ಪ್ರೊ ಕಬಡ್ಡಿ
ಪ್ರೊ ಕಬಡ್ಡಿ

2018 ಪ್ರೊ ಕಬಡ್ಡಿ ಹರಾಜು: 1.51 ಕೋಟಿಗೆ ಮೋನು ಗೋಯತ್ ಹರಾಜು, 3 ಕನ್ನಡಿಗರು ಸೇಲ್

2018ರ ಪ್ರೊ ಕಬಡ್ಡಿ ಹರಾಜು ಪ್ರಕ್ರಿಯೆ ಆರಂಭವಾಗಿದ್ದು ಮೊದಲ ದಿನದ ಹರಾಜಿನಲ್ಲಿ ಆರು ಮಂದಿ ಆಟಗಾರರು 1 ಕೋಟಿಗೂ ಅಧಿಕ ಮೊತ್ತಕ್ಕೆ ಹರಾಜಾಗಿದ್ದಾರೆ...
ಮುಂಬೈ: 2018ರ ಪ್ರೊ ಕಬಡ್ಡಿ ಹರಾಜು ಪ್ರಕ್ರಿಯೆ ಆರಂಭವಾಗಿದ್ದು ಮೊದಲ ದಿನದ ಹರಾಜಿನಲ್ಲಿ ಆರು ಮಂದಿ ಆಟಗಾರರು 1 ಕೋಟಿಗೂ ಅಧಿಕ ಮೊತ್ತಕ್ಕೆ ಹರಾಜಾಗಿದ್ದಾರೆ. 
ಮೊದಲ ದಿನ ಮೋನು ಗೋಯತ್ ಬರೋಬ್ಬರಿ 1.51 ಕೋಟಿ ರುಪಾಯಿಗೆ ಹರಿಯಾಣ ಸ್ಟೀಲರ್ಸ್ ಪಾಲಾದರು. ಇದು ಪ್ರೊ ಕಬಡ್ಡಿ ಇತಿಹಾಸದಲ್ಲೇ ಗರಿಷ್ಠ ಮೊತ್ತ. ಗುರುವಾರ ಇನ್ನೂ ಹರಾಜು ಬಾಕಿಯಿದ್ದು ಅಲ್ಲಿ ಇದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಆಟಗಾರರು ಮಾರಾಟವಾಗುವ ಸಾಧ್ಯತೆ ಇದೆ. 
ಕಳೆದ ಆವೃತ್ತಿಯಲ್ಲಿ ತೆಲುಗು ಟೈಟಾನ್ಸ್ ಪರ ಆಡಿದ್ದ ರಾಹುಲ್ ಚೌಧರಿ ಅವರನ್ನು 1.29 ಕೋಟಿ ರುಪಾಯಿ ನೀಡಿ ಟೈಟಾನ್ಸ್ ತಮ್ಮಲ್ಲೇ ಉಳಿಸಿಕೊಂಡಿದೆ. ದೀಪಕ್ ನಿವಾಸ್ ಹೂಡಾ. 1.15 ಕೋಟಿಗೆ ಜೈಪುರ ಪಿಂಕ್ ಪ್ಯಾಂಥರ್ಸ್ ಸೇಲಾದರು. ನಿತಿನ್ ತೋಮರ್ ಸಹ 1.15 ಕೋಟಿಗೆ ಪುನೇರಿ ಪಲ್ಟಾನ್ ತಂಡದ ಪಾಲಾದರು. ರೈಡರ್ ರಿಷಾಂಕ್ ದೇವಾಡಿಗ ಅವರನ್ನು 1.11 ಕೋಟಿ ರುಪಾಯಿಗೆ ಯುಪಿ ಯೋಧಾ ಖರೀದಿಸಿತ್ತು. ಇನ್ನು ವಿದೇಶಿ ಆಟಗಾರ ಫಜಲ್ ಅಟ್ರಾಚೆಲಿ 1 ಕೋಟಿ ರುಪಾಯಿಗೆ ಯು ಮುಂಬಾ ತಂಡಕ್ಕೆ ಮಾರಾಟವಾದರು. 
ಮೂವರು ಕನ್ನಡಿಗರಾದ ಸುಕೇಶ್ ಹೆಡ್ಗೆ 28 ಲಕ್ಷ ಹಾಗೂ ಜೆ.ದರ್ಶನ್ 28 ಲಕ್ಷಕ್ಕೆ ತಮಿಳ್ ತಲೈವಾಸ್ ಗೆ ಮಾರಾಟವಾಗಿದ್ದಾರೆ. ಜೀವಾ ಕುಮಾರ್ 45 ಲಕ್ಷಕ್ಕೆ ಯುಪಿ ಯೋಧಾಕ್ಕೆ ಮಾರಾಟವಾಗಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com