ಅಜರುದ್ದಿನ್ ಪುತ್ರ ಅಸದ್ ಜತೆ ಸಾನಿಯಾ ಸಹೋದರಿ ಆನಮ್ ಮದುವೆ

ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಸಹೋದರಿ ಆನಮ್ ಮಿರ್ಜಾ ಅವರು ಶೀಘ್ರದಲ್ಲೇ ಮಾಜಿ ಕ್ರಿಕೆಟಿಗ ಮೊಹಮ್ಮದ್....
ಅಸದ್ - ಆನಮ್
ಅಸದ್ - ಆನಮ್
Updated on: 
ಹೈದರಾಬಾದ್: ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಸಹೋದರಿ ಆನಮ್ ಮಿರ್ಜಾ ಅವರು ಶೀಘ್ರದಲ್ಲೇ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರ ಪುತ್ರ ಅಸದ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.
25 ವರ್ಷದ ಆನಮ್ 2016ರಲ್ಲಿ ಹೈದರಾಬಾದ್ ಮೂಲದ ಉದ್ಯಮಿ ಅಕ್ಬರ್ ರಶೀದ್ ಅವರನ್ನು ವಿವಾಹವಾಗಿದ್ದು, ಕಳೆದ ವರ್ಷ ವಿಚ್ಛೇದನ ಪಡೆದುಕೊಂಡಿದ್ದಾರೆ. ಈಗ ಅಜರುದ್ದೀನ್ ಪುತ್ರ 28 ವರ್ಷದ ಅಸಾದ್ ಜೊತೆ ಸುತ್ತಾಡುತ್ತಿದ್ದು, ಈ ವರ್ಷಾಂತ್ಯಕ್ಕೆ ಮದುವೆಯಾಗಲಿದ್ದಾರೆ ಎನ್ನಲಾಗಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಆನಮ್ ಮಿರ್ಜಾ ತಮ್ಮ ಸಾಮಾಜಿಕ ಜಾಲತಾಣ ಖಾತೆ ಇನ್ಸ್ಟಾಗ್ರಾಮ್ ನಲ್ಲಿ ಅಸಾದ್ ಜೊತೆಗಿರುವ ಫೋಟೋಗಳನ್ನು ಹಾಕಿಕೊಂಡಿದ್ದಾರೆ. ಅಲ್ಲದೆ ವಿವಾಹವಾಗಲು ತೀರ್ಮಾನಿಸಿರುವ ಆನಮ್ ಹಾಗೂ ಅಸಾದ್ ಈಗಾಗಲೇ ದುಬೈನಲ್ಲಿ ಶಾಪಿಂಗ್ ಕೂಡಾ ಮಾಡಿದ್ದಾರೆಂದು ಹೇಳಲಾಗಿದೆ.
ಆನಮ್ ಮಿರ್ಜಾ ಫ್ಯಾಷನ್ ಮಳಿಗೆ ಲೇಬಲ್ ಬಜಾರ್ ಮಾಲೀಕರಾಗಿದ್ದಾರೆ. ಇನ್ನು ಅಸಾದ್ ಕ್ರಿಕೆಟರ್ ಹಾಗೂ ವಕೀಲರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com