ಮಿಲಿಟರಿ ವಿಶ್ವ ಕ್ರೀಡಾಕೂಟ: ಜಾವೆಲಿನ್ ಎಸೆತದಲ್ಲಿ ಶಿವಪಾಲ್ ಸಿಂಗ್ ಗೆ ಸ್ವರ್ಣ ಪದಕ

ಚೀನಾದಲ್ಲಿ ನಡೆಯುತ್ತಿರುವ ಏಳನೇ ಸಿಐಎಸ್‍ಎಂ ಮಿಲಿಟರಿ ವಿಶ್ವ ಕ್ರೀಡಾಕೂಟದ ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾರತದ ಶಿವಪಾಲ್ ಸಿಂಗ್ ಚಿನ್ನದ ಪದಕ ಮುಡಿಗೇರಿಸಿಕೊಂಡರೆ, ಶೂಟಿಂಗ್ ವಿಭಾಗದಲ್ಲಿ ಗುರುಪ್ರೀತ್ ಸಿಂಗ್ ಕಂಚಿನ ಪದಕ ತನ್ನದಾಗಿಸಿಕೊಂಡಿದ್ದಾರೆ.
ಶಿವಪಾಲ್ ಸಿಂಗ್
ಶಿವಪಾಲ್ ಸಿಂಗ್

ವುಹಾನ್: ಚೀನಾದಲ್ಲಿ ನಡೆಯುತ್ತಿರುವ ಏಳನೇ ಸಿಐಎಸ್‍ಎಂ ಮಿಲಿಟರಿ ವಿಶ್ವ ಕ್ರೀಡಾಕೂಟದ ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾರತದ ಶಿವಪಾಲ್ ಸಿಂಗ್ ಚಿನ್ನದ ಪದಕ ಮುಡಿಗೇರಿಸಿಕೊಂಡರೆ, ಶೂಟಿಂಗ್ ವಿಭಾಗದಲ್ಲಿ ಗುರುಪ್ರೀತ್ ಸಿಂಗ್ ಕಂಚಿನ ಪದಕ ತನ್ನದಾಗಿಸಿಕೊಂಡಿದ್ದಾರೆ.

ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿವಪಾಲ್ ಸಿಂಗ್, ಜಾವೆಲಿನ್ ಅನ್ನು 83.33 ಮೀ ಎಸೆಯುವ ಮೂಲಕ ಸ್ವರ್ಣ ಪದಕ ಭಾರತಕ್ಕೆ ತಂದುಕೊಟ್ಟರು. 2019ರ ಏಷ್ಯನ್ ಕ್ರೀಡಾಕೂಟದಲ್ಲೂ ಶಿವಪಾಲ್ ಜಾವೆಲಿನ್ 86.23 ಮೀ ಎಸೆದು ಬೆಳ್ಳಿ ಪದಕ ಗೆದ್ದಿದ್ದರು. ಅದಾಗ್ಯೂ ಅವರು ಒಲಂಪಿಕ್ ಅರ್ಹತೆಗಾಗಿನ 85 ಮೀಟರ್ ಎತ್ತರತಲುಪುವುದರಲ್ಲಿ ಸ್ವಲ್ಪದರಲ್ಲೇ ವಿಫಲವಾದರು.

ಗುರುಪ್ರೀತ್ ಸಿಂಗ್ ಸದ್ಯ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಪುರುಷರ 25ಮೀ. ಸೆಂಟರ್ ಫೈರ್ ಪಿಸ್ತೂಲ್ ವಿಭಾಗದಲ್ಲಿ 585 ಅಂಕಗಳನ್ನು ಸಂಪಾಧಿಸುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಪ್ಯಾರಾ-ಅಥ್ಲೀಟ್‌ಗಳಾದ ಅನೀಶ್ ಕುಮಾರ್ ಸುರೇಂದ್ರನ್ ಪಿಳ್ಳೈ ಮತ್ತು ವೀರೇಂದ್ರ ಅವರು ತಮ್ಮ ಕ್ಷೇತ್ರಗಳಲ್ಲಿ ಚಿನ್ನ ಗಳಿಸಿಕೊಂಡಿದ್ದು ಭಾರತ ಒಟ್ತಾರೆ ಮತ್ತೆರಡು ಸ್ವರ್ಣ ಪದಕಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com