ಏಷ್ಯನ್ ಗೇಮ್ಸ್ ನಲ್ಲಿ ಕಂಚು: ಬೆಳಗಾವಿಯ ಮಲಪ್ರಭಾಗೆ ಮೋದಿ ಅಭಿನಂದನೆ

ಇಂಡೋನೇಷಿಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಕುರಾಶ್‌ ನಲ್ಲಿ ಕಂಚಿನ ಪದಕ ಗಳಿಸಿದ ಬೆಳಗಾವಿ ರೈತನ ಪುತ್ರಿ ಮಲಪ್ರಭಾ ಜಾಧವ್ ಅವರುಗೆ ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ.
ಮಲಪ್ರಭಾ ಜಾಧವ್
ಮಲಪ್ರಭಾ ಜಾಧವ್
ನವದೆಹಲಿ: ಇಂಡೋನೇಷಿಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ  ಕುರಾಶ್‌ ನಲ್ಲಿ ಕಂಚಿನ ಪದಕ ಗಳಿಸಿದ ಬೆಳಗಾವಿ ರೈತನ ಪುತ್ರಿ ಮಲಪ್ರಭಾ ಜಾಧವ್ ಅವರುಗೆ ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ.
ದೇಶಕ್ಕೆ ಕಂಚಿನ ಪದಕ ಗಳಿಸಿಕೊಟ್ಟ ಮಲಪ್ರಭಾ ಅವರಿಗೆ ಅಭಿನಂದನೆಗಳು, ಮಲಪ್ರಭಾ ಅವರದು ಮಹತ್ವದ ಸಾಧನೆಯಾಗಿದೆ ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಜೂಡೋ ಮಾದರಿಯ ಕುರಾಶ್‌ ಕ್ರೀಡೆ ಇದೇ ಮೊದಲ ಬಾರಿಗೆ ಏಷ್ಯನ್ ಗೇಮ್ಸ್ ನಲ್ಲಿ ಸೇರ್ಪಡೆಗೊಂಡಿದೆ.
ಸ್ಪರ್ಧೆಯ 52 ಕೆಜಿ ವಿಭಾಗದಲ್ಲಿ ಬೆಳಗಾವಿಯ ಮಲಪ್ರಭಾ ಕಂಚಿನ ಪದಕ ಗಳಿಸಿ ಸಾಧನೆ ಮೆರೆದಿದ್ದಾರೆ.
19 ವರ್ಷದ ಮಲಪ್ರಭಾ ವಿಶ್ವ ನಂಬರ್ 1 ಉಜ್‌ಬೇಕಿಸ್ತಾನದ ಕ್ರೀಡಾಳುವಿನ ವಿರುದ್ಧ ಸೋಲನುಭವಿಸಿ ಕಂಚಿಒನ ಪದಕ ಗಳಿಸಿದರು.
ಮಲಪ್ರಭಾ ಜಾದವ್ - ಕಿರು ಪರಿಚಯ’
ಬೆಳಗಾವಿ ತಾಲೂಕು ತುರುಮುರಿ ಗ್ರಾಮದ ಮಲಪ್ರಭಾ ಜಾಧವ್ ಯಲ್ಲಪ್ಪ ಮತ್ತು ಶೋಭಾ ದಂಪತಿಯ ನಾಲ್ಕನೇ ಮಗಳಾಗಿದ್ದಾಳೆ. ರೈತರಾದ ಯಲ್ಲಪ್ಪ ಅವರಿಗೆ ನಾಲ್ವರು ಹೆಣ್ಣುಮಕ್ಕಳಿದ್ದು ಒಬ್ಬ ಪುತ್ರನಿದ್ದಾನೆ.
ಮಲಪ್ರಭಾ ಯಲ್ಲಪ್ಪ ಜಾಧವ್ ಇದೇ ತಾನೆ ಪ್ರಥಮ ವರ್ಷದ ಬಿ.ಕಾಂ ವಿದ್ಯಾರ್ಥಿನಿ. ಜುಡೋ  ಕ್ರೀಡಾಪಟುವಾಉಗಿರುವ ಇವರು ವಿಶ್ವ ಶ್ರೇಯಾಂಕದಲ್ಲಿ 15ನೇ ಸ್ಥಾನದಲ್ಲಿದ್ದಾರೆ. ಇವರು ಇದುವರೆಗೆ 7 ಅಂತರಾಷ್ಟ್ರೀಯ, 13  ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡು 6 ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗಳಿಸಿಕೊಂಡಿದ್ದಾರೆ.
ಐದನೇ ತರಗತಿಯಿಂದಲೇ ಕ್ರೀಡೆಯತ್ತ ಆಕರ್ಷಿತರಾಗಿದ್ದ ಮಲಪ್ರಭಾ ಕ್ರೀಡಾ ಶಾಲೆಗೆ ಸೇರಿ ಹೆಚ್ಚಿನ ತರಬೇತಿ ಪಡೆಯುತ್ತಿದ್ದಾರೆ.
2010, 2012 ಮತ್ತು 2013ರಲ್ಲಿ  ಮೂರು ಬಾರಿ ರಾಷ್ಟ್ರೀಯ ಉತ್ತಮ ಕ್ರೀಡಾಪಟು ಪ್ರಶಸ್ತಿ ಲಭಿಸಿರುವ ಮಲಪ್ರಭಾಗೆ 2014ರಲ್ಲಿ ಕರ್ನಾಟಕ ಸರ್ಕಾರ ಏಕಲವ್ಯ ಪ್ರಶಸ್ತಿ ನೀಡಿ ಸನ್ಮಾನಿಸಿದೆ.
"ನನ್ನ ಮಗಳು ಕಂಚಿನ ಪದಕ ಗಳಿಸಿಕೊಂಡಿರುವುದು ನನಗೆ ಅತೀವ ಸಂತಸ ತಂದಿದೆ, ಶಾಲಾ ದಿನದಲ್ಲಿಯೇ ಆಕೆ ಆಟದಲ್ಲಿ ಮುಂದಿದ್ದಳು. ಅವಳ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ" ಮಲಪ್ರಭಾ ತಾಯಿ ಶೋಭಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com