ರಾಷ್ಟ್ರೀಯ ಕ್ರೀಡಾದಿನ: ಪ್ಯಾರಾ ಅಥ್ಲೀಟ್ ದೀಪಾ ಮಲಿಕ್ ಗೆ 'ಖೇಲ್ ರತ್ನ', ಹಲವು ಸಾಧಕರಿಗೆ ಕ್ರೀಡಾ ಪ್ರಶಸ್ತಿ ಪ್ರಧಾನ

ಪ್ಯಾರಾ ಅಥ್ಲೀಟ್ ದೀಪಾ ಮಲಿಕ್ ಅವರಿಗೆ ಗುರುವಾರ ಭಾರತದ ಅತ್ಯುನ್ನತ ಕ್ರೀಡಾ ಪ್ರಶಸ್ತಿ  ರಾಜೀವ್ ಗಾಂಧಿ ಖೇಲ್ ರತ್ನ ಪ್ರಧಾನ ಮಾಡಲಾಗಿದೆ. ಈ ಮೂಲಕ ದೀಪಾ ಅತ್ಯುನ್ನತ ಪ್ರಶಸ್ತಿ ಪಡೆದ ಮೊದಲ ಮಹಿಳಾ ಪ್ಯಾರಾ-ಅಥ್ಲೀಟ್  ಎನಿಸಿದ್ದಾರೆ.

Published: 29th August 2019 07:22 PM  |   Last Updated: 29th August 2019 07:22 PM   |  A+A-


ದೀಪಾ ಮಲಿಕ್ ಗೆ ಖೇಲ್ ರತ್ನ ಪ್ರಶಸ್ತಿ ಪ್ರಧಾನ

Posted By : raghavendra
Source : The New Indian Express

ನವದೆಹಲಿ: ಪ್ಯಾರಾ ಅಥ್ಲೀಟ್ ದೀಪಾ ಮಲಿಕ್ ಅವರಿಗೆ ಗುರುವಾರ ಭಾರತದ ಅತ್ಯುನ್ನತ ಕ್ರೀಡಾ ಪ್ರಶಸ್ತಿ  ರಾಜೀವ್ ಗಾಂಧಿ ಖೇಲ್ ರತ್ನ ಪ್ರಧಾನ ಮಾಡಲಾಗಿದೆ. ಈ ಮೂಲಕ ದೀಪಾ ಅತ್ಯುನ್ನತ ಪ್ರಶಸ್ತಿ ಪಡೆದ ಮೊದಲ ಮಹಿಳಾ ಪ್ಯಾರಾ-ಅಥ್ಲೀಟ್  ಎನಿಸಿದ್ದಾರೆ. ಆದರೆ ಖೇಲ್ ರತ್ನ [ಪ್ರಶಸ್ತಿಗೆ ಭಾಜನರಾಗಿದ್ದ ಇನ್ನೋರ್ವ ಆಟಗಾರ ಕುಸ್ತಿಪಟು ಬಜರಂಗ್ ಉನಿಯಾ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ಬಜರಂಗ್ ಮುಂಬರುವ ವಿಶ್ವ ಚಾಂಪಿಯನ್‌ಶಿಪ್‌ಗೆ ಸಿದ್ಧರಾಗಲು ರಷ್ಯಾದಲ್ಲಿರುವ ಕಾರಣ ಕಾರ್ಯಕ್ರಮಕ್ಕೆ ಬರಲಾಗಲಿಲ್ಲ.

2016 ರ ರಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಶಾಟ್ ಪುಟ್ ಎಫ್ 53 ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಭಾರತಕ್ಕೆ ಹೆಮ್ಮೆ ತಂದಿದ್ದ ದೀಪಾ ಅವರಿಗೆ ಈ ಸಾಲಿನ ಖೇಲ್ ರತ್ನ ಪ್ರಶಸ್ತಿ ಸಂದಿದೆ.

 2017 ರಲ್ಲಿ ಡಬಲ್ ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ ಜಾವೆಲಿನ್ ಎಸೆತಗಾರ ದೇವೇಂದ್ರ ಝಝಾರಿಯಾ ಬಳಿಕ ಖೇಲ್ ರತ್ನ ಪಡೆಯುತ್ತಿರುವ ಎರಡನೇ ಪ್ಯಾರಾ-ಅಥ್ಲೀಟ್ ದೀಪಾ ಮಲಿಕ್ ಅವರಾಗಿದ್ದಾರೆ.ಇದಲ್ಲದೆ 49ನೇ ವರ್ಷ ಈ ಪ್ರಶಸ್ತಿ ಪಡೆಯುವ ಮೂಲಕ ಅತ್ಯುನ್ನತ ಗೌರವ ಪಡೆದ ಹಿರಿಯ ಆಟಗಾರ್ತಿ ಎನಿಸಿದ್ದಾರೆ.

ವಿಶ್ವ ಚಾಂಪಿಯನ್‌ಶಿಪ್‌ನ ಕಂಚಿನ ಪದಕ ವಿಜೇತ ಬಿ. ಸಾಯಿ ಪ್ರಣೀತ್, ಮಹಿಳಾ ಕ್ರಿಕೆಟರ್ ಪೂನಂ ಯಾದವ್, ಏಷ್ಯನ್ ಗೇಮ್ಸ್ ಚಿನ್ನ ವಿಜೇತೆ ಸಪ್ನಾ ಬರ್ಮನ್, ಫುಟ್ಬಾಲ್ ಆಟಗಾರ ಗುರ್ಪ್ರೀತ್ ಸಿಂಗ್ ಸಂಧು, ಸೇರಿ 19 ಕ್ರೀಡಾಪಟುಗಳಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅರ್ಜುನ ಪ್ರಶಸ್ತಿ ನೀಡಿ ಸನ್ಮಾನಿಸಿದ್ದಾರೆ.

ಪುನಿಯಾ ಹೊರತುಪಡಿಸಿ ಈ ಕಾರ್ಯಕ್ರಮಕ್ಕೆ ಗೈರು ಹಾಜರಾದ ಪ್ರಮುಖ ಆಟಗಾರರೆಂದರೆ ಕ್ರಿಕೆಟಿಗ ರವೀಂದ್ರ ಜಡೇಜಾ, ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಶಾಟ್ ಪುಟರ್ ತೇಜಿಂದರ್ ಪಾಲ್ ಸಿಂಗ್ ಹಾಗೂ ಮೊಹಮ್ಮದ್ ಅನಸ್, ಇವರೆಲ್ಲರೂ ಈ ವರ್ಷದ ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಹಾಕಿ ದಂತಕಥೆ ಮೇಜರ್ ಧ್ಯಾನ್ ಚಂದ್ ಅವರ ಜನ್ಮ ದಿನಾಚರಣೆಯ ನೆನಪಿಗಾಗಿ ಪ್ರತಿವರ್ಷ ಆಗಸ್ಟ್ 29 ರಂದು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ಖೇಲ್ ರತ್ನ ಪ್ರಶಸ್ತಿ 7.5 ಲಕ್ಷ ರೂ.ಗಳ ಬಹುಮಾನ ಹೊಂದಿದ್ದರೆ ಅರ್ಜುನ ಪ್ರಶಸ್ತಿ  ತಲಾ 5 ಲಕ್ಷ ರೂ.ನಗದನ್ನು ಒಳಗೊಂಡಿರಲಿದೆ.

ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಗಳಲ್ಲದೆ ರಾಷ್ಟ್ರಪತಿಗಳು ದ್ರೋಣಾಚಾರ್ಯ ಮತ್ತು ಧ್ಯಾನ್ ಚಂದ್ ಪ್ರಶಸ್ತಿಗಳನ್ನು ತರಬೇತುದಾರರಿಗೆ ನೀಡಿದರು, 

ಈ ಸಾಲಿನ ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ಪಟ್ಟಿ ಹೀಗಿದೆ-

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ: ದೀಪಾ ಮಲಿಕ್ (ಪ್ಯಾರಾ-ಅಥ್ಲೆಟಿಕ್ಸ್), ಭಜರಂಗ್ ಪುನಿಯಾ (ಕುಸ್ತಿ)

ಅರ್ಜುನ ಪ್ರಶಸ್ತಿಗಳು: ರವೀಂದ್ರ ಜಡೇಜಾ (ಕ್ರಿಕೆಟ್), ಮೊಹಮ್ಮದ್ ಅನಸ್ ಯಾಹಿಯಾ (ಅಥ್ಲೆಟಿಕ್ಸ್), ಗುರ್‌ಪ್ರೀತ್ ಸಿಂಗ್ ಸಂಧು (ಫುಟ್‌ಬಾಲ್), ಸೋನಿಯಾ ಲೆದರ್ (ಬಾಕ್ಸಿಂಗ್), ಚಿಂಗ್ಲೆನ್ಸಾನಾ ಸಿಂಗ್ ಕಂಗುಜಮ್ (ಹಾಕಿ), ಎಸ್ ಭಾಸ್ಕರನ್ (ಬಾಡಿಬಿಲ್ಡಿಂಗ್), ಅಜಯ್ ಠಾಕೂರ್ (ಕಬದ್ದಿ) (ಶೂಟಿಂಗ್), ಬಿ ಸಾಯಿ ಪ್ರಣೀತ್ (ಬ್ಯಾಡ್ಮಿಂಟನ್), ತಾಜಿಂದರ್ ಪಾಲ್ ಸಿಂಗ್ ಟೂರ್ (ಅಥ್ಲೆಟಿಕ್ಸ್), ಪ್ರಮೋದ್ ಭಗತ್ (ಪ್ಯಾರಾ ಸ್ಪೋರ್ಟ್ಸ್-ಬ್ಯಾಡ್ಮಿಂಟನ್), ಹರ್ಮೀತ್ ರಾಜುಲ್ ದೇಸಾಯಿ (ಟೇಬಲ್ ಟೆನಿಸ್), ಪೂಜಾ ಧಂಡಾ (ಕುಸ್ತಿ), ಫೌದ್ ಮಿರ್ಜಾ (ಕುದುರೆ ಸವಾರಿ), ಸಿಮ್ರಾನ್ ಸಿಂಗ್ ಶೆರ್ಗಿಲ್ (ಪೊಲೊ), ಪೂನಮ್ ಯಾದವ್ (ಕ್ರಿಕೆಟ್), ಸ್ವಪ್ನಾ ಬರ್ಮನ್ (ಅಥ್ಲೆಟಿಕ್ಸ್), ಸುಂದರ್ ಸಿಂಗ್ ಗುರ್ಜರ್ (ಪ್ಯಾರಾ ಸ್ಪೋರ್ಟ್ಸ್-ಅಥ್ಲೆಟಿಕ್ಸ್) ಮತ್ತು ಗೌರವ್ ಸಿಂಗ್ ಗಿಲ್ (ಮೋಟಾರ್ ಸ್ಪೋರ್ಟ್ಸ್).

ದ್ರೋಣಾಚಾರ್ಯ ಪ್ರಶಸ್ತಿ (ನಿಯಮಿತ ವಿಭಾಗ): ಮೊಹಿಂದರ್ ಸಿಂಗ್ ಧಿಲ್ಲಾನ್ (ಅಥ್ಲೆಟಿಕ್ಸ್), ಸಂದೀಪ್ ಗುಪ್ತಾ (ಟೇಬಲ್ ಟೆನಿಸ್) ಮತ್ತು ವಿಮಲ್ ಕುಮಾರ್ (ಬ್ಯಾಡ್ಮಿಂಟನ್).

ದ್ರೋಣಾಚಾರ್ಯ ಪ್ರಶಸ್ತಿ (ಜೀವಮಾನದ ವಿಭಾಗ): ಸಂಜಯ್ ಭರದ್ವಾಜ್ (ಕ್ರಿಕೆಟ್), ರಂಬೀರ್ ಸಿಂಗ್ ಖೋಕರ್ (ಕಬಡ್ಡಿ) ಮತ್ತು ಮೆಜ್ಬಾನ್ ಪಟೇಲ್ (ಹಾಕಿ)

ಧ್ಯಾನ್ ಚಂದ್ ಪ್ರಶಸ್ತಿ: ಮನೋಜ್ ಕುಮಾರ್ (ಕುಸ್ತಿ), ಸಿ ಲಾಲ್ರೆಮ್ಸಂಗಾ (ಬಿಲ್ಲುಗಾರಿಕೆ), ಅರೂಪ್ ಬಸಕ್ (ಟೇಬಲ್ ಟೆನಿಸ್), ನಿಟ್ಟನ್ ಕಿರ್ಟಾನೆ (ಟೆನಿಸ್) ಮತ್ತು ಮ್ಯಾನುಯೆಲ್ ಫ್ರೆಡ್ರಿಕ್ಸ್ (ಹಾಕಿ).


Stay up to date on all the latest ಕ್ರೀಡೆ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp