ಬೆಂಗಳೂರು ಕ್ರೀಡೋತ್ಸವಕ್ಕೆ ರಾಹುಲ್ ದ್ರಾವಿಡ್, ಪ್ರಕಾಶ್ ಪಡುಕೋಣೆ ಪ್ರೋತ್ಸಾಹ

ಡಿಸೆಂಬರ್ ತಿಂಗಳಲ್ಲಿ ಆಯೋಜಿಸಿರುವ ಎರಡು ದಿನಗಳ ಬೆಂಗಳೂರು ಕ್ರೀಡೋತ್ಸವಕ್ಕೆ ಖ್ಯಾತ ಕ್ರೀಡಾಪಟುಗಳಾದ ರಾಹುಲ್ ದ್ರಾವಿಡ್ ಹಾಗೂ ಪ್ರಕಾಶ್ ಪಡುಕೋಣೆ ಕೈ ಜೋಡಿಸುತ್ತಿದ್ದಾರೆ.
ರಾಹುಲ್ ದ್ರಾವಿಡ್
ರಾಹುಲ್ ದ್ರಾವಿಡ್

ಬೆಂಗಳೂರು: ಪ್ರತಿಯೊಂದು ಕುಟುಂಬದಲ್ಲೂ ಕ್ರೀಡೆಯನ್ನು ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಡಿಸೆಂಬರ್ ತಿಂಗಳಲ್ಲಿ ಆಯೋಜಿಸಿರುವ ಎರಡು ದಿನಗಳ ಬೆಂಗಳೂರು ಕ್ರೀಡೋತ್ಸವಕ್ಕೆ ಖ್ಯಾತ ಕ್ರೀಡಾಪಟುಗಳಾದ ರಾಹುಲ್ ದ್ರಾವಿಡ್ ಹಾಗೂ ಪ್ರಕಾಶ್ ಪಡುಕೋಣೆ ಪ್ರೋತ್ಸಾಹ ನೀಡುತ್ತಿದ್ದಾರೆ.

ಬೆಂಗಳೂರು ಕ್ರೀಡೋತ್ಸವ 2018 ಆಯೋಜಿಸುತ್ತಿರುವುದಕ್ಕೆ  ಸಂತೋಷವಾಗುತ್ತಿದೆ ಎಂದು ಕ್ರೀಡೆ ಎಕ್ಸಲೆನ್ಸ್ ಟ್ರಸ್ಟ್ ಅಧ್ಯಕ್ಷ ವಿಮಲ್ ಕುಮಾರ್ ತಿಳಿಸಿದ್ದಾರೆ.

ಡಿಸೆಂಬರ್ 8 ಮತ್ತು 9 ರಂದು ಈ ಕ್ರಿಡೋತ್ಸವ ನಡೆಯಲಿದ್ದು,  20 ಸಾವಿರ ಕ್ರೀಡಾಪಟುಗಳ ಭಾಗವಹಿಸುವ ಸಾಧ್ಯತೆ ಇದೆ. ಈ ಕ್ರೀಡೋತ್ಸವದಲ್ಲಿ ಎಲ್ಲ ವಯೋಮಾನದ ಕ್ರೀಡಾಪಟುಗಳ ಪಾಲ್ಗೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.

 ಸುಮಾರು 100 ಕ್ರೀಡಾ ತಜ್ಞರು, ನಗರದ ಸೆಲೆಬ್ರಿಟಿಗಳು ಈ ಕ್ರಿಡೋತ್ಸವದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.  32 ದೇಶಿಯ ಕಾರ್ಪೋರೇಟ್ಸ್ ಮತ್ತು  3. 200 ಕ್ಕೂ ಹೆಚ್ಚು ಕಾರ್ಪೋರೇಟ್ಸ್ ಪಾಲ್ಗೊಳ್ಳಲುವ  ಸಾಧ್ಯತೆ ಇದೆ ಎಂದರು.

ದೇಶದಲ್ಲಿ ಕ್ರೀಡೆಯನ್ನು ಅಭಿವೃದ್ದಿ ಪಡಿಸಿ, ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಕ್ರೀಡೋತ್ಸವ ಆಯೋಜಿಸಲಾಗುತ್ತಿದೆ ಎಂದು ನಿರ್ದೇಶಕ ಶ್ಯಾಮ್ ಸುಂದರ್ ಪಣಿ ತಿಳಿಸಿದರು.

 ರಾಹುಲ್ ದ್ರಾವಿಡ್, ಪ್ರಕಾಶ್ ಪಡುಕೋಣೆ ಹೊರತುಪಡಿಸಿದರೆ, ವಿದ್ಯಾ ಲಕ್ಷ್ಮಣ್ , ಮತ್ತು ಅಥ್ಲೀಟ್  ರೀತ್ ಅಬ್ರಾಹಂ ಕ್ರೀಡೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com