ಕುಸ್ತಿಪಟು ಬಬಿತಾ  ಪೋಗಟ್, ಮಹಾವೀರ್ ಪೊಗಟ್ ಬಿಜೆಪಿಗೆ ಸೇರ್ಪಡೆ 

ಅಂತಾರಾಷ್ಟ್ರೀಯ ಕುಸ್ತಿಪಟು ಬಬಿತಾ ಪೋಗಟ್ ಹಾಗೂ ಅವರ ತಂದೆ, ಕುಸ್ತಿಪಟು ತರಬೇತುದಾರರಾದ ಮಹಾವೀರ್ ಪೋಗಟ್  ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

Published: 12th August 2019 01:55 PM  |   Last Updated: 12th August 2019 01:55 PM   |  A+A-


Posted By : nagaraja
Source : PTI

ನವದೆಹಲಿ:  ಅಂತಾರಾಷ್ಟ್ರೀಯ ಕುಸ್ತಿಪಟು ಬಬಿತಾ ಪೋಗಟ್ ಹಾಗೂ ಅವರ ತಂದೆ, ಕುಸ್ತಿಪಟು ತರಬೇತುದಾರರಾದ ಮಹಾವೀರ್ ಪೋಗಟ್  ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಸಚಿವ ಕಿರಣ್ ರಿಜಿಜು , ಹರಿಯಾಣ ಬಿಜೆಪಿ ಉಸ್ತುವಾರಿ ಅನಿಲ್ ಜೈನ್ ಹಾಗೂ ಹರಿಯಾಣದ ಪಕ್ಷದ ಮುಖ್ಯಸ್ಥ ಸುಭಾಷ್ ಬಾದಲಾ ಅವರ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರಿಕೊಂಡರು.

ಈ ಸಂದರ್ಭದಲ್ಲಿ ಬಬಿತಾ ಹಾಗೂ ಮಹಾವೀರ್ ಪೋಗಟ್ ಅವರನ್ನು ಹಾಡಿ ಹೊಗಳಿದ ಕಿರಣ್ ರಿಜಿಜು, ಅನೇಕ ಅಂತಾರಾಷ್ಟ್ರೀಯ ಕುಸ್ತಿಪಟು ಸ್ಪರ್ಧೆಗಳಲ್ಲಿ ಬಬಿತಾ ಪೋಗಟ್ ಪದಕಗಳನ್ನು ಗೆದ್ದು  ದೇಶಕ್ಕೆ ಕೀರ್ತಿ ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಬಬಿತಾ ಪೋಗಟ್  ಸೇರ್ಪಡೆಯಾಗಿರುವುದರಿಂದ ಈ ವರ್ಷದ ನಂತರ ನಡೆಯಲಿರುವ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ಬಿಜೆಪಿ ನಂಬಿದೆ.

Stay up to date on all the latest ಕ್ರೀಡೆ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp