ವಿಶ್ವ ಅರ್ಚರಿ ಚಾಂಪಿಯನ್ ಶಿಪ್: ಭಾರತ ಮಹಿಳೆಯರಿಗೆ ಕಂಚಿನ ಹಾರ

ಇಲ್ಲಿ ನಡೆಯುತ್ತಿರುವ ವಿಶ್ವ ಆರ್ಚರಿ ಚಾಂಪಿಯನ್ ಶಿಪ್ ನಲ್ಲಿ ಭಾರತದ ವನಿತೆಯರ ಕಾಂಪೌಂಡ್ ತಂಡ ತುರ್ಕಿಯನ್ನು ಮಣಿಸಿ ಕಂಚಿನ ಪದಕವನ್ನು ಜಯಿಸಿದೆ.
ವಿಶ್ವ ಅರ್ಚರಿ ಚಾಂಪಿಯನ್ ಶಿಪ್: ಭಾರತ ಮಹಿಳೆಯರಿಗೆ ಕಂಚಿನ ಹಾರ
ವಿಶ್ವ ಅರ್ಚರಿ ಚಾಂಪಿಯನ್ ಶಿಪ್: ಭಾರತ ಮಹಿಳೆಯರಿಗೆ ಕಂಚಿನ ಹಾರ
Updated on: 
ಡೆನ್ ಬಾಷ್, (ಹಾಲೆಂಡ್): ಇಲ್ಲಿ ನಡೆಯುತ್ತಿರುವ ವಿಶ್ವ ಆರ್ಚರಿ ಚಾಂಪಿಯನ್ ಶಿಪ್ ನಲ್ಲಿ ಭಾರತದ ವನಿತೆಯರ ಕಾಂಪೌಂಡ್ ತಂಡ ತುರ್ಕಿಯನ್ನು ಮಣಿಸಿ ಕಂಚಿನ ಪದಕವನ್ನು ಜಯಿಸಿದೆ.
ಜ್ಯೋತಿ ಸುರೇಖಾ, ಮುಸ್ಕಾರ್ ಕಿರಾರ್, ರಾಜ್ ಕೌರ್ ಅವರನ್ನು ಒಳಗೊಂಡ ಭಾರತ ತಂಡ 229-226 ರಿಂದ ತುರ್ಕಿ ಯನ್ನು ಮಣಿಸಿ ಪದಕ ಗೆದ್ದಿತು. 
ಇದಕ್ಕೂ ಮೊದಲು ಭಾರತ ಕ್ವಾರ್ಟರ್ ಫೈನಲ್ ನಲ್ಲಿ 219-213 ರಿಂದ ಹಾಲೆಂಡ್ ವಿರುದ್ಧ ಗೆಲುವು ಸಾಧಿಸಿತ್ತು. ನಾಲ್ಕರ ಘಟ್ಟದ ಪಂದ್ಯದಲ್ಲಿ ಭಾರತ 226-227ರಿಂದ ಅಮೆರಿಕ ತಂಡದ ವಿರುದ್ಧ ಸೋಲು ಕಂಡಿತು.
ತೈಪೆಯಿ, ಅಮೆರಿಕ ತಂಡವನ್ನು ಫೈನಲ್ ನಲ್ಲಿ ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. 
ಪಂದ್ಯದ ಬಳಿಕ ಮಾತನಾಡಿದ ಜ್ಯೋತಿ "2017ರಲ್ಲಿ ಬೆಳ್ಳಿ ಪದಕ ಗೆದಿದ್ದೆವು. ಈ ಬಾರಿ ಅದಕ್ಕೆ ಉತ್ತಮ ಸಾಧನೆ ಮಾಡಬೇಕೆಂದು ಗುರಿ ಇತ್ತು. ಆದರೆ ಸಾಧ್ಯವಾಗಲಿಲ್ಲ. ಆದರೆ ಪದಕ ಗಳಿಸಿರುವುದು ಖುಷಿ ಕೊಟ್ಟಿದೆ" ಎಂದಿದ್ದಾರೆ.
ಇನ್ನು ಇದೇ ಪಂದ್ಯಾವಳಿಯಲ್ಲಿ ಭಾರತ ಪುರುಷರ ತಂಡ ಮೊದಲ ಚಿನ್ನದ ನಿರೀಕ್ಷೆಯಲ್ಲಿದ್ದು ಭಾನುವಾರದ ರಿಕರ್ವ್ ಪಂದ್ಯದಲ್ಲಿ ಚೀನಾವನ್ನು ಎದುರಿಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com