ವಿಶ್ವ ಕುಸ್ತಿ ಚಾಂಪಿಯನ್ ಶಿಪ್: ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡ ದೀಪಕ್ ಪುನಿಯಾ

ಭಾರತದ ಕಿರಿಯ ಕುಸ್ತಿಪಟು ದೀಪಕ್ ಪುನಿಯಾ ಮೊಣಕಾಲಿನ ಗಾಯದ ಕಾರಣ ಫೈನಲ್ ನಲ್ಲಿ ಸ್ಪರ್ಧಿಸಲಾಗದೇ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಗಿದೆ.
ದೀಪಕ್ ಪುನಿಯಾ
ದೀಪಕ್ ಪುನಿಯಾ
Updated on: 

ಕಜಕಿಸ್ತಾನ್ : ಭಾರತದ ಕಿರಿಯ ಕುಸ್ತಿಪಟು ದೀಪಕ್ ಪುನಿಯಾ ಮೊಣಕಾಲಿನ ಗಾಯದ ಕಾರಣ ಫೈನಲ್ ನಲ್ಲಿ ಸ್ಪರ್ಧಿಸಲಾಗದೇ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಗಿದೆ.

ಪುನಿಯಾ ಅವರಿಗೆ ಶನಿವಾರವೇ ಎಡಗೈ ಮೊಣಕಾಲಿನ ಗಾಯವಾಗಿದ್ದು, ಅದು ಭಾನುವಾರ ಹೆಚ್ಚಾಗಿ ಕುತೂಹಲದ ಫೈನಲ್ ಪಂದ್ಯಕ್ಕೆ ಅಡ್ಡಿಯಾಯಿತು. 86 ಕೆಜಿ ವಿಭಾಗದ ಫೈನಲ್ ನಲ್ಲಿ ದೀಪಕ್ ಪುನಿಯಾ ಇರಾನಿನ  ಹಸನ್ ಯಜ್ಡಾನಿ ವಿರುದ್ಧ ಸ್ಪರ್ಧಿಸಬೇಕಿತ್ತು.

ಹೆಬ್ಬೆರಳು ಹಾಗೂ ಭುಜದ ಗಾಯದ ಸಮಸ್ಯೆಯಿಂದ  ಬಳಲುತ್ತಿದ್ದ ದೀಪಕ್  ಪುನಿಯಾ ಅವರಿಗೆ ಇಂದು ಮೊಣಕಾಲಿನ ಸಮಸ್ಯೆ ಹೆಚ್ಚಾಗಿ ಫೈನಲ್ ಪಂದ್ಯದಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡರು.ವಿಶ್ವ ಚಾಂಪಿಯನ್ ಶಿಪ್ ಫೈನಲ್ ಗೆ ಭಾರತದಿಂದ ದೀಪಕ್ ಪುನಿಯಾ ಮಾತ್ರ  ಆಯ್ಕೆಯಾಗಿದ್ದರು.

ಈ ಚಾಂಪಿಯನ್ ಶಿಫ್ ನಲ್ಲಿ ಭಾರತದ ರಾಹುಲ್ ಮಾತ್ರ ಉಳಿದಿದ್ದು, 61 ಕೆಜಿ ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ಸೆಣಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com