ಬಿಡಬ್ಲ್ಯುಎಫ್ ರ್ಯಾಂಕಿಂಗ್: ಅಗ್ರ 10ರಲ್ಲಿ ಸ್ಥಾನ ಪಡೆದ ಥೈಲ್ಯಾಂಡ್ ಓಪನ್ ವಿಜೇತ ಜೋಡಿ

ಕಳೆದ ವಾರ ನಡೆದ ಥೈಲ್ಯಾಂಡ್ ಓಪನ್ ಪಂದ್ಯವನ್ನು ಗೆಲ್ಲುವ ಮೂಲಕ ಇತಿಹಾಸವನ್ನು ರಚಿಸಿದ ನಂತರ, ಭಾರತದ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ.....
ಬಿಡಬ್ಲ್ಯುಎಫ್ ರ್ಯಾಂಕಿಂಗ್: ಅಗ್ರ 10ರಲ್ಲಿ ಸ್ಥಾನ ಪಡೆದ ಥೈಲ್ಯಾಂಡ್ ಓಪನ್ ವಿಜೇತ ಜೋಡಿ
ಬಿಡಬ್ಲ್ಯುಎಫ್ ರ್ಯಾಂಕಿಂಗ್: ಅಗ್ರ 10ರಲ್ಲಿ ಸ್ಥಾನ ಪಡೆದ ಥೈಲ್ಯಾಂಡ್ ಓಪನ್ ವಿಜೇತ ಜೋಡಿ
ನವದೆಹಲಿ: ಕಳೆದ ವಾರ ನಡೆದ ಥೈಲ್ಯಾಂಡ್ ಓಪನ್ ಪಂದ್ಯವನ್ನು ಗೆಲ್ಲುವ ಮೂಲಕ ಇತಿಹಾಸವನ್ನು ರಚಿಸಿದ ನಂತರ, ಭಾರತದ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಮಂಗಳವಾರ ಬಿಡುಗಡೆ ಮಾಡಿದ ಇತ್ತೀಚಿನ ಬ್ಯಾಡ್ಮಿಂಟನ್ ವಿಶ್ವ ಶ್ರೇಯಾಂಕ ಪಟ್ಟಿಯ ಅಗ್ರ 10ರಲ್ಲಿ ಪ್ರವೇಶ ಪಡೆದಿದ್ದಾರೆ.
 ರಾಂಕಿರೆಡ್ಡಿ ಮತ್ತು ಶೆಟ್ಟಿ ಏಳು ಸ್ಥಾನಗಳನ್ನು ಗಳಿಸಿ ಈಗ ಪುರುಷರ ಡಬಲ್ಸ್ ಶ್ರೇಯಾಂಕದಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದಾರೆ.
 ರಾಂಕಿರೆಡ್ಡಿ ಮತ್ತು ಶೆಟ್ಟಿ 21-19 18-21 21-18 ಅಂಕಗಳಿಂದ ವಿಶ್ವ ಚಾಂಪಿಯನ್ ಲಿ ಜುನ್ ಹುಯಿ ಮತ್ತು ಚೀನಾದ ಲಿಯು ಯು ಚೆನ್ ಅವರನ್ನು ಸೋಲಿಸಿ ಭಾನುವಾರ ನಡೆದ ಥೈಲ್ಯಾಂಡ್ ಓಪನ್ ಫೈನಲ್ ಪಂದ್ಯವನ್ನು ಗೆದ್ದರು. ಅವರು ಬಿಡಬ್ಲ್ಯುಎಫ್‌ ಸೂಪರ್ 500 ಪಂದ್ಯಾವಳಿಯನ್ನು ಗೆದ್ದ ಮೊದಲ ಭಾರತೀಯ ಪುರುಷರ ಡಬಲ್ಸ್ ಜೋಡಿ ಎನಿಸಿಕೊಂಡರು.
 ಮತ್ತೊಂದು ಭಾರತೀಯ ಪುರುಷರ ಡಬಲ್ಸ್ ಜೋಡಿ ಮನು ಅತ್ರಿ ಮತ್ತು ಬಿ.ಸುಮೀತ್ ರೆಡ್ಡಿ 25ನೇ ಸ್ಥಾನದಲ್ಲಿದ್ದಾರೆ.
 ಪುರುಷರ ಸಿಂಗಲ್ಸ್‌ನಲ್ಲಿ ಕಿಡಂಬಿ ಶ್ರೀಕಾಂತ್ (10ನೇ ಸ್ಥಾನ), ಸಮೀರ್ ವರ್ಮಾ (13), ಬಿ ಸಾಯಿ ಪ್ರಣೀತ್ (19), ಎಚ್‌ಎಸ್ ಪ್ರಣಯ್ (31) ಮತ್ತು ಸೌರವ್ ವರ್ಮಾ (44) ಎಲ್ಲರೂ ತಮ್ಮ ಸ್ಥಾನದಲ್ಲಿ ಸ್ಥಿರವಾಗಿ ಉಳಿದಿದ್ದರಿಂದ ಭಾರತೀಯ ಶಟ್ಲರ್‌ಗಳ ಸ್ಥಾನದಲ್ಲಿ ಯಾವುದೇ ಮಹತ್ವದ ಬದಲಾವಣೆಗಳಾಗಿಲ್ಲ. 
 ಏಸ್ ಶಟ್ಲರ್ ಪರುಪಲ್ಲಿ ಕಶ್ಯಪ್ ಮೂರು ಸ್ಥಾನಗಳನ್ನು ಗಳಿಸಿ 32ನೇ ಸ್ಥಾನಕ್ಕೆ ತಲುಪಿದರೆ, ಶುಭಂಕರ್ ಡೇ ಎರಡು ಸ್ಥಾನಗಳನ್ನು ಗಳಿಸಿ 39ನೇ ಸ್ಥಾನಕ್ಕೆ ತಲುಪಿದ್ದಾರೆ.
 ಮಹಿಳಾ ಸಿಂಗಲ್ಸ್ ಶ್ರೇಯಾಂಕದಲ್ಲಿ, ಒಲಿಂಪಿಕ್ ಪದಕ ವಿಜೇತ ಪಿ.ವಿ.ಸಿಂಧು ಮತ್ತು ಸೈನಾ ನೆಹ್ವಾಲ್ ಕ್ರಮವಾಗಿ ತಮ್ಮ ಐದನೇ ಮತ್ತು ಎಂಟನೇ ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಎನ್ ಸಿಕ್ಕಿ ರೆಡ್ಡಿ 23ನೇ ಸ್ಥಾನಕ್ಕೆ ಏರಿದ್ದಾರೆ. 
 ಮಿಶ್ರ ಡಬಲ್ಸ್ ಶ್ರೇಯಾಂಕದಲ್ಲಿ ಪ್ರಣವ್ ಜೆರ್ರಿ ಚೋಪ್ರಾ ಮತ್ತು ಸಿಕ್ಕಿ ರೆಡ್ಡಿ ಜೋಡಿ 23ನೇ ಸ್ಥಾನಕ್ಕೆ ಕುಸಿದಿದ್ದರೆ, ಪೊನ್ನಪ್ಪ ಮತ್ತು ರಾಂಕಿರೆಡ್ಡಿ ಜೋಡಿ ನಾಲ್ಕು ಸ್ಥಾನ ಕುಸಿದು 27ನೇ ಸ್ಥಾನದಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com