ಕ್ರೀಡೆ
ಕಾಮನ್ ವೆಲ್ತ್ ಕ್ರೀಡಾಕೂಟ: ರೆಸ್ಲಿಂಗ್ ನಲ್ಲಿ ಭಾರತಕ್ಕೆ ಮತ್ತೆ ಮೂರು ಪದಕ, ಚಿನ್ನ ಗೆದ್ದ ಭಜರಂಗ್ ಪುನಿಯಾ
ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಶುಕ್ರವಾರ ಶುಭವಾಗಿ ಪರಿಣಮಿಸಿದ್ದು, ಪುರುಷರ 65 ಕೆಜಿ ವಿಭಾಗದ ರೆಸ್ಲಿಂಗ್ ಸ್ಪರ್ಧೆಯಲ್ಲಿ ಭಾರತದ ಭಜರಂಗ್ ಪುನಿಯಾ ಚಿನ್ನದ ಪದಕ ಗೆದ್ದಿದ್ದಾರೆ.
ಗೋಲ್ಡ್ ಕೋಸ್ಟ್: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಶುಕ್ರವಾರ ಶುಭವಾಗಿ ಪರಿಣಮಿಸಿದ್ದು, ಪುರುಷರ 65 ಕೆಜಿ ವಿಭಾಗದ ರೆಸ್ಲಿಂಗ್ ಸ್ಪರ್ಧೆಯಲ್ಲಿ ಭಾರತದ ಭಜರಂಗ್ ಪುನಿಯಾ ಚಿನ್ನದ ಪದಕ ಗೆದ್ದಿದ್ದಾರೆ.
ಪುರುಷರ 65 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಭಾರತದ ಭಜರಂಗ್ ಪುನಿಯಾ ವೇಲ್ಸ್ ನ ಕೇನ್ ಚಾರಿಗ್ ರನ್ನು 8-0 ಅಂತರದಲ್ಲಿ ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಇನ್ನು ಮಹಿಳೆಯರ ರೆಸ್ಲಿಂಗ್ ವಿಭಾಗದಲ್ಲಿ ಭಾರತದ ಪೂಜಾ ದಂಡಾ ಬೆಳ್ಳಿ ಗೆದ್ದಿದ್ದು, ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಒಡುನಯೋ ಅವರನ್ನು 7-5ರಲ್ಲಿ ಮಣಿಸಿ ಎರಡನೇ ಸ್ಥಾನಕ್ಕೇರಿ ಬೆಳ್ಳಿ ಪದಕ ಪಡೆದಿದ್ದಾರೆ.
ಇನ್ನು ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತದ ದಿವ್ಯಾ ಕಕ್ರನ್ ಬಾಂಗ್ಲಾದೇಶದ ಶೆರಿನ್ ಸುಲ್ತಾನಾ ಅವರನ್ನು ಮಣಿಸುವ ಮೂಲಕ ಕಂಚಿನ ಪದಕ ಪಡೆದಿದ್ದಾರೆ.
ಈ ಮೂರು ಪದಕಗಳ ಮೂಲಕ ಟೂರ್ನಿಯಲ್ಲಿ ಭಾರತದ ಪದಕ ಗಳಿಕೆ 38ಕ್ಕೆ ಏರಿಕೆಯಾಗಿದ್ದು, ಈ ಪೈಕಿ 17 ಚಿನ್ನ, 9 ಬೆಳ್ಳಿ ಹಾಗೂ 12 ಕಂಚಿನ ಪದಕಗಳು ಸೇರಿವೆ.