ಒಲಂಪಿಕ್ಸ್ ಗುರಿ: ಉಭಯ ಕೋರಿಯಾಗಳಿಂದ ಒಂದೇ ಹಾಕಿ ತಂಡ!

ಮುಂದಿನ ತಿಂಗಳು ನಡೆಯಲಿರುವ ವಿಂಟರ್ ಒಲಂಪಿಕ್ಸ್ ನ್ನು ಗುರಿಯಾಗಿರಿಸಿಕೊಂಡು ಉಭಯ ಕೋರಿಯಾಗಳು ಒಂದೇ ಹಾಕಿ ತಂಡವನ್ನು ಕಳಿಸಲಿವೆ.
ಒಲಂಪಿಕ್ಸ್
ಒಲಂಪಿಕ್ಸ್
Updated on
ಸಿಯೋಲ್: ಮುಂದಿನ ತಿಂಗಳು ನಡೆಯಲಿರುವ ವಿಂಟರ್ ಒಲಂಪಿಕ್ಸ್ ನ್ನು ಗುರಿಯಾಗಿರಿಸಿಕೊಂಡು ಉಭಯ ಕೋರಿಯಾಗಳು ಒಂದೇ ಹಾಕಿ ತಂಡವನ್ನು ಕಳಿಸಲಿವೆ. 
ಉಭಯ ಕೋರಿಯಾಗಳನ್ನು ಮಹಿಳಾ ಹಾಕಿ ತಂಡ ಪ್ರತಿನಿಧಿಸಲಿದೆ. ಉತ್ತರ-ದಕ್ಷಿಣ ಕೋರಿಯಾ ನಡುವೆ ಭಿನ್ನಾಭಿಪ್ರಾಯಗಳಿದ್ದರೂ ಮಾತುಕತೆ ವೇಳೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಎರಡು ವರ್ಷಗಳ ನಂತರ ಉತ್ತರ ಕೋರಿಯಾ ಹಾಗೂ ದಕ್ಷಿಣ ಕೋರಿಯಾ ನಡುವೆ ಕಳೆದ ಒಂದು ವಾರದಿಂದ ಮಾತುಕತೆ ಪ್ರಾರಂಭವಾಗಿದೆ.    
ಮಾತುಕತೆಯಲ್ಲಿ ಒಲಂಪಿಕ್ಸ್ ವಿಷಯ ಪ್ರಸ್ತಾಪವಾಗಿದ್ದು ಉಭಯ ದೇಶಗಳೂ ಒಪ್ಪಿರುವ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಉಭಯ ಕೋರಿಯಾಗಳು ಒಲಂಪಿಕ್ಸ್ ನಲ್ಲಿ ಒಟ್ಟಾಗಿ ಭಾಗವಹಿಸುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com