ಕತಾರ್ ಇಂಟರ್ ನ್ಯಾಷನಲ್ ಕಪ್: ವೆಯ್ಟ್ ಲಿಫ್ಟಿಂಗ್ ನಲ್ಲಿ ಚಿನ್ನ ಗೆದ್ದ ಭಾರತದ ಮೀರಾಬಾಯಿ ಚಾನು

6ನೇ ಕತಾರ್ ಇಂಟರ್ ನ್ಯಾಷನಲ್ ಟೂರ್ನಿಯಲ್ಲಿ ಭಾರತ ಪದಕಗಳ ಖಾತೆ ತೆರೆದಿದ್ದು, ಮಾಜಿ ವಿಶ್ವ ಚಾಂಪಿಯನ್ ವೆಯ್ಟ್ ಲಿಫ್ಟರ್   ಸೈಖೋಮ್ ಮೀರಾಬಾಯಿ ಚಾನು ಮಹಿಳೆಯರ 49 ಕೆಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.
ಮೀರಾಬಾಯಿ ಚಾನು
ಮೀರಾಬಾಯಿ ಚಾನು

ದೋಹಾ:  6ನೇ ಕತಾರ್ ಇಂಟರ್ ನ್ಯಾಷನಲ್ ಟೂರ್ನಿಯಲ್ಲಿ ಭಾರತ ಪದಕಗಳ ಖಾತೆ ತೆರೆದಿದ್ದು, ಮಾಜಿ ವಿಶ್ವ ಚಾಂಪಿಯನ್ ವೆಯ್ಟ್ ಲಿಫ್ಟರ್  ಸೈಖೋಮ್ ಮೀರಾಬಾಯಿ ಚಾನು ಮಹಿಳೆಯರ 49 ಕೆಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.

ಒಲಿಂಪಿಕ್ ಅರ್ಹತಾ ಸ್ಪರ್ಧೆಯಲ್ಲಿ ಚಾನು 194 ಕೆಜಿ ಭಾರ ಎತ್ತುವ ಪ್ರಯತ್ನದೊಂದಿಗೆ ಚಿನ್ನ ಪಡೆದುಕೊಂಡಿದ್ದರು. 2020ರ ಟೊಕಿಯೊ ಒಲಿಂಪಿಕ್ ಸ್ಪರ್ಧೆಗಾಗಿ ಅಂತಿಮ ಪಟ್ಟಿಯಲ್ಲಿ ಈ ಅಂಕಗಳು ನೆರವಾಗಲಿವೆ. 

ಮಣಿಪುರದ 25 ವರ್ಷದ ಚಾನು, 83 ಕೆಜಿ ಸ್ನ್ಯಾಚ್ ಹಾಗೂ 111 ಕೆಜಿ ಕ್ಲೀನ್ ಜೆರ್ಕ್ ಭಾರ ಎತ್ತುವುದರೊಂದಿಗೆ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ಆದಾಗ್ಯೂ, ಇದು ಅವರ ವೈಯಕ್ತಿಕ ಅತ್ಯುತ್ತಮ  201 ಕೆಜಿ ಸಾಧನೆಗಿಂತ  ಕಡಿಮೆ ಸಾಧನೆಯಾಗಿದೆ.

ಮೊದಲ ಪ್ರಯತ್ನದಲ್ಲಿ ಕ್ಲೀನ್ ಮತ್ತು ಜೆರ್ಕ್ ವಿಭಾಗದಲ್ಲಿ ಚಾನು 111 ಕೆಜಿ ಭಾರ ಎತ್ತಿದ್ದರು. ಆದರೆ ತನ್ನ ಅಂತಿಮ ಎರಡು ಪ್ರಯತ್ನಗಳಲ್ಲಿ 115 ಕೆಜಿ ಮತ್ತು 116 ಕೆಜಿ ತೂಕವನ್ನು ಹೊಂದಲು ಸಾಧ್ಯವಾಗಲಿಲ್ಲ.

ಫ್ರೆಂಚ್ ಆಟಗಾರರಾದ ಅನೈಸ್ ಮೈಕೆಲ್ ( 172 ಕೆಜಿ) ಮನೋನ್ ಲೊರೆಂಟ್ಜ್ ( 165 ಕೆಜಿ) ಭಾರ ಎತ್ತುವುದರೊಂದಿಗೆ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕವನ್ನು ಪಡೆದುಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com