ಏಷ್ಯನ್‌ ಗೇಮ್ಸ್‌ 2018: ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟ ಪಿವಿ ಸಿಂಧು, ಸೈನಾ ನೆಹ್ವಾಲ್

ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2018ರಲ್ಲಿ ಭಾರತೀಯ ಕ್ರೀಡಾಪಟುಗಳ ಉತ್ತಮ ಪ್ರದರ್ಶನ ಮುಂದುವರೆದಿದ್ದು, ಭಾರತದ ಅನುಭವಿ ಬ್ಯಾಡ್ಮಿಂಟನ್ ತಾರೆಗಳಾದ ಪಿ.ವಿ ಸಿಂಧು ಮತ್ತು ಸೈನಾ ನೆಹ್ವಾಲ್ ಅವರು ಕ್ವಾರ್ಟರ್‌ ಫೈನಲ್ ಪ್ರವೇಶಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಜಕಾರ್ತ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2018ರಲ್ಲಿ ಭಾರತೀಯ ಕ್ರೀಡಾಪಟುಗಳ ಉತ್ತಮ ಪ್ರದರ್ಶನ ಮುಂದುವರೆದಿದ್ದು, ಭಾರತದ ಅನುಭವಿ ಬ್ಯಾಡ್ಮಿಂಟನ್ ತಾರೆಗಳಾದ ಪಿ.ವಿ ಸಿಂಧು ಮತ್ತು ಸೈನಾ ನೆಹ್ವಾಲ್ ಅವರು ಕ್ವಾರ್ಟರ್‌ ಫೈನಲ್ ಪ್ರವೇಶಿಸಿದ್ದಾರೆ.
ಮಹಿಳೆಯರ ಸಿಂಗಲ್ಸ್ ವಿಭಾಗದ ಸ್ಪರ್ಧೆಯಲ್ಲಿ ಸಿಂಧು ವಿಶ್ವದ 22ನೇ ಶ್ರೇಯಾಂಕಿತ ಆಟಗಾರ್ತಿ ಇಂಡೋನೇಷ್ಯಾದ ಗ್ರೆಗೊರಿಯಾ ಮಾರಿಸ್ಕಾ ತುಂಜಂಗ್ ಅವರನ್ನು 21-12, 21-15 ಅಂತರಗಳಿಂದ ಪರಾಭವಗೊಳಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದರು. ಮತ್ತೊಂದು ಪಂದ್ಯದಲ್ಲಿ ಸೈನಾ ನೆಹ್ವಾಲ್ ಅವರು ಇಂಡೋನೇಷ್ಯಾದ ಫಿಟ್ರಾನಿ ಅವರನ್ನು 21-6, 21-14 ನೇರಸೆಟ್‌ಗಳಿಂದ ಸೋಲಿಸುವಲ್ಲಿ ಯಶಸ್ವಿಯಾದರು. ಆರಂಭದಿಂದಲೂ ಉತ್ತಮ ಆಟವಾಡುವಲ್ಲಿ ಯಶಸ್ವಿಯಾದ ಸೈನಾ ಮೊದಲ ಸೆಟ್ ನಲ್ಲಿ 15 ಅಂಕಗಳ ಮುನ್ನಡೆ ಸಾಧಿಸಿದರೆ, ಎರಡನೇ ಸೆಟ್‌ನಲ್ಲಿ ಏಳು ಅಂಕಗಳ ಮುನ್ನಡೆ ಸಾಧಿಸುವ ಗೆಲುವು ದಾಖಲಿಸಿ ಕ್ವಾರ್ಟರ್ ಗೆ ಅರ್ಹತೆ ಪಡೆದರು.
ಈ  ಬಗ್ಗೆ ಪಂದ್ಯಗಳ ಬಳಿಕ ಆಟಗಾರ್ತಿಯರು ಮಾತನಾಡಿದ್ದು, ಪಂದ್ಯದ ಆರಂಭದಿಂದಲೂ ಉತ್ತಮ ಆಟವಾಡುವ ಮೂಲಕ ಕ್ವಾರ್ಟರ್‌ಗೆ ಅರ್ಹತೆ ಪಡೆದಿರುವುದಕ್ಕೆ ಮುಂದಿನ ಸುತ್ತುಗಳಲ್ಲಿ ಇನ್ನೂ ಹೆಚ್ಚಿನ ಆಟವಾಡುವ ಮೂಲಕ ಜಯ ಸಾಧಿಸಿ ಉಪಾಂತ್ಯಕ್ಕೆ ಅರ್ಹತೆ ಪಡೆಯುವೆ ಎಂದು ಪಿವಿ ಸಿಂಧು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಂತೆಯೇ  ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿರುವುದಕ್ಕೆ ಸಂಸತವಾಗಿದೆ. ಮುಂದಿನ ಪಂದ್ಯದಲ್ಲಿ ಇನ್ನೂ ಉತ್ತಮ ಪ್ರದರ್ಶನ ತೋರಿ ಎದುರಾಳಿಯನ್ನು ಸೋಲಿಸುವೆ ಎಂದು ಅನುಭವಿ ಆಟಗಾರ್ತಿ ಸೈನಾ ನೆಹ್ವಾಲ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com