗೆ ಮತ್ತೆ ಸಹಾಯ ಮಾಡಲು ಒಪ್ಪಿಕೊಂಡ ಅವರಿಗೆ ಧನ್ಯವಾದಗಳು ಎಂದು ಸೈನಾ ಟ್ವೀಟ್ ಮಾಡಿದ್ದಾರೆ.
ನನ್ನ ವೃತ್ತಿ ಜೀವನದ ಈ ಹಂತದಲ್ಲಿ ಗುರಿ ಸಾಧಿಸಲು ಅವರು ಸಹಾಯ ಮಾಡುತ್ತಾರೆಂದು ನಾನು ಭಾವಿಸಿದ್ದೇನೆ ಎಂದು ಸೈನಾ ಟ್ವೀಟ್ ಮಾಡಿದ್ದಾರೆ.
ಗೋಪಿಚಂದ್ ಮಾರ್ಗದರ್ಶನದಡಿಯಲ್ಲಿ ಸೈನಾ 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗಳಿಸಿದ್ದರು.
For a while I've been thinking about moving my training base back to the Gopichand academy and I had a discussion about this with Gopi sir