ಉದ್ದೀಪನ ಮದ್ದು ಸೇವನೆ ವಿರುದ್ಧ ಅರಿವಿಗೆ ಮೊದಲ ಆದ್ಯತೆ-ನಾಡಾ ರಾಯಬಾರಿ ಸುನೀಲ್ ಶೆಟ್ಟಿ

ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ನಿರ್ಬಂಧ ಘಟಕ (ನಾಡಾ)ದ ರಾಯಬಾರಿಯಾಗಿ ನೇಮಕವಾದ ಬಾಲಿವುಡ್  ನಟ ಸುನೀಲ್ ಶೆಟ್ಟಿ ಉದ್ದೀಪನ ಸೇವನೆ ವಿರುದ್ಧ ಜಾಗೃತಿ ಮೂಡಿಸುವುದು ತಮ್ಮ ಮೊದಲ ಕೆಲಸವಾಗಿದೆ ಎಂದು ಹೇಳಿದ್ದಾರೆ
ಸುನೀಲ್ ಶೆಟ್ಟಿ
ಸುನೀಲ್ ಶೆಟ್ಟಿ

ನವದೆಹಲಿ: ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ನಿರ್ಬಂಧ ಘಟಕ (ನಾಡಾ)ದ ರಾಯಬಾರಿಯಾಗಿ ನೇಮಕವಾದ ಬಾಲಿವುಡ್  ನಟ ಸುನೀಲ್ ಶೆಟ್ಟಿ ಉದ್ದೀಪನ ಸೇವನೆ ವಿರುದ್ಧ ಜಾಗೃತಿ ಮೂಡಿಸುವುದು ತಮ್ಮ ಮೊದಲ ಕೆಲಸವಾಗಿದೆ ಎಂದು ಹೇಳಿದ್ದಾರೆ.

ಭಾರತ ಗೆಲ್ಲುವ ಪ್ರತಿಯೊಂದು ಪದಕಗಳು ತಮ್ಮಗೆ ಹೆಮ್ಮೆಯನ್ನುಂಟುಮಾಡುತ್ತವೆ. ಆದ್ದರಿಂದ ಯಾವುದೇ ರೀತಿಯ ಮದ್ದು ಸೇವನೆ ಮಾಡದಂತೆ ಅಗತ್ಯ ಜಾಗೃತಿ ಮೂಡಿಸುವುದು ತಮ್ಮ ಮೊದಲ ಆದ್ಯತೆಯಾಗಿದೆ. ದೇಶದ ಅಗೌರವಕ್ಕೆ ಕಾರಣವಾಗುವ ಇಂತಹ ಮಾದಕ ವಸ್ತು ಸೇವನೆ ತಡೆಗಟ್ಟಲು ನಾಡಾದಲ್ಲಿ ಅತ್ಯುತ್ತಮ ರೀತಿಯ ಉಪಕರಣಗಳನ್ನು ಹೊಂದಿರುವುದಾಗಿ ತಿಳಿಸಿದರು.

ಮಾದಕ ವಸ್ತು ಮುಕ್ತದಿಂದ ಕ್ರೀಡಾಪಟುಗಳ ಕಾರ್ಯಕ್ಷಮತೆ ಹೆಚ್ಚಾಗಲಿದೆ. ನಾನು ಯಾವುದೇ ಕ್ರೀಡಾಪುಟು ಅಲ್ಲ. ಆದರೆ, ಈ ವಯಸ್ಸಿನಲ್ಲೂ  ಯಾವುದೇ ಕ್ರೀಡೆಯನ್ನಾದರೂ ಆಡುತ್ತೇನೆ.  ಪೌಷ್ಟಿಕಾಂಶದ ಬಗ್ಗೆ ಹೆಚ್ಚಾದ ತಿಳುವಳಿಕೆ ಹೊಂದಿದ್ದೇನೆ. ನಿಮ್ಮ ಕಾರ್ಯದಕ್ಷತೆ ಹೆಚ್ಚಾಗುವಲ್ಲಿ ಪೌಷ್ಟಿಕಾಂಶ ಪ್ರಭಾವ ಬೀರಲಿದೆ ಎಂದು ಸುನೀಲ್ ಶೆಟ್ಟಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com