ಬಾಕ್ಸಿಂಗ್ ಚಾಂಪಿಯನ್‍ಶಿಪ್: ಸೆಮಿಫೈನಲ್‍ಗೆ ಮೇರಿ ಕೋಮ್, ಪದಕ ಖಚಿತ!

ಆರು ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಅವರು ಇಲ್ಲಿ ನಡೆಯುತ್ತಿರುವ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನ 51 ಕೆ.ಜಿ ವಿಭಾಗದಲ್ಲಿ ಸೆಮಿಫೈನಲ್‍ಗೆ ತಲುಪಿದ್ದಾರೆ. ಆ ಮೂಲಕ ಅವರ ವೃತ್ತಿ ಜೀವನದ ಎಂಟನೇ ಚಾಂಪಿಯನ್‍ಶಿಪ್‍ನಲ್ಲಿ ಪದಕ ಖಚಿತಪಡಿಸಿಕೊಂಡಿದ್ದಾರೆ.
ಮೇರಿ ಕೋಮ್
ಮೇರಿ ಕೋಮ್
Updated on

ಉಡಾನ್ ಉಡೆ(ರಷ್ಯಾ): ಆರು ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಅವರು ಇಲ್ಲಿ ನಡೆಯುತ್ತಿರುವ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನ 51 ಕೆ.ಜಿ ವಿಭಾಗದಲ್ಲಿ ಸೆಮಿಫೈನಲ್‍ಗೆ ತಲುಪಿದ್ದಾರೆ. ಆ ಮೂಲಕ ಅವರ ವೃತ್ತಿ ಜೀವನದ ಎಂಟನೇ ಚಾಂಪಿಯನ್‍ಶಿಪ್‍ನಲ್ಲಿ ಪದಕ ಖಚಿತಪಡಿಸಿಕೊಂಡಿದ್ದಾರೆ.

ಗುರುವಾರ ನಡೆದ 51 ಕೆ.ಜಿ ವಿಭಾಗದ ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ ಕೊಲಂಬಿಯಾದ ವ್ಯಾಲೆನ್ಸಿಯಾ ವಿಕ್ಟರ್ ವಿರುದ್ಧ  5-0 ಅಂತರದಲ್ಲಿ ಮೇರಿ ಕೋಮ್ ಗೆದ್ದು ಕಂಚಿನ ಕನಿಷ್ಟ ಕಂಚಿನ ಪದಕವನ್ನು ಭದ್ರ ಪಡಿಸಿಕೊಂಡಿದ್ದಾರೆ.

ಪಂದ್ಯದ ಆರಂಭದಲ್ಲಿ ಮೇರಿ ಕೋಮ್ ನಿಧಾನಗತಿಯಲ್ಲಿ ಆಡಿದರು. ನಂತರ, ಪುಟಿದೆದ್ದ ಅವರು ರಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ವಿಕ್ಟರ್ ವಿರುದ್ಧ ಆಕ್ರಮಣಾಕಾರಿ ಆಟವಾಡಿದರು. ಇದರ ಫಲವಾಗಿ 29-28, 30-27, 29-28, 30-27, 29-28 ಅಂತರದಲ್ಲಿ ಗೆದ್ದು ಉಪಾಂತ್ಯಕ್ಕೆ ತಲುಪಿದ್ದಾರೆ.

ಇದಕ್ಕೂ ಮುನ್ನ ಮಣಿಪುರ್ ಬಾಕ್ಸರ್ ಪ್ರೀ ಕ್ವಾರ್ಟರ್ ಫೈನಲ್‍ನಲ್ಲಿ ಥಾಯ್ಲೆಂಡ್‍ನ ಜುತಾಮಸ್ ಜಿಟ್‍ಪಾಂಗ್ ವಿರುದ್ಧ 5-0 ಅಂತರದಲ್ಲಿ ಜಯಬೇರಿ ಬಾರಿಸಿದ್ದರು. ಮೊದಲನೇ ಸುತ್ತಿನಲ್ಲಿ ಮೇರಿ ಬೈ ಪಡೆದುಕೊಂಡಿದ್ದರು.

ಶನಿವಾರ ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಮೇರಿ ಕೋಮ್ ಅವರು ಎರಡನೇ ಶ್ರೆಯಾಂಕದ ಟರ್ಕಿಯ ಬುಸೆನಾಜ್ ಕಾಕಿರೋಗ್ಲು ವಿರುದ್ಧ ಸೆಣಸಲಿದ್ದಾರೆ. ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಎಂಟು ಪದಕ ಪಡೆದ ಭಾರತ ಮಪದಲ ಬಾಕ್ಸರ್ ಎಂಬ ಗೌರವಕ್ಕೆ ಭಾಜನರಾಗಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com