ಚಾಂಪಿಯನ್ ಜಾಕೋವಿಕ್
ಕ್ರೀಡೆ
ನೊವಾಕ್ ಜಾಕೋವಿಕ್ ಅಮೆರಿಕ ಓಪನ್ 2018ರ ಚಾಂಪಿಯನ್!
ಪ್ರತಿಷ್ಠಿತ 2018ನೇ ಸಾಲಿನ ಅಮೆರಿಕ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಸರ್ಬಿಯಾ ಆಟಗಾರ ನೊವಾಕ್ ಜಾಕೋವಿಕ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.
ವಾಷಿಂಗ್ಟನ್: ಪ್ರತಿಷ್ಠಿತ 2018ನೇ ಸಾಲಿನ ಅಮೆರಿಕ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಸರ್ಬಿಯಾ ಆಟಗಾರ ನೊವಾಕ್ ಜಾಕೋವಿಕ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.
ನಿನ್ನೆ ನಡೆದ ಪೈನಲ್ ಪಂದ್ಯದಲ್ಲಿ ಅರ್ಜೆಂಟೀನಾದ ಪ್ರಬಲ ಆಟಗಾರ ಜುವಾನ್ ಮಾರ್ಟಿನ್ ಡೆಲ್ ಪೊಟ್ರೋ ಅವರನ್ನು 6-3, 7-6 (7/4), 6-3 ನೇರ ಸೆಟ್ ಗಳ ಅಂತರದಲ್ಲಿ ಮಣಿಸಿದರು. ಆ ಮೂಲಕ ಮೂರನೇ ಬಾರಿಗೆ ಅಮೆರಿಕ ಓಪನ್ ಪ್ರಶಸ್ತಿಗೆ ಜಾಕೋವಿಕ್ ಮುತ್ತು ನೀಡಿದರು. ಅಂತೆಯೇ ಇದು ಅವರ ವೃತ್ತಿ ಜೀವನದ 14ನೇ ಗ್ರ್ಯಾಂಡ್ ಸ್ಲಾಮ್ ಆಗಿದೆ.
ಪೀಟೆ ಸಂಪ್ರಾಸ್ ದಾಖಲೆ ಸರಿಗಟ್ಟಿದ ಜಾಕೋವಿಕ್
ಇದೇ ವೇಳೆ ತಮ್ಮ ವೃತ್ತಿ ಜೀವನದ 14ನೇ ಗ್ರ್ಯಾಂಡ್ ಸ್ಲಾಮ್ ಗೆದ್ದ ಜಾಕೋವಿಕ್, ಅಮೆರಿಕದ ಟೆನ್ನಿಸ್ ದಂತಕಥೆ ಪೀಟೆ ಸಂಪ್ರಾಸ್ ದಾಖಲೆ ಸರಿಗಟ್ಟಿದರು. ಸಂಪ್ರಾಸ್ ಕೂಡ ಒಟ್ಟು 14 ಗ್ರ್ಯಾಂಡ್ ಸ್ಲಾಮ್ ಗಳನ್ನು ಗೆದ್ದಿದ್ದರು. ಇನ್ನು ಸ್ವಿಸ್ ಟೆನ್ನಿಸ್ ದಂತಕಥೆ ರೋಜರ್ ಫೆಡರರ್ 20 ಗ್ರ್ಯಾಂಡ್ ಸ್ಲಾಮ್ ಜಯಿಸಿದ್ದು ಪಟ್ಟಿಯಲ್ಲಿ ಅಗ್ರ ಸ್ಥಾನಿಯಾಗಿದ್ದಾರೆ. ಅವರ ಬಳಿಕದ ಸ್ಥಾನದಲ್ಲಿ ಸ್ಪಾನಿಷ್ ಆಟಗಾರ ನಡಾಲ್ ಇದ್ದು, ಒಟ್ಟು 17 ಗ್ರ್ಯಾಂಡ್ ಸ್ಲಾಮ್ ಗೆದ್ದಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ಜಾಕೋವಿಕ್ ನಾನು ಚಿಕ್ಕವನಿದ್ದಾಗ ಡೆಲ್ ಪೊಟ್ರೋ ಆವರ ಆಟವನ್ನು ನೋಡಿ ಬೆಳೆದೆ. ಈಗ ಅವರ ಸಾಧನೆಗೆ ಹತ್ತಿರವಾಗಿದ್ದು ಅತೀವ ಸಂತಸ ತಂದಿದೆ. ಯಾವುದೇ ಆಟಗಾರನಿಗೂ ಪೋಟ್ರೋ ಸ್ಪೂರ್ತಿದಾಯಕ ಆಟಗಾರ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ