ಯುಎಸ್ ಓಪನ್: ಮೊಣಕಾಲು ಸಮಸ್ಯೆ, ಟೂರ್ನಿಯಿಂದ ಹೊರನಡೆದ ನಾಡಾಲ್!

ಮೊಣಕಾಲು ನೋವಿನ ಕಾರಣ ವಿಶ್ವ ನಂಬರ್ 1 ಆಟಗಾರ ಸ್ಪೇನ್ ನ ರಾಫೆಲ್ ನಡಾಲ್ ಪ್ರತಿಷ್ಠಿತ ಯುಎಸ್ ಓಪನ್ ಗ್ರ್ಯಾನ್‌ಸ್ಲಾಮ್ ಪಂದ್ಯಾವಳಿಯಿಂದ ನಿವೃತ್ತರಾಗಿದ್ದಾರೆ.
ರಾಫೆಲ್ ನಡಾಲ್
ರಾಫೆಲ್ ನಡಾಲ್
ನ್ಯೂಯಾರ್ಕ್: ಮೊಣಕಾಲು ನೋವಿನ ಕಾರಣ ವಿಶ್ವ ನಂಬರ್1 ಆಟಗಾರ ಸ್ಪೇನ್ ನ ರಾಫೆಲ್ ನಡಾಲ್ ಪ್ರತಿಷ್ಠಿತ ಯುಎಸ್ ಓಪನ್ ಗ್ರ್ಯಾನ್‌ಸ್ಲಾಮ್ ಪಂದ್ಯಾವಳಿಯಿಂದ ನಿವೃತ್ತರಾಗಿದ್ದಾರೆ.
ಪುರುಷ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವ ನಂ. 1 ನಡಾಲ್  ಆಸ್ಟ್ರೀಯಾದ ಡೊಮಿನಿಕ್ ಥೀಮ್ ಅವರನ್ನು ಮಣಿಸಿ ಸೆಮಿಫೈನಲ್ಸ್ ತಲುಪಿದ ನಡಾಲ್ ಗೆ ಮೊಣಕಾಲು ಸಮಸ್ಯೆ ಉಂತಾಗಿದ್ದು ಸೆಮಿಫೈನಲ್ಸ್ ನಿಂದ ಹಿಂದೆ ಸರಿದಿದ್ದಾರೆ.
ಇದೇ ವೇಳೆ ಜಪಾನ್ ನ ಕಿ ನಿಶಿಕೋರಿ ವಿರುದ್ಧ ಜಯ ಸಾಧಿಸಿದ ಸರ್ಬಿಯಾದ ನೊವಾಕ್ ಜೊಕೊವಿಚ್ ಫೈನಲ್ ಸುತ್ತಿಗೆ ಪ್ರವೇಶ ಗಿಟ್ಟಿಸಿದ್ದಾರೆ.
ಸೆಮಿ ಫೈನಲ್ಸ್ ಹಂತದಲ್ಲಿ ನಡಾಲ್ ಅರ್ಜೆಂಟೈನಾದ ಮಾರ್ಟಿನ್ ಡೆಲ್ ಪೊಟ್ರೋ ಅವರನ್ನು ಎದುರಿಸಿದ್ದರು. ಎರಡು ಗಂಟೆ ನಡೆದ ಹೋರಾಟದಲ್ಲಿ ನಡಾಲ್ 7-6, 6-2  ಅಂಕ ಗಳಿಸಿದ್ದರು. ಇಷ್ಟರಲ್ಲಿ ಮೊಣಕಾಲು ನೋವು ಪ್ರಾರಂಬವಾಗಿ ಅನಿವಾರ್ಯವಾಗಿ ಆಟವನ್ನು ನಿಲ್ಲಿಸಬೇಕಾಯಿತು. 
ಇದರೊಡನೆ ಡೆಲ್ ಪೊಟ್ರೋ ಪಂದ್ಯಾವಳಿಯ ಅಂತಿಮ ಘಟ್ಟಕ್ಕೆ ಲಗೆ ಇಟ್ಟಿದ್ದಾರೆ.
ಭಾನುವಾರ ನಡೆಯುವ ಯುಎಸ್ ಓಪನ್ ಫೈನಲ್ಸ್ ಪಂದ್ಯದಲ್ಲಿ ಡೆಲ್ ಪೊಟ್ರೋ ಜೊಕೊವಿಚ್ ಅವರನ್ನು ಎದುರಿಸಲಿದ್ದಾರೆ.
ಸೆರೆನಾ-ಒಸಾಕಾ ಫೈನಲ್ ಗೆ
ಯುಎಸ್ ಓಪನ್ ಮಹಿಳಾ ವಿಭಾಗದ ಸೆಮಿಫೈನಲ್ಸ್ ನಲ್ಲಿ ಅನಾಸ್ತಾಸಿಜ ಸೇವಾಸ್ಟೋವಾ ವಿರುದ್ದ 6-3, 6-0ರ ಅಂತರದ ಗೆಲುವು ದಾಖಲಿಸಿದ ಸೆರೆನಾ, ವಿಲಿಯಮ್ಸ್ ಪಂದ್ಯಾವಳಿಯ ಅಂತಿಮ ಸುತ್ತು ಪ್ರವೇಶಿಸಿದ್ದಾರೆ.
ಇನ್ನೊಂದೆಡೆ ಮಡಿಸನ್ ಕೇಯ್ಸ್ ವಿರುದ್ಧ 6-2, 6-4ರ ಅಂತರದ ಗೆಲುವು ದಾಖಲಿಸಿದ ಜಪಾನ್‌ನ ನವೊಮಿ ಒಸಾಕಾ ಕೂಡ ಫೈನಲ್ಸ್ ತಲುಪಿದ್ದು ಇದೀಗ ಜಪಾನ್ ನ ಒಸಾಕಾ ಹಾಗೂ ಅಮೆರಿಕಾದವರೇ ಆದ ಸೆರೇನಾ ನಡುವೆ ಪ್ರಶಸ್ತಿಗಾಗಿ ಕಾದಾಟ ನಡೆಯಲಿದೆ.
ಇದುವರೆಗೆ ಆರು ಬಾರಿ ಯುಎಸ್ ಓಪನ್ ಚಾಂಪಿಯನ್ ಆಗಿರುವ ಸೆರೆನಾ23ನೇ ಗ್ರ್ಯಾನ್‌ಸ್ಲಾಮ್ ಕಿರೀಟ ಧರಿಸಲು ಕಾಯುತ್ತಿದ್ದಾರೆ. ಇನ್ನೊಂದೆಡೆ ಅಮೆರಿಕಾ ಓಪನ್ ಫೈನಲ್ ತಲುಪಿದ ಜಪಾನ್ ನ ಮೊದಲ ಆಟಗಾರ್ತಿಯಾಗಿ ಒಸಾಕಾ ಮಿಂಚಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com