ಓಕುಹಾರಗೆ ಮಣಿದ ಸಿಂಧು, ಜಪಾನ್ ಓಪನ್ ಸೂಪರ್ ಸಿರೀಸ್ ನಿಂದ ನಿರ್ಗಮನ

ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಯಾರ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದ ಭಾರತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಗುರುವಾರ ಮತ್ತದೇ ಆಟಗಾರ್ತಿ ನೊಝೊಮಿ ಓಕುಹಾರ ವಿರುದ್ಧ ಜಪಾನ್ ಸೂಪರ್ ಸೀರಿಸ್ ಟೂರ್ನಿಯಲ್ಲಿ ಸೋಲುವ ಮೂಲಕ ಟೂರ್ನಿಯಿಂದಲೇ ಹೊರ ಬಿದ್ದಿದ್ದಾರೆ.
ಪಿವಿ ಸಿಂಧು (ಸಂಗ್ರಹ ಚಿತ್ರ)
ಪಿವಿ ಸಿಂಧು (ಸಂಗ್ರಹ ಚಿತ್ರ)
ಟೋಕಿಯೋ: ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಯಾರ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದ ಭಾರತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಗುರುವಾರ ಮತ್ತದೇ ಆಟಗಾರ್ತಿ ನೊಝೊಮಿ ಓಕುಹಾರ ವಿರುದ್ಧ ಜಪಾನ್  ಸೂಪರ್ ಸೀರಿಸ್ ಟೂರ್ನಿಯಲ್ಲಿ ಸೋಲುವ ಮೂಲಕ ಟೂರ್ನಿಯಿಂದಲೇ ಹೊರ ಬಿದ್ದಿದ್ದಾರೆ.
ಪುರುಷರ ಸಿಂಗಲ್ಸ್ ನಲ್ಲಿ ಕೆ. ಶ್ರೀಕಾಂತ್ ಕ್ವಾರ್ಟರ್ ಫೈನಲ್‌ಗೆ ಪ್ರವೇಶ
ಮತ್ತೊಂದೆಡೆ ಪುರುಷರ ಸಿಂಗಲ್ಸ್ ವಿಭಆಗದಲ್ಲಿ ಭಾರತದ ಕಿಡಾಂಬಿ ಶ್ರೀಕಾಂತ್ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಮೂಲಕ ಪ್ರಶಸ್ತಿ ಭರವಸೆ ಮೂಡಿಸಿದ್ದಾರೆ. ಶ್ರೀಕಾಂತ್, ಹಾಂಕಾಂಗ್‌ ನ ಹು ಯೂನ್ ವಿರುದ್ಧ 21-12 21-11ರ  ಅಂತರದಲ್ಲಿ ಮಣಿಸುವ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಈ ಪಂದ್ಯ ಕೂಡ ಏಕಪಕ್ಷೀಯವಾಗಿತ್ತು. ಕೇವಲ ಅರ್ಧ ತಾಸಿನೊಳಗೆ ಶ್ರೀಕಾಂತ್ ಹು ಯೂನ್ ರನ್ನು ಮಣಿಸಿದರು. ಶ್ರೀಕಾಂತ್ ಅಲ್ಲದೆ ಭಾರತದ ಮತ್ತೋರ್ವ  ಆಟಗಾರ ಎಚ್‌ಎಸ್ ಪ್ರಣೋಯ್ ಕೂಡ  ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದು, ಪ್ರಣೋಯ್ ಚೀನಾ ತೈಪೆಯ ಹ್ಸು ಜೆನ್ ಹಾವೊ ವಿರುದ್ಧ 21-16 23-21ರ ಅಂತರದಲ್ಲಿ ಗೆಲುವಿನ ನಗೆ ಬೀರಿದರು. ಪ್ರಣೋಯ್ ಇದೀಗ ಎರಡನೇ  ಶ್ರೇಯಾಂಕಿತರಾಗಿರುವ ಚೀನಾದ ಶಿ ಯೂಕಿ ಸವಾಲನ್ನು ಎದುರಿಸಲಿದ್ದಾರೆ.
ಇನ್ನೊಂದೆಡೆ ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್‌ಸಾಯ್‌ರಾಜ್ ರಾಂಕಿರೆಡ್ಡಿ ಸೋಲಿನ ಕಹಿ ಅನುಭವಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com