ದಕ್ಷಿಣ ಏಷ್ಯಾ ಕ್ರೀಡಾಕೂಟ:10 ಮೀ. ಏರ್ ರೈಫಲ್ಸ್ ನಲ್ಲಿ ಮೆಹುಲಿಗೆ ಸ್ವರ್ಣ,ಪದಕಗಳ ಕ್ಲೀನ್ ಸ್ವೀಪ್ ಮಾಡಿದ ಭಾರತ

 13 ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ನಡೆದ ಮಹಿಳಾ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತೀಯ ಶೂಟರ್‌ಗಳು ಎಲ್ಲಾ ಪದಕಗಳನ್ನೂ ತಮ್ಮ ಕೊರಳಿಗೆ ಹಾಕಿಕೊಳ್ಳುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದಾರೆ. 
ಮೆಹುಲಿ ಘೋಷ್
ಮೆಹುಲಿ ಘೋಷ್

ಪೋಖರಾ (ನೇಪಾಳ): 13 ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ನಡೆದ ಮಹಿಳಾ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತೀಯ ಶೂಟರ್‌ಗಳು ಎಲ್ಲಾ ಪದಕಗಳನ್ನೂ ತಮ್ಮ ಕೊರಳಿಗೆ ಹಾಕಿಕೊಳ್ಳುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಇದರಲ್ಲಿ ಮೆಹುಲಿ ಘೋಷ್ ವಿಶ್ವದಾಖಲೆಯನ್ನು ಮೀರಿ ಸ್ವರ್ಣ ಪದಕ ವಿಜೇತೆಯಾಗಿದ್ದಾರೆ.

19 ವರ್ಷದ ಮೆಹುಲಿ ಫೈನಲ್‌ನಲ್ಲಿ 253.3 ಅಂಕಗಳೊಂದಿಗೆ ಚಿನ್ನ ಗೆದ್ದಿದ್ದಾರೆ, ಇದು ಪ್ರಸ್ತುತ ವಿಶ್ವ ದಾಖಲೆಯ 252.9 ಗಿಂತ 0.4 ಹೆಚ್ಚಾಗಿದೆ,  ಪ್ರಸ್ತುತ ಈ ವಿಶ್ವ ದಾಖಲೆ ಇನ್ನೊಬ್ಬ ಭಾರತೀಯ ಶೂಟರ್ ಅಪೂರ್ವಿ ಚಾಂಡೇಲಾ ಅವರ ಹೆಸರಲ್ಲಿದೆ.

ಆದರೆ ದಕ್ಷಿಣ ಏಷ್ಯಾ ಕ್ರೀಡಾಕೂಟದ ಫಲಿತಾಂಶಗಳನ್ನು ದಾಖಲೆಗಳ ಉದ್ದೇಶಕ್ಕಾಗಿ ಅಂತರರಾಷ್ಟ್ರೀಯ ಸಂಸ್ಥೆ (ಐಎಸ್‌ಎಸ್‌ಎಫ್) ಗುರುತಿಸದ ಕಾರಣ ಮೆಹುಲಿಯ ಪ್ರಯತ್ನವನ್ನು ವಿಶ್ವ ದಾಖಲೆಯೆಂದು ಪರಿಗಣಿಸಲಾಗುವುದಿಲ್ಲ.

ಇದೇ ವಿಭಾಗದಲ್ಲಿ ಶ್ರೀಯಂಕಾ ಸದಂಗಿ 250.8 ಅಂಕಗಳೊಂದಿಗೆ ಬೆಳ್ಳಿ,  ಶ್ರೇಯ ಅಗ್ರವಾಲ್ (227.2) ಕಂಚಿಉನ ಪದಕ ಗಳಿಸಿದ್ದಾರೆ.

2018 ರ ಐಎಸ್‌ಎಸ್‌ಎಫ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮೆಹುಲಿ 10 ಮೀಟರ್ ಏರ್ ರೈಫಲ್ ಬೆಳ್ಳಿ ಗೆದ್ದಿದ್ದರು ಅಲ್ಲದೆ ಅವರು 2018 ರ ಕಾಮನ್ವೆಲ್ತ್ ಕ್ರೀಡಾಕೂಟ ಮತ್ತು ಯುವ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕಗಳನ್ನು ಗೆದ್ದಿದ್ದರು.

ಇಷ್ಟಾಗಿ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತ ಮಹಿಳಾ ತಂಡ ಸಹ ಚಿನ್ನದ ಪದಕ ಗೆದ್ದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com