ಸಚಿನ್ ತೆಂಡೂಲ್ಕರ್
ಕ್ರೀಡೆ
ದಿಢೀರ್ ಅಂತಾ ಕೇರಳ ಬ್ಲಾಸ್ಟರ್ಗೆ ಸಚಿನ್ ಗುಡ್ ಬೈ ಹೇಳಿದ್ದೇಕೆ, ಅಸಲಿ ಕಾರಣವೇನು?
ಇಂಡಿಯನ್ ಸೂಪರ್ ಲೀಗ್(ಐಎಸ್ಎಲ್) ಕೇರಳ ಬ್ಲಾಸ್ಟರ್ಸ್ ಹುಟ್ಟು ಹಾಕುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಇದೀಗ ದೇಶದ ಜನಪ್ರಿಯ ಫುಟ್ಬಾಲ್ ಕ್ಲಬ್ ಗೆ ಗುಡ್ ಬೈ ಹೇಳಿದ್ದಾರೆ...
ಕೊಚ್ಚಿ: ಇಂಡಿಯನ್ ಸೂಪರ್ ಲೀಗ್(ಐಎಸ್ಎಲ್) ಕೇರಳ ಬ್ಲಾಸ್ಟರ್ಸ್ ಹುಟ್ಟು ಹಾಕುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಇದೀಗ ದೇಶದ ಜನಪ್ರಿಯ ಫುಟ್ಬಾಲ್ ಕ್ಲಬ್ ಗೆ ಗುಡ್ ಬೈ ಹೇಳಿದ್ದಾರೆ.
ನಾಲ್ಕು ವರ್ಷಗಳ ಬಳಿಕ ಸಚಿನ್ ತೆಂಡೂಲ್ಕರ್ ಅವರು ಐಎಸ್ಎಲ್ ಕೇರಳ ಬ್ಲಾಸ್ಟರ್ಸ್ ನಲ್ಲಿದ್ದ ಎಲ್ಲ ಶೇರುಗಳನ್ನು ಮಾರಾಟ ಮಾಡಿದ್ದು ಸಚಿನ್ ಅವರ ಈ ನಡೆ ಇದೀಗ ಅಭಿಮಾನಿಗಳಗ ಬೇಸರಕ್ಕೆ ಕಾರಣವಾಗಿದೆ.
2014ರಲ್ಲಿ ಕೇರಳ ಬ್ಲಾಸ್ಟರ್ಸ್ ತಂಡವು ರೂಪುಗೊಂಡಿತ್ತು. ಆರಂಭದಲ್ಲಿ ಹೆಚ್ಚಿನ ಶೇರು ಹೊಂದಿದ್ದ ಸಚಿನ್ ಬಳಿಕ ಹಂತವಾಗಿ ಎಲ್ಲ ಶೇರುಗಳನ್ನು ಮಾರಾಟ ಮಾಡುತ್ತಾ ಬಂದಿದ್ದರು. ಈ ನಡುವೆ ಪ್ರತಿಕ್ರಿಯಿಸಿರುವ ಸಚಿನ್ ತನ್ನ ಹೃದಯ ಒಂದು ಭಾಗ ಯಾವತ್ತೂ ಕೇರಳ ಬ್ಲಾಸ್ಟರ್ಸ್ ಗಾಗಿ ಮಿಡಿಯಲಿದೆ ಎಂದು ಹೇಳಿದ್ದಾರೆ.
ಕಳೆದ ನಾಲ್ಕು ವರ್ಷಗಳಲ್ಲಿ ಕೇರಳ ಬ್ಲಾಸ್ಟರ್ಸ್ ನನ್ನ ಜೀವನದ ಅವಿಭಾಜ್ಯ ಅಂಗವಾಗಿತ್ತು. ಈ ಅವಧಿಯಲ್ಲಿ ಕೋಟಿಗಟ್ಟಲೆ ಅಭಿಮಾನಿಗಳಂತೆ ನಾನು ಕೂಡಾ ಭಾವನೆಗಳನ್ನು ಹಂಚಿಕೊಂಡಿದ್ದೇನೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ