ಸನ್ನಿ ಲಿಯೋನ್ ಕೇರಳ ಕೋಬ್ರಾ ಪ್ರಾಂಚೈಸಿ ಸಹ ಮಾಲಕಿ ಮತ್ತು ಬ್ರ್ಯಾಂಡ್ ಅಂಬಾಸಿಡರ್

ಪ್ರೀಮಿಯರ್ ಫುಟ್ಸಾಲ್ ಸೀಸನ್ -2 ಪಂದ್ಯಾವಳಿಗೆ ಸೆಪ್ಟಂಬರ್ 15 ರಂದು ಮುಂಬಯಿಯಲ್ಲಿ ಚಾಲನೆ ದೊರೆಯಲಿದೆ. ವೊರ್ಲಿಯ ಎನ್ ಎಸ್ ಸಿಐ ನಲ್ಲಿ ಸೆಪ್ಟಂಬರ್ ...
ಸನ್ನಿ ಲಿಯೋನ್
ಸನ್ನಿ ಲಿಯೋನ್
ನವದೆಹಲಿ: ಪ್ರೀಮಿಯರ್ ಫುಟ್ಸಾಲ್  ಸೀಸನ್ -2 ಪಂದ್ಯಾವಳಿಗೆ ಸೆಪ್ಟಂಬರ್ 15 ರಂದು ಮುಂಬಯಿಯಲ್ಲಿ ಚಾಲನೆ ದೊರೆಯಲಿದೆ. ವೊರ್ಲಿಯ ಎನ್ ಎಸ್ ಸಿಐ ನಲ್ಲಿ  ಸೆಪ್ಟಂಬರ್ 17ರ ವರೆಗೆ ಪಂದ್ಯಗಳು ನಡೆಯಲಿವೆ.
ಕೊಚ್ಚಿ ಮೂಲದ ಕೇರಳ ಕೋಬ್ರಾ ತಂಡಕ್ಕೆ ಬಾಲಿವುಡ್ ನಟಿ ಸನ್ನಿ ಲಿಯೋನ್ ಬ್ರಾಂಡ್ ಅಂಬಾಸಿಡರ್ ಆಗಿದ್ದು ತಂಡದ ಸಹ ಮಾಲಕಿಯೂ ಆಗಿದ್ದಾರೆ ಎಂದು ಪ್ರೀಮಿಯರ್ ಫುಟ್ಸಾಲ್ ಘೋಷಿಸಿದೆ.
ಬೆಂಗಳೂರಿನ ಕೋರಮಂಗಲದ ಕ್ರೀಡಾಂಗಣದಲ್ಲಿ ಸೆಪ್ಟಂಬರ್ 19 ರಿಂದ 24ರ ವರೆಗೆ ಎರಡನೇ ಸುತ್ತಿನ ಪಂದ್ಯಗಳು ನಡೆಯಲಿವೆ. 
ಸೆಪ್ಟಂಬರ್ 26 ರಿಂದ ಅಕ್ಟೋಬರ್ 1 ರ ವರೆಗೆ  ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯಗಳು ದುಬೈನಲ್ಲಿ ನಡೆಯಲಿವೆ ಎಂದು ಪ್ರೀಮಿಯರ್ ಫುಟ್ಸಾಲ್ ತಿಳಿಸಿದೆ.
ಉದ್ಘಾಟನಾ ಸಮಾರಂಭಕ್ಕೆ ಸಾಕರ್ ಲೆಜೆಂಡ್  ಲೂಯಿಸ್ ಫಿಗೊ, ರ್ಯಾನ್ ಗಿಗ್ಸ್, ಪೌಲ್ ಶೋಲ್ಸ್, ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com