ಡಬ್ಲ್ಯೂಡಬ್ಲ್ಯೂಇನಲ್ಲಿ ಭಾರತದ ಕವಿತಾ ದೇವಿ ಸಖತ್ ಫೈಟ್! ವಿಡಿಯೋ ವೈರಲ್

ವರ್ಲ್ಡ್ ರೆಸ್ಲಿಂಗ್ ಎಂಟರ್ಟೈನ್ಮೆಂಟ್(ಡಬ್ಲ್ಯೂಡಬ್ಲ್ಯೂಇ)ನಲ್ಲಿ ಭಾರತದ ಕವಿತಾ ದೇವಿ ಸ್ಫರ್ಧಿಸಿರುವ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ...
ಕವಿತಾ ದೇವಿ
ಕವಿತಾ ದೇವಿ
Updated on
ನವದೆಹಲಿ: ವರ್ಲ್ಡ್ ರೆಸ್ಲಿಂಗ್ ಎಂಟರ್ಟೈನ್ಮೆಂಟ್(ಡಬ್ಲ್ಯೂಡಬ್ಲ್ಯೂಇ)ನಲ್ಲಿ ಭಾರತದ ಕವಿತಾ ದೇವಿ ಸ್ಫರ್ಧಿಸಿರುವ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ. 
ಡಬ್ಲ್ಯೂಡಬ್ಲ್ಯೂಇ ಕುಸ್ತಿ ಪಟು ದಿ ಗ್ರೇಟ್ ಖಲಿ ಶಿಷ್ಯೆ ಕವಿತಾ ದೇವಿ ಮೊದಲ ವಿಶ್ವ ಕುಸ್ತಿ ಎಂಟರ್ ಟೈನ್ ಮೆಂಟ್ ಕೂಟದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಕಿತ್ತಳೆ ಬಣ್ಣದ ಚೂಡಿ, ದುಪ್ಪಟ್ಟಾ ತೊಟ್ಟುಕೊಂಡೇ ಎದುರಾಳಿ ವಿರುದ್ಧ ಕದನ ನಡೆಸಿ ಭಾರೀ ಸುದ್ದಿಯಾಗಿದ್ದಾರೆ. 
ನ್ಯೂಜಿಲೆಂಡ್ ನ ಡಕೋಟಾ ಕಾಯ್ ಅವರ ವಿರುದ್ಧ ಸ್ಪರ್ಧಿಸಿದ ಕವಿತಾ ದೇವಿ ವೀರಾವೇಷದಿಂದ ಹೋರಾಡಿದರು. ಆದರೂ ಕೊನೆಯಲ್ಲಿ ಕವಿತಾ ದೇವಿ ಪಂದ್ಯದಲ್ಲಿ ಸೋತ್ತಿದ್ದರು ಕೋಟ್ಯಂತರ ಭಾರತೀಯ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ. 
ಹರ್ಯಾಣ ಮೂಲದ ಕವಿತಾ ದೇವಿ ಅವರು ಡಬ್ಲ್ಯೂಡಬ್ಲ್ಯೂಇನಲ್ಲಿ ಭಾಗವಹಿಸಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. ಇನ್ನು ದಿ ಗ್ರೇಟ್ ಖಲಿ ಡಬ್ಲ್ಯೂಡಬ್ಲ್ಯೂಇನಲ್ಲಿ ಸ್ಫರ್ಧಿಸಿದ್ದ ಮೊದಲ ಭಾರತೀಯನಾಗಿದ್ದರು.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com