ಪಾಕಿಸ್ತಾನ ವಿರುದ್ಧ ಡೆವಿಸ್ ಕಪ್ ಗೆಲುವನ್ನು ಸೇನೆಗೆ ಅರ್ಪಿಸಿದ ಸುಮಿತ್ ನಗಾಲ್  

ಪಾಕಿಸ್ತಾನ ವಿರುದ್ಧದ ಡೆವಿಸ್ ಕಪ್ ಗೆಲುವನ್ನು ಭಾರತ ತಂಡದ ಸಿಂಗಲ್ಸ್ ಆಟಗಾರ ಸುಮಿತ್ ನಗಾಲ್ ಅವರು ಭಾರತೀಯ ಸೇನೆ ಹಾಗೂ ಅವರ ಕುಟುಂಬಕ್ಕೆ ಅರ್ಪಿಸಿದ್ದಾರೆ.

Published: 01st December 2019 10:50 AM  |   Last Updated: 01st December 2019 10:57 AM   |  A+A-


Sumit nagal1

ಸುಮಿತ್ ನಗಲ್

Posted By : Nagaraja AB
Source : ANI

ನವದೆಹಲಿ: ಪಾಕಿಸ್ತಾನ ವಿರುದ್ಧದ ಡೆವಿಸ್ ಕಪ್ ಗೆಲುವನ್ನು ಭಾರತ ತಂಡದ ಸಿಂಗಲ್ಸ್ ಆಟಗಾರ ಸುಮಿತ್ ನಗಾಲ್ ಅವರು ಭಾರತೀಯ ಸೇನೆ ಹಾಗೂ ಅವರ ಕುಟುಂಬಕ್ಕೆ ಅರ್ಪಿಸಿದ್ದಾರೆ.

ಪಾಕ್ ವಿರುದ್ಧದ ಪಂದ್ಯದಲ್ಲಿ ಭಾರತ ತೋರಿದ ಸಂಘಟಿತ ಪ್ರದರ್ಶನದಲ್ಲಿ ಕೇವಲ ಏಳು ಗೇಮ್‍ಗಳನ್ನು ಮಾತ್ರ ಬಿಟ್ಟುಕೊಟ್ಟಿತ್ತು. ಇನ್‍ಸ್ಟಾಗ್ರಾಮ್ ನಲ್ಲಿ ತಂಡದ ಫೋಟೊ ಶೇರ್ ಮಾಡಿರುವ ಸುಮಿತ್, "ಈ ಗೆಲುವು ತಮ್ಮ ಜೀವನವನ್ನು ಕೈಯಲ್ಲಿಟ್ಟುಕೊಂಡು ನಮ್ಮನ್ನು ರಕ್ಷಣೆ ಮಾಡುತ್ತಿರುವ ಭಾರತೀಯ ಸೇನೆ ಹಾಗೂ ಅವರ ಕುಟುಂಬಕ್ಕೆ ಅರ್ಪಣೆ." ಎಂದು ಶಿರ್ಷಿಕೆ ಬರೆದಿದ್ದಾರೆ. 

ಪಾಕಿಸ್ತಾನ ವಿರುದ್ಧ 4-0 ಅಂತರದಲ್ಲಿ ಗೆಲುವು ಪಡೆದಿರುವ ಈ ವಾರ ಎಂತಹ ಅತ್ಯುತ್ಸಾಹಿಕವಾಗಿದೆ. ಪಂದ್ಯವೀಡಿ ಕೇವಲ 7 ಗೇಮ್‍ಗಳಲ್ಲಿ ನಾವು ಸೋಲು ಅನುಭವಿಸಿದ್ದೆವು. ತಂಡದಲ್ಲಿ ಇರುವವರೆಲ್ಲರೂ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. 

ತಾನು ಡೆವಿಸ್ ಕಪ್ ಚೊಚ್ಚಲ ಪಂದ್ಯದಲ್ಲೇ ಗೆಲುವು ಸಿಕ್ಕಿದೆ. ಇದಕ್ಕೆ ಅವಕಾಶ ಕಲ್ಪಿಸಿ ಸಹಕರಿಸಿದ ಭಾರತಕ್ಕೆ ಧನ್ಯವಾದಗಳನ್ನು ಅರ್ಪಿಸಲು ಇಚ್ಚಿಸುತ್ತೇನೆ." ಎಂದು ಸುಮಿತ್ ಸಂತಸ ವ್ಯಕ್ತಪಡಿಸಿದ್ದಾರೆ. 

 

Stay up to date on all the latest ಕ್ರೀಡೆ news
Poll
HD Kumaraswamy

ಹಿಂದಿ ಗೊತ್ತಿರುವುದರಿಂದ ರಾಷ್ಟ್ರ ರಾಜಕಾರಣದಲ್ಲಿ ಉತ್ತರ ಭಾರತದ ನಾಯಕರಿಗೆ ದಕ್ಷಿಣದವರಿಗಿಂತ ಹೆಚ್ಚಿನ ಪ್ರಯೋಜನ ಆಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp