ಸಂಗ್ರಹ ಚಿತ್ರ
ಕ್ರೀಡೆ
ಫುಟ್ ಬಾಲ್ ಆಟಗಾರನಾದ ಜಮೈಕಾದ ರನ್ನಿಂಗ್ ಕಿಂಗ್ ಉಸೇನ್ ಬೋಲ್ಟ್
ಜಮೈಕಾದ ವಿಶ್ವ ದಾಖಲೆಯ ರನ್ನಿಂಗ್ ಕಿಂಗ್ ಉಸೇನ್ ಬೋಲ್ಟ್, ಫುಟ್ ಬಾಲ್ ಆಡುತ್ತಿದ್ದಾರೆ.
ಜಮೈಕಾ: ಜಮೈಕಾದ ವಿಶ್ವ ದಾಖಲೆಯ ರನ್ನಿಂಗ್ ಕಿಂಗ್ ಉಸೇನ್ ಬೋಲ್ಟ್, ಫುಟ್ ಬಾಲ್ ಆಡುತ್ತಿದ್ದಾರೆ.
ಎಂಟು ಬಾರಿಯ ಒಲಿಂಪಿಕ್ ಚಾಂಪಿಯನ್, ‘ಓಟದ ರಾಜ’ ಎಂದೇ ಖ್ಯಾತಿ ಪಡೆದಿರುವ ಉಸೇನ್ ಬೋಲ್ಟ್ ವಿಶ್ವದ ಜನಪ್ರಿಯ ಕ್ರೀಡೆ ಫುಟ್ಬಾಲ್ ಆಡಲು ಸನ್ನದ್ದ್ಧರಾಗಿದ್ದು, ವಿಶ್ವದೆಲ್ಲೆಡೆಯ ಸೆಲೆಬ್ರಿಟಿಗಳು ಹಾಗೂ ಫುಟ್ಬಾಲ್ ಆಟಗಾರರಿರುವ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಅರೆ ಇದೇನಿದು.. ರನ್ನಿಂಗ್ ನಿಂದ ನಿವೃತ್ತಿಯಾದ ಬಳಿಕ ಬೋಲ್ಟ್ ಫುಟ್ ಬಾಲ್ ಆಡುತ್ತಿದ್ದಾರೆಯೇ ಎಂದು ನಿಮಗೆನ್ನಿಸಬಹುದು. ಆದರೆ ಸುದ್ದಿ ಅದಲ್ಲ. ಬೋಲ್ಟ್ ನೆರವಿನಾರ್ಥ ನಿಧಿ ಸಂಗ್ರಹಕ್ಕಾಗಿ ಫುಟ್ ಬಾಲ್ ಪಂದ್ಯವೊಂದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಯುನಿಸೆಫ್‌ಗಾಗಿ ನಡೆಯಲಿರುವ ಪಂದ್ಯದಲ್ಲಿ ಬ್ರಿಟನ್ ಗಾಯಕ ರಾಬ್ಬಿ ವಿಲಿಯಮ್ಸ್ ಇಂಗ್ಲೆಂಡ್ ತಂಡದ ನಾಯಕತ್ವವಹಿಸಿಕೊಳ್ಳಲಿದ್ದಾರೆ. ವಿಶ್ವದೆಲ್ಲೆಡೆಯಲ್ಲಿರುವ ಸಂಕಷ್ಟದಲ್ಲಿರುವ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಈ ಪಂದ್ಯ ಆಯೋಜಿಸಲಾಗಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೋಲ್ಟ್, 'ವೃತ್ತಿಪರ ಫುಟ್ಬಾಲ್ ಆಟಗಾರನಾಗಬೇಕೆನ್ನುವುದು ನನ್ನ ಕನಸಾಗಿತ್ತು. ಫುಟ್ಬಾಲ್‌ನ ದಿಗ್ಗಜ ಆಟಗಾರರ ವಿರುದ್ಧ ಆಡುವುದು ನನ್ನ ಪಾಲಿಗೆ ಮಹತ್ವದ್ದಾಗಿದೆ. ಜೂನ್ 10 ರಂದು ಓಲ್ಡ್ ಟ್ರಾಫೋರ್ಡ್ ನಲ್ಲಿ ಇಂಗ್ಲೆಂಡ್ ವಿರುದ್ಧ ಸಾಕರ್ ರೈಡ್ ತಂಡದ ನಾಯಕತ್ವವಹಿಸಿಕೊಳ್ಳಲಿದ್ದೇನೆ" ಎಂದು ಹೇಳಿದರು.
ಕಳೆದ ವರ್ಷ ಅಥ್ಲೆಟಿಕ್ಸ್‌ನಿಂದ ನಿವೃತ್ತಿಯಾದ ಬಳಿಕ ಬೋಲ್ಟ್ ಅವರು ತಮ್ಮ ವೃತ್ತಿಯನ್ನು ಬದಲಿಸುವ ಬಯಕೆ ವ್ಯಕ್ತಪಡಿಸಿದ್ದು ವೃತ್ತಿಪರ ಫುಟ್ಬಾಲ್ ಆಟಗಾರನಾಗುವುದು ನನ್ನ ದೊಡ್ಡ ಕನಸು. ಈ ಯೋಚನೆಯೇ ನನಗೆ ಭಯ ಮೂಡಿಸಿದೆ. ನನಗೆ ಈ ಪಂದ್ಯದಲ್ಲಿ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ’’ ಎಂದು ಸಂದರ್ಶನವೊಂದರಲ್ಲಿ ಬೋಲ್ಟ್ ಹೇಳಿದ್ದಾರೆ.
ಖ್ಯಾತ ಅಥ್ಲೆಟಿಕ್ಸ್ ಆಟಗಾರ ಬೋಲ್ಟ್ 100 ಹಾಗೂ 200 ಮೀ. ಓಟದಲ್ಲಿ ಸತತ ಮೂರು ಒಲಿಂಪಿಕ್ ಗೇಮ್ಸ್‌ನಲ್ಲಿ ಚಿನ್ನ ಜಯಿಸಿದ ವಿಶ್ವದ ಏಕೈಕ ಓಟಗಾರನಾಗಿದ್ದಾರೆ. 100 ಮೀ. ದೂರವನ್ನು 9.58 ಸೆಕೆಂಡ್‌ನಲ್ಲಿ ಹಾಗೂ 200 ಮೀ. ದೂರವನ್ನು 19.19 ಸೆಕೆಂಡ್‌ನಲ್ಲಿ ಗುರಿ ತಲುಪಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 2009ರಲ್ಲಿ ಬರ್ಲಿನ್‌ನಲ್ಲಿ ಈ ಎರಡು ವಿಶ್ವ ದಾಖಲೆ ನಿರ್ಮಿಸಿದ್ದರು.

