ಜಗತ್ತಿನ ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ಮೈದಾನದಲ್ಲೇ ಗೋಳಾಡಿ, ಕಣ್ಣೀರಿಟ್ಟಿದ್ದೇಕೆ?

ಜಗತ್ತಿನ ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೋ ಮೈದಾನದಲ್ಲೇ ಗೋಳಾಡಿ, ಕಣ್ಣೀರಿಟ್ಟಿದ್ದು ಇದು ಅಭಿಮಾನಿಗಳು ಕೋಪಗೊಳ್ಳುವಂತೆ ಮಾಡಿದೆ...
ಕ್ರಿಸ್ಟಿಯಾನೋ ರೊನಾಲ್ಡೊ
ಕ್ರಿಸ್ಟಿಯಾನೋ ರೊನಾಲ್ಡೊ
Updated on
ಟ್ಯುರಿನ್(ಇಟಲಿ): ಜಗತ್ತಿನ ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೋ ಮೈದಾನದಲ್ಲಿ ಕಣ್ಣೀರಿಟ್ಟಿದ್ದು ಇದು ಅಭಿಮಾನಿಗಳು ಕೋಪಗೊಳ್ಳುವಂತೆ ಮಾಡಿದೆ.
ಯುವೆಂಟುಸ್ ಪರ ಆಡಿದ ಚೊಚ್ಚಲ ಚಾಂಪಿಯನ್ಸ್ ಲೀಗ್ ಪಂದ್ಯದಲ್ಲೇ ರೊನಾಲ್ಡೋಗೆ ಆಘಾತ ಎದುರಾಗಿದ್ದು ಎದುರಾಳಿ ತಂಡದ ಆಟಗಾರನನ್ನು ತಳ್ಳಿದರು ಎಂಬ ಕಾರಣಕ್ಕೆ ರೊನಾಲ್ಡೋಗೆ ರೆಫ್ರಿ ರೆಡ್ ಕಾರ್ಡ್ ನೀಡಿದರು. 
ರೋನಾಲ್ಡೋ ಟ್ಯುರಿನ್ ನಲ್ಲಿ ನಡದೆ ಲಾ ಲೀಗಾ ತಂಡದ ವ್ಯಾಲೆನ್ಸಿಯಾ ವಿರುದ್ಧದ ಪಂದ್ಯದ 28ನೇ ನಿಮಿಷದಲ್ಲಿ ಎದುರಾಳಿ ಆಟಗಾರನನ್ನು ತಳ್ಳಿದ್ದರು. ಇದಕ್ಕೆ ರೆಫ್ರಿ ರೆಡ್ ಕಾರ್ಡ್ ನೀಡಿದ್ದು ಇದನ್ನು ನೋಡುತ್ತಿದ್ದಂತೆ ರೊನಾಲ್ಡೋ ಕಣ್ಣೀರಿಡುತ್ತಾ, ಗೋಳಾಡಿದರು. ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com