ಒಲಿಂಪಿಕ್ಸ್ ಟೆಸ್ಟ್:ಭಾರತ ಪುರುಷರ ಹಾಕಿ ತಂಡಕ್ಕೆ ಪ್ರಶಸ್ತಿಯ ಗರಿ!

ಎಲ್ಲ ವಿಭಾಗಗಳಲ್ಲಿಯೂ ಅದ್ಭುತ ಪ್ರದರ್ಶನ ತೋರಿದ ಭಾರತ ಪುರುಷರ ಹಾಕಿ ತಂಡ ಇಲ್ಲಿ ನಡೆದ ಒಲಿಂಪಿಕ್ಸ್ ಟೆಸ್ಟ್‌ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಗೆದ್ದು ಪ್ರಶಸ್ತಿ ಮುಡುಗೇರಿಸಿಕೊಂಡಿತು. 
ಒಲಿಂಪಿಕ್ಸ್ ಟೆಸ್ಟ್:ಭಾರತ ಪುರುಷರ ಹಾಕಿ ತಂಡಕ್ಕೆ ಪ್ರಶಸ್ತಿಯ ಗರಿ!
ಒಲಿಂಪಿಕ್ಸ್ ಟೆಸ್ಟ್:ಭಾರತ ಪುರುಷರ ಹಾಕಿ ತಂಡಕ್ಕೆ ಪ್ರಶಸ್ತಿಯ ಗರಿ!

ಟೋಕಿಯೊ:  ಎಲ್ಲ ವಿಭಾಗಗಳಲ್ಲಿಯೂ ಅದ್ಭುತ ಪ್ರದರ್ಶನ ತೋರಿದ ಭಾರತ ಪುರುಷರ ಹಾಕಿ ತಂಡ ಇಲ್ಲಿ ನಡೆದ ಒಲಿಂಪಿಕ್ಸ್ ಟೆಸ್ಟ್‌ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಗೆದ್ದು ಪ್ರಶಸ್ತಿ ಮುಡುಗೇರಿಸಿಕೊಂಡಿತು. ಆ ಮೂಲಕ ರೌಂಡ್‌ ರಾಬಿನ್‌ ಲೀಗ್‌ ಹಂತದಲ್ಲಿ ಸೋಲು ಅನುಭವಿಸಿದ್ದ ಹರ್ಮನ್‌ಪ್ರೀತ್‌ ಸಿಂಗ್‌ ಪಡೆ ಕಿವೀಸ್‌ ವಿರುದ್ಧ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಬುಧವಾರ ಅಮೋಘ ಕೌಶಲ ತೋರಿದ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌(7ನೇ ನಿ.), ಶಂಶರ್ ಸಿಂಗ್ (18ನೇ ನಿ.), ನೀಲಕಾಂತ ಶರ್ಮಾ(22ನೇ ನಿ.), ಗುರುಸಬ್ಜೀತ್‌ ಸಿಂಗ್‌ (26ನೇ ನಿ.) ಹಾಗೂ ಮಂದೀಪ್‌ ಸಿಂಗ್‌ (27ನೇ ನಿ.) ಅವರು ಗಳಿಸಿದ ಐದು ಗೋಲುಗಳ ನೆರವಿನಿಂದ ಭಾರತ 5-2 ಅಂತರದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಭರ್ಜರಿ ಸಾಧಿಸಿ ಚಾಂಪಿಯನ್‌ ಆಯಿತು.

ರೌಂಡ್‌ ರಾಬಿನ್‌ ಹಂತದಲ್ಲಿ ಭಾರತವನ್ನು ಮಣಿಸಿದ್ದ ಆತ್ಮವಿಶ್ವಾಸದಲ್ಲಿ ಕಣಕ್ಕೆ ಇಳಿದಿದ್ದ ನ್ಯೂಜಿಲೆಂಡ್‌ಗೆ ಭಾರತ ಆರಂಭದಲ್ಲೇ ಆಘಾತ ನೀಡಿತ್ತು. ಏಳನೇ ನಿಮಿಷದಲ್ಲೇ ಸಿಕ್ಕ ಪೆನಾಲ್ಟಿಯನ್ನು ಸದುಪಯೋಗಪಡಿಸಿಕೊಂಡ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ತಮ್ಮ ಡ್ರ್ಯಾಗ್‌ ಪ್ಲಿಕ್‌ ಮೂಲಕ ಭಾರತಕ್ಕೆ ಗೋಲಿನ ಖಾತೆ ತೆರೆದರು. ಆ ಮೂಲಕ ಮೊದಲ ಕ್ವಾರ್ಟರ್‌ ಮುಕ್ತಾಯಕ್ಕೆ ಭಾರತ 1-0 ಮುನ್ನಡೆ ಪಡೆಯಿತು.

ಮುನ್ನಡೆಯ ಖುಷಿಯಲ್ಲಿದ್ದ ಭಾರತಕ್ಕೆ ಮತ್ತೊಂದು ಅದೃಷ್ಟದ ಬಾಗಿಲು ತೆರೆಯಿತು. 18ನೇ ನಿಮಿಷದಲ್ಲಿ ಸಿಕ್ಕ ಇನ್ನೊಂದು ಪೆನಾಲ್ಟಿ ಕಾರ್ನರ್‌ನಲ್ಲಿ ಶಂಶರ್‌ ಸಿಂಗ್ ಅವರು ಗೋಲು ಗಳಿಸಿ ಭಾರತಕ್ಕೆ 2-0 ಮುನ್ನಡೆ ತಂದುಕೊಟ್ಟರು. ನ್ಯೂಜಿಲೆಂಡ್‌ ತಂಡ ಎರಡು ಬಾರಿ ಡಿ ಸರ್ಕಲ್‌ ಒಳಗೆ ಪ್ರವೇಶಿಸಿದ್ದು ಬಿಟ್ಟರೆ ಗೋಲು ಗಳಿಸಲು ಮನಸ್ಸು ಮಾಡಲಿಲ್ಲ. ಆದರೆ, ಭಾರತ ಮಾತ್ರ ಇನ್ನೂ ಮೂರು ಗೋಲು ದಾಖಲಿಸಿತು.

ಗುರುಸಬ್ಜೀತ್‌ ಹಾಗೂ ಮಂದೀಪ್‌ ಅವರು ಶೀಘ್ರ ಗೋಲುಗಳಿಗೂ ಮುನ್ನ ನೀಲಕಾಂತ್ ಅವರು 22ನೇ ನಿಮಿಷದಲ್ಲಿ ಚೆಂಡನ್ನು ಗೋಲು ಪಟ್ಟಿಗೆ ಕಳುಹಿಸುವಲ್ಲಿ ಯಶಸ್ವಿಯಾದರು. ಕೇವಲ ನಾಲ್ಕು ನಿಮಿಷಗಳ ಅಂತರದಲ್ಲಿ ಎದುರಾಳಿ ರಕ್ಷಣಾ ಆಟಗಾರರನ್ನು ವಂಚಿಸಿ ವಿವೇಕ್‌ ಪ್ರಸಾದ್‌ ನೀಡಿದ ಪಾಸ್‌ ಅನ್ನು ಸದುಪಯೋಗಪಡಿಸಿಕೊಂಡ ಗುರುಸಬ್ಜೀತ್‌(26ನೇ ನಿ.) ಭಾರತಕ್ಕೆ ನಾಲ್ಕನೇ ಗೋಲು ತಂದುಕೊಟ್ಟರೆ, ಬಳಿಕ, ಮೊದಲಾವಧಿ ಮುಕ್ತಾಯಕ್ಕೂ ಮುನ್ನ ಮಂದೀಪ್‌ ಸಿಂಗ್‌(27ನೇ ನಿ.) ಅವರು ಪೆನಾಲ್ಟಿ ಕಾರ್ನರ್‌ ಅನ್ನು ಗೋಲಾಗಿ ಮಾರ್ಪಾಡು ಮಾಡಿದರು.

ಎರಡನೇ ಅವಧಿಗೆ ತೀವ್ರ ಒತ್ತಡದಲ್ಲಿ ಕಣಕ್ಕೆ ಇಳಿದ ಎದುರಾಳಿ ನ್ಯೂಜಿಲೆಂಡ್‌ ಎರಡು ಬಾರಿ ಉತ್ತಮ ಹೊಡೆತಗಳನ್ನು ಬಾರಿಸಿದ್ದರು. ಮೂರನೇ ಕ್ವಾರ್ಟರ್‌ನಲ್ಲಿ 37ನೇ ನಿಮಿಷದಲ್ಲಿ ಕಿವೀಸ್‌ ಸಿಡಿಸಿದ ಶಾಟ್‌ ಪೋಸ್ಟ್‌ಗಿಂತ ಕೊಂಚ್‌ ದೂರವಾಗಿ ಹೊರ ನಡೆಯಿತು. ನಂತರ, ಮುಂದಿನ ನಿಮಿಷದಲ್ಲೇ ಪೆನಾಲ್ಟಿ ಕಾರ್ನರ್‌ ಅನ್ನು ಭಾರತದ ಜರ್ಮನ್‌ಪ್ರೀತ್‌ ಸಿಂಗ್‌ ಅವರು ಉಳಿಸಿಕೊಂಡರು. ಮೂರನೇ ಹಾಗೂ ಅಂತಿಮ ಕ್ವಾರ್ಟರ್‌ ನಲ್ಲಿಯೂ ನ್ಯೂಜಿಲೆಂಡ್‌ ಗೋಲು ಗಳಿಸುವಲ್ಲಿ ವಿಫಲವಾಯಿತು. ಅಂತಿಮವಾ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com